ಅಸ್ಸಾಂ: ಸರ್ಕಾರಿ ನೌಕರರು ತಮ್ಮ ಪೋಷಕರನ್ನು ನಿರ್ಲಕ್ಷಿಸಿದರೆ ಶೇ.10 ರಷ್ಟು ವೇತನ ಕಡಿತ

ಸರ್ಕಾರಿ ಉದ್ಯೋಗದಲ್ಲಿರುವವ ನೌಕರರು ತಮ್ಮ ಪೋಷಕರನ್ನು ನಿರ್ಲಕ್ಷಿಸಿದರೇ ಅವರ ವೇತನದಲ್ಲಿ ಶೇ.10 ರಷ್ಟು ಕಡಿತಗೊಳಿಸುವ ಮಸೂದೆ ಜಾರಿಗೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಗುವಾಹಟಿ: ಸರ್ಕಾರಿ ಉದ್ಯೋಗದಲ್ಲಿರುವವ ನೌಕರರು ತಮ್ಮ ಪೋಷಕರನ್ನು ನಿರ್ಲಕ್ಷಿಸಿದರೇ ಅವರ ವೇತನದಲ್ಲಿ ಶೇ.10 ರಷ್ಟು ಕಡಿತಗೊಳಿಸುವ ಮಸೂದೆ ಜಾರಿಗೆ ತರಲು ನಿರ್ಧರಿಸಿದೆ.
ತಮ್ಮ ಪೋಷಕರು, ಅಂಗವಿಕಲ ಒಡಹುಟ್ಟಿದವರನ್ನು ಪೋಷಣೆ ಮಾಡದ ಸರ್ಕಾರಿ ನೌಕರರ ವೇತನದಲ್ಲಿ ಶೇ. 10ರಷ್ಟು ಕಡಿತ ಮಾಡುವ ಸಂಬಂಧ ಮಸೂದೆ ಅಂಗೀಕರಿಸಲಾಗಿದೆ.
ಇಂತಹ ಮಸೂದೆ ದೇಶದಲ್ಲೇ ಮೊದಲು ಎನ್ನಲಾಗಿದೆ. ಹೀಗೆ ಕಡಿತ ಮಾಡುವ ಹಣವನ್ನು ಜೀವನ ನಿರ್ವಹಣೆಗಾಗಿ ಆಯಾ ನೌಕರರ ಪೋಷಕರು ಮತ್ತು ಅಂಗವಿಕಲ ಒಡಹುಟ್ಟಿದವರಿಗೆ ನೀಡಲಾಗುತ್ತದೆ.
ಮಸೂದೆಯನ್ನು ಮಂಡಿಸಿ ಮಾತನಾಡಿದ ಸಚಿವ ಹಿಮಂತ ಬಿಸ್ವ ಶರ್ಮಾ, ಮಕ್ಕಳು ತಮ್ಮ ಪೋಷಕರನ್ನು ಸರಿಯಾಗಿ ನೋಡಿಕೊಳ್ಳದ ಕಾರಣ ಅವರು ವೃದ್ಧಾಶ್ರಮಗಳಲ್ಲಿ ಜೀವನ ಸಾಗಿಸುವಂತಾಗಿದೆ ಎಂದು ಹೇಳಿದರು.
ನೌಕರರ ಖಾಸಗಿ ಜೀವನದಲ್ಲಿ ಹಸ್ತಕ್ಷೇಪ ಮಾಡಲು ಬಯಸುವುದಿಲ್ಲ, ಆದರೆ ಪೋಷಕರನ್ನು ನಿರ್ಲಕ್ಷಿಸುತ್ತಿರುವ ಸಂಬಂಧ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಅದನ್ನು ಸರಿ ಪಡಿಸುವುದು ಮಸೂದೆಯ ಉದ್ದೇಶ ಎಂದು ಹೇಳಲಾಗಿದೆ.
ಇನ್ನೂ ಈ ಮಸೂದೆಗೆ ವಿರೋದ ವ್ಯಕ್ತ ಪಡಿಸಿರುವ ಅಸ್ಸಾಂ ಕಾಂಗ್ರೆಸ್ ಮುಖಂಡ ತರುಣ್ ಗಗೋಯ್, ಅಸ್ಸಾಮಿಗಳ ಸಮಾಜಕ್ಕೆ ಮಾಡಿದ ಅವಮಾನ ಇದಾಗಿದೆ ಎಂದು ಟೀಕಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com