ರಸ್ತೆಗಳ ದುರಸ್ತಿಗೆ 10 ದಿನಗಳ ಗಡುವು: ಬಿಬಿಎಂಪಿ ಇಂಜಿನಿಯರ್ ಗಳಿಗೆ ಹಗಲು ರಾತ್ರಿ ಕೆಲಸ

ಮುಂದಿನ 10 ದಿನಗಳೊಳಗೆ ನಗರದ ರಸ್ತೆಯಲ್ಲಿರುವ ಎಲ್ಲಾ ಗುಂಡಿಗಳನ್ನು ಮುಚ್ಚುವಂತೆ ಅಧಿಕಾರಿಗಳಿಗೆ ಬಿಬಿಎಂಪಿ ಆಯುಕ್ತ ಎಂ. ಮಂಜುನಾಥ್ ಪ್ರಸಾದ್ ಗಡುವು ನೀಡಿರುವ ಬೆನ್ನಲ್ಲೇ ಬಿಬಿಎಂಪಿ ಇಂಜಿನಿಯರ್...
ರಸ್ತೆ ದುರಸ್ತಿ ಕಾಮಗಾರಿ
ರಸ್ತೆ ದುರಸ್ತಿ ಕಾಮಗಾರಿ
ಬೆಂಗಳೂರು: ಮುಂದಿನ 10 ದಿನಗಳೊಳಗೆ ನಗರದ ರಸ್ತೆಯಲ್ಲಿರುವ ಎಲ್ಲಾ ಗುಂಡಿಗಳನ್ನು ಮುಚ್ಚುವಂತೆ ಅಧಿಕಾರಿಗಳಿಗೆ ಬಿಬಿಎಂಪಿ ಆಯುಕ್ತ ಎಂ. ಮಂಜುನಾಥ್ ಪ್ರಸಾದ್ ಗಡುವು ನೀಡಿರುವ ಬೆನ್ನಲ್ಲೇ ಬಿಬಿಎಂಪಿ ಇಂಜಿನಿಯರ್ ಗಳಿಗೆ ನಿದ್ರೆ ಇಲ್ಲದ ರಾತ್ರಿಗಳು ಪ್ರಾರಂಭವಾಗಿವೆ. 
ಹಗಲು ಕಚೇರಿಯ ಕೆಲಸಗಳನ್ನು ಮುಕ್ತಾಯಗೊಳಿಸಿದರೆ ರಾತ್ರಿಯ ವೇಳೆಯಲ್ಲಿ ರಸ್ತೆ ದುರಸ್ತಿ ಕಾಮಗಾರಿಗಳ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಎಡಬಿಡದೇ ಸುರಿದ ಮಳೆಯಿಂದಾಗಿ ರಸ್ತೆಗಳು ಹಾಳಾಗಿದ್ದು, ಮುಂದಿನ 10 ದಿನಗಳೊಳಗೆ ನಗರದ ರಸ್ತೆಯಲ್ಲಿರುವ ಎಲ್ಲಾ ಗುಂಡಿಗಳನ್ನು ಮುಚ್ಚುವಂತೆ ಅಧಿಕಾರಿಗಳಿಗೆ ಬಿಬಿಎಂಪಿ ಆಯುಕ್ತ ಎಂ. ಮಂಜುನಾಥ್ ಪ್ರಸಾದ್ ಗಡುವು ವಿಧಿಸಿದ್ದಾರೆ. 
ಮುಖ್ಯ ಇಂಜಿನಿಯರ್ ಗಳು(ಸಿಇ), ಕಾರ್ಯನಿರ್ವಾಹಕ ಇಂಜಿನಿಯರ್(ಇ.ಇ) ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ಎ.ಇ.ಇ) ಸಹಾಯಕ ಇಂಜಿನಿಯರ್(ಎ.ಇ) ಹಾಗೂ ಇತರ ಅಧಿಕಾರಿಗಳು ರಸ್ತೆ ಕಾಮಗಾರಿಯ ಮೇಲ್ವಿಚಾರಣೆ ನಡೆಸುತ್ತಿದ್ದು, ಬಳ್ಳಾರಿ ರಸ್ತೆಯಲ್ಲಿ ಮಧ್ಯರಾತ್ರಿ ರಸ್ತೆ ದುರಸ್ತಿ ಕಾಮಗಾರಿ ಕೈಗೊಂಡಿರುವುದಾಗಿ ಕಾರ್ಯನಿರ್ವಾಹಕ ಇಂಜಿನಿಯರ್ ಶಿವಪ್ರಕಾಶ್ ಕೆಎಂ ತಿಳಿಸಿದ್ದಾರೆ. 
ಬಳ್ಳಾರಿ ರಸ್ತೆ ಹೆಚ್ಚು ಜನರು ಸಂಚರಿಸುವ ರಸ್ತೆಯಾಗಿದ್ದು, ಹಗಲು ಟ್ರಾಫಿಕ್ ಹೆಚ್ಚಿರುವುದರಿಂದ ದುರಸ್ತಿ ಕಾಮಗಾರಿ ನಡೆಸಲು ಸಾಧ್ಯವಾಗುವುದಿಲ್ಲ ಎಂದು ಶಿವಪ್ರಕಾಶ್ ಮಾಹಿತಿ ನೀದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com