ವಿಶ್ವದ 2ನೇ ಅತೀ ದೊಡ್ಡ ಡ್ಯಾಮ್ ಸರ್ದಾರ್ ಸರೋವರ ಅಣೆಕಟ್ಟಿನ ಕುರಿತ ಒಂದಷ್ಟು ಕುತೂಹಲಕಾರಿ ಮಾಹಿತಿ

ವಿಶ್ವದ 2ನೇ ಅತೀ ದೊಡ್ಡ ಡ್ಯಾಮ್ ಎಂಬ ಕೀರ್ತಿಗೆ ಭಾಜನವಾಗಿರುವ ಸರ್ದಾರ್ ಸರೋವರ ಡ್ಯಾಮ್ ಭಾನುವಾರ ಉದ್ಘಾಟನೆಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅಣೆಕಟ್ಟನ್ನು ಲೋಕಾರ್ಪಣೆ ಮಾಡಿದ್ದಾರೆ.
ಡ್ಯಾಂ ಉದ್ಘಾಟನೆ ಮಾಡಿದ ಪ್ರಧಾನಿ
ಡ್ಯಾಂ ಉದ್ಘಾಟನೆ ಮಾಡಿದ ಪ್ರಧಾನಿ
Updated on
ಗಾಂಧಿನಗರ: ವಿಶ್ವದ 2ನೇ ಅತೀ ದೊಡ್ಡ ಡ್ಯಾಮ್ ಎಂಬ ಕೀರ್ತಿಗೆ ಭಾಜನವಾಗಿರುವ ಸರ್ದಾರ್ ಸರೋವರ ಡ್ಯಾಮ್ ಭಾನುವಾರ ಉದ್ಘಾಟನೆಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅಣೆಕಟ್ಟನ್ನು ಲೋಕಾರ್ಪಣೆ ಮಾಡಿದ್ದಾರೆ.
ಕಾಂಕ್ರೀಟ್ ಬಳಕೆಯಲ್ಲಿ ವಿಶ್ವದ 2ನೇ ಅತೀ ದೊಡ್ಡ ಡ್ಯಾಮ್ ಎಂಬ ಕೀರ್ತಿಗೆ ಸರ್ದಾರ್ ಸರೋವ ಡ್ಯಾಮ್ ಪಾತ್ರವಾಗಿದ್ದು, ಈ ಬೃಹತ್ ಡ್ಯಾಮ್ ನ ಒಂದಷ್ಟು ಕುತೂಹಲಕಾರಿ ಮಾಹಿತಿ ಇಲ್ಲಿದೆ..

1.ಕಾಂಕ್ರೀಟ್ ಬಳಕೆಯಲ್ಲಿ ದೇಶದ ಅತೀ ದೊಡ್ಡ ಡ್ಯಾಮ್ ಆಗಿದ್ದು, ವಿಶ್ವದ 2ನೇ ಅತೀ ದೊಡ್ಡ ಡ್ಯಾಮ್ ಆಗಿದೆ. ಕಾಂಕ್ರೀಟ್ ಬಳಕೆಯಲ್ಲಿ ಅಮೆರಿಕದ ಗ್ರಾಂಡ್ ಕೌಲಿ ಡ್ಯಾಮ್ ವಿಶ್ವದ ಮೊದಲ ಅತೀ ದೊಡ್ಡ ಡ್ಯಾಮ್ ಎಂಬ ಹೆಗ್ಗಳಿಕೆಗೆ  ಪಾತ್ರವಾಗಿದೆ.

2. ಡ್ಯಾಮ್ 1.2 ಕಿ.ಮೀ ಉದ್ದವಿದ್ದು, 163 ಅಡಿ ಎತ್ತರ ಹೊಂದಿದೆ. ತನ್ನ ಎತ್ತರ ಹಾಗೂ ನೀರಿನ ಶೇಖರಣೆಯಲ್ಲೂ ಸರ್ದಾರ್ ಸರೋವರ ಡ್ಯಾಮ್ ಬೃಹತ್ ಅಣೆಕಟ್ಟು ಎಂಬ ಕೀರ್ತಿಗೆ ಭಾಜನವಾಗಿದೆ.

