ರೊಹಿಂಗ್ಯಾ ಮುಸ್ಲಿಮರ ಮೇಲಿನ ದೌರ್ಜನ್ಯಕ್ಕೆ ಖಂಡನೆ: ಅಗರ್ತಲಾದಲ್ಲಿ ಪ್ರತಿಭಟನೆಗಿಳಿದ ಮುಸ್ಲಿಮರು
ರೊಹಿಂಗ್ಯಾ ಮುಸ್ಲಿಮರ ಮೇಲಿನ ದೌರ್ಜನ್ಯಕ್ಕೆ ಖಂಡನೆ: ಅಗರ್ತಲಾದಲ್ಲಿ ಪ್ರತಿಭಟನೆಗಿಳಿದ ಮುಸ್ಲಿಮರು

ರೊಹಿಂಗ್ಯಾ ಮುಸ್ಲಿಮರ ಮೇಲಿನ ದೌರ್ಜನ್ಯಕ್ಕೆ ಖಂಡನೆ: ಅಗರ್ತಲಾದಲ್ಲಿ ಪ್ರತಿಭಟನೆಗಿಳಿದ ಮುಸ್ಲಿಮರು

ಮ್ಯಾನ್ಸಮಾರ್ ನಲ್ಲಿ ರೊಹಿಂಗ್ಯಾ ಮುಸ್ಲಿಮರ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ತೀವ್ರ ಖಂಡನೆ ವ್ಯಕ್ತಪಡಿಸಿರುವ ಮುಸ್ಲಿಮರು ತ್ರಿಪುರದಲ್ಲಿ ಬೀದಿಗಿಳಿದು ಶುಕ್ರವಾರ ಪ್ರತಿಭಟನೆ ನಡೆಸಿದ್ದಾರೆ...
Published on
ಅಗರ್ತಲಾ: ಮ್ಯಾನ್ಸಮಾರ್ ನಲ್ಲಿ ರೊಹಿಂಗ್ಯಾ ಮುಸ್ಲಿಮರ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ತೀವ್ರ ಖಂಡನೆ ವ್ಯಕ್ತಪಡಿಸಿರುವ ಮುಸ್ಲಿಮರು ತ್ರಿಪುರದಲ್ಲಿ ಬೀದಿಗಿಳಿದು ಶುಕ್ರವಾರ ಪ್ರತಿಭಟನೆ ನಡೆಸಿದ್ದಾರೆ. 
ಮ್ಯಾನ್ಮಾರ್ ನಲ್ಲಿ ರೊಹಿಂಗ್ಯಾ ಮುಸ್ಲಿಮರ ನರಮೇಧ ಹಾಗೂ ದೌರ್ಜನ್ಯ ನಡೆಯುತ್ತಿದ್ದು, ಇದಕ್ಕೆ ತೀವ್ರ ಖಂಡನೆ ವ್ಯಕ್ತಪಡಿಸಿರುವ ತ್ರಿಪುರ ಜಮಿಯತ್ ಉಲೇಮಾ ಹಿಂದ್ ತ್ರಿಪುರ ಹಾಗೂ ಅಗರ್ತಲಾದಲ್ಲಿ ಪ್ರತಿಭಟನೆ ನಡೆಸುತ್ತಿದೆ. ಮ್ಯಾನ್ಮಾನ್ ನಾಯಕಿ ಆಂಗ್ ಸಾನ್ ಸು ಕಿ ವಿರುದ್ಧ ಘೋಷಣಾ ವಾಕ್ಯಗಳನ್ನು ಪ್ರದರ್ಶಿಸಿರುವ ಮುಸ್ಲಿಮರು, ನರಮೇಧವನ್ನು ನಿಲ್ಲಿಸಿ, ರೊಹಿಂಗ್ಯಾ ಮುಸ್ಲಿಮರ ಮೇಲೆ ದೌರ್ಜನ್ಯ ಕುರಿತಂತೆ ವಿಶ್ವಸಂಸ್ಥೆ ಮೌನ ಮುರಿಯಲಿ ಎಂದು ಘೋಷಣೆಗಳನ್ನು ಕೂಗಿದ್ದಾರೆ. 
ರೊಹಿಂಗ್ಯಾ ಮುಸ್ಲಿಮರ ಮೇಲೆ ನಡೆಯುತ್ತಿರುವ ಈ ರೀತಿಯ ದೌರ್ಜನ್ಯಗಳು ಬೇರಾವ ದೇಶದಲ್ಲೂ ನಡೆಯದಿರಲಿ ಎಂದು ನಾವು ಪ್ರಾರ್ಥಿಸುತ್ತೇವೆ. ವಿಶ್ವಸಂಸ್ಥೆ ಮಾನವ ಹಕ್ಕು ಆಯೋಗದಲ್ಲಿ ರೊಹಿಂಗ್ಯಾರಿಗೆ ನ್ಯಾಯ ದೊರಕಲಿ ಎಂದು ಪ್ರತಿಭಟನಾನಿರತರು ಹೇಳಿಕೊಂಡಿದ್ದಾರೆ. 
ರೊಹಿಂಗ್ಯಾರಿಗೆ ರಾಷ್ಟ್ರೀಯ ಹಕ್ಕು ದೊರೆಯಬೇಕು. ಬೇರೆ ಬೇರೆ ದೇಶಗಳಿಗೆ ವಲಸಿಗರಾಗಿ ಹೋಗಿರುವ ರೊಹಿಂಗ್ಯಾರು ಶಾಂತಿಯುತವಾಗಿ ತಮ್ಮ ದೇಶಕ್ಕೆ ಮರಳಲಿ.  ರೊಹಿಂಗ್ಯಾ ವಲಸಿಗರು ದೇಶದಲ್ಲಿರುವವರೆಗೂ ಅವರಿಗೆ ಆಶ್ರಯ ಹಾಗೂ ಆಹಾರ ಸೇರಿದಂತೆ ಇನ್ನಿತರೆ ವ್ಯವಸ್ಥೆಗಳನ್ನು ಭಾರತ ಹಾಗೂ ಬಾಂಗ್ಲಾದೇಶಗಳು ಮಾಡಬೇಕು ಎಂದು ಆಗ್ರಹಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com