3. ಸರ್ದಾರ್ ಸರೋವರ ಡ್ಯಾಂ ನಲ್ಲಿ ಎರಡು ಪವರ್ ಹೌಸ್ (ವಿದ್ಯುತ್ ಉತ್ಪಾದನಾ ಘಟಕ)ಗಳಿದ್ದು, ಒಂದು 1,200 ಮೆಗಾ ವ್ಯಾಟ್ ಸಾಮರ್ಥ್ಯ ಹಾಗೂ ಮತ್ತೊಂದು 250 ಮೆಗಾ ವ್ಯಾಟ್ ವಿದ್ಯುತ್ ಉತ್ಬಾದಿಸುವ ಸಾಮರ್ಥ್ಯವನ್ನು  ಹೊಂದಿದೆ. ಇನ್ನು ಉದ್ಧಾಟನೆಗೂ ಮುನ್ನವೇ ಅಂದರೆ ಇಲ್ಲಿಯವರೆದೂ ಈ ಡ್ಯಾಮ್ ನ ಮೂಲಕ ಸುಮಾರು 4,141 ಕೋಟಿ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಲಾಗಿದೆ.

4.ಡ್ಯಾಂ ನಿರ್ಮಾಣಕ್ಕೆ ಸುಮಾರು  8 ಸಾವಿರ ಕೋಟಿ ವೆಚ್ವಾಗಿದ್ದು, ಈಗಾಗಲೇ ಈ ಡ್ಯಾಮ್ ನ ತನ್ನ ವಿದ್ಯುತ್ ಉತ್ಪಾದನೆ ಮೂಲಕ 16 ಸಾವಿರ ಕೋಟಿ ಹಣವನ್ನು ಸಂಪಾದನೆ ಮಾಡಿದೆ. ಅಂದರೆ ತನ್ನ ನಿರ್ಮಾಣಕ್ಕಿಂತಲೂ  ದುಪ್ಪಟ್ಟು ಹಣ ಈ ಡ್ಯಾಮ್ ನಿಂದ ಉತ್ಪಾದನೆಯಾದ ವಿದ್ಯುತ್ ಮಾರಾಟದಿಂದ ಬಂದ ಹಣ ಸರ್ಕಾರದ ಬೊಕ್ಕಸ ಸೇರಿದೆ.

5.ಇನ್ನು ಈ ಡ್ಯಾಮ್ ನಿಂದ ಉತ್ಪಾದನೆಯಾದ ವಿದ್ಯುತ್ ಅನ್ನು ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ ರಾಜ್ಯಗಳ ಹಂಚಿಕೊಳ್ಳಲಿದ್ದು, ಈ ಪೈಕಿ ಮಹಾರಾಷ್ಟ್ರಕ್ಕೆಶೇ.57ರಷ್ಟು, ಮಧ್ಯ ಪ್ರದೇಶಕ್ಕೆ ಶೇ.27ರಷ್ಟು ಮತ್ತು ಗುಜರಾತ್ ಗೆ  ಶೇ.16ರಷ್ಟು ವಿದ್ಯುತ್ ಹಂಚಿಕೆ ಮಾಡಲಾಗುತ್ತದೆ.

6. ಈ ಡ್ಯಾಂನಲ್ಲಿ ಒಟ್ಟು 30 ಗೇಟ್ ಗಳಿದ್ದು, ಒಂದೊಂದು ಗೇಟ್ ಗಳು ಬೃಹತ್ ಪ್ರಮಾಣದ ಉಕ್ಕಿನಿಂದ ಮಾಡಲಾಗಿದೆ. ಪ್ರತೀಯೊಂದು ಗೇಟ್ ಕೂಡ 450 ಟನ್ ತೂಕವಿದ್ದು, ಈ ಗೇಟ್ ಗಳನ್ನು ತೆರೆಯಲು ಮತ್ತು ಸ್ಥಗಿತಗೊಳಿಸುವ  ಪ್ರಕ್ರಿಯೆಯೇ ಸುಮಾರು 1 ಗಂಟೆ ತಗುಲುತ್ತದೆ.

7.ನರ್ಮದಾ ಬಚಾವೋ ಆಂದೋಲನವೂ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಈ ವರೆಗೂ ಈ ಡ್ಯಾಮ್ ನಲ್ಲಿ ಪೂರ್ಣ ಪ್ರಮಾಣದ ನೀರು ಸಂಗ್ರಹವಾಗಿರಲಿಲ್ಲ. ಇದೀಗ ಪೂರ್ಣ ಪ್ರಮಾಣದ ನೀರು ಸಂಗ್ರಹಕ್ಕೆ ನಿರ್ಧರಿಸಲಾಗಿದ್ದು,  ಇದರಿಂದ 18 ಲಕ್ಷ ಹೆಕ್ಟೇರ್ ಕೃಷಿ ಭೂಮಿಗಿ ನೀರುಣಿಸಲು ನೆರವಾಗುತ್ತದೆ. ಈ ಡ್ಯಾಮ್ ನಿಂದ 9 ಸಾವಿರ ಹಳ್ಳಿಗಳು ಪ್ರಯೋಜನ ಪಡೆಯಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com