ಬಿಎಸ್'ಪಿ ನಾಯಕ ಹತ್ಯೆ ಪ್ರಕರಣ: ಸ್ವಯಂ ಘೋಷಿತ ದೇವಮಾನವ ಮಚೇಂದ್ರ ನಾಥ್ ಬಂಧನ

2013ರಲ್ಲಿ ನಡೆದ ಬಿಎಸ್'ಪಿ ನಾಯಕ ದೀಪಕ್ ಭಾರಧ್ವಾಜ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂ ಘೋಷಿತ ದೇವಮಾನವರೊಬ್ಬರನ್ನು ಭಾನುವಾರ ಬಂಧನಕ್ಕೊಳಪಡಿಸಲಾಗಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಘಾಜಿಯಾಬಾದ್: 2013ರಲ್ಲಿ ನಡೆದ ಬಿಎಸ್'ಪಿ ನಾಯಕ ದೀಪಕ್ ಭಾರದ್ವಾಜ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂ ಘೋಷಿತ ದೇವಮಾನವರೊಬ್ಬರನ್ನು ಭಾನುವಾರ ಬಂಧನಕ್ಕೊಳಪಡಿಸಲಾಗಿದೆ. 
ಮಚೇಂದ್ರ ನಾಥ್ ಅಲಿಯಾಸ್ ಪ್ರತಿಭಾ ನಂದ್ ಬಂಧಿತನಕ್ಕೊಳಗಾಗಿರುವ ಸ್ವಯಂ ಘೋಷಿತ ದೇವಮಾನವರಾಗಿದ್ದಾರೆ. ಜಮೀನಿನ ವ್ಯಾಜ್ಯ ಸಂಬಂಧ ಸ್ವಾಮೀಜಿ ಹಾಗೂ ದೀಪಕ್ ಭಾರದ್ವಾಜ್ ನಡುವೆ ಜಟಾಪಟಿ ನಡೆದಿತ್ತು. ಈ ವಿಚಾರವಾಗಿ ದೀಪಕ್ ಭಾರದ್ವಾಜ್ ಕೊಲೆಗೆ ಸ್ವಾಮೀಜಿ ಸುಪಾರಿ ನೀಡಿದ್ದಾರೆಂಬ ಆರೋಪಗಳು ಕೇಳಿಬಂದಿತ್ತು. 
ದೀಪಕ್ ಭಾರದ್ವಾಜ್ ಹತ್ಯೆಯಾದ ಬಳಿಕ ಸ್ವಾಮೀಜಿ ನಾಪತ್ತೆಯಾಗಿದ್ದರು. ಬಳಿಕ ಸ್ವಾಮೀಜಿಗಾಗಿ ಪೊಲೀಸರು ತೀವ್ರ ಹುಡುಕಾಟ ಆರಂಭಿಸಿದ್ದರು. ತನಿಖೆ ವೇಳೆ ವಿದೇಶಿ ನಿರ್ಮಿತ ಪಿಸ್ತೂಲ್ ನ್ನು ಸ್ವಾಮೀಜಿಯವರ ಆಶ್ರಮದಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ. 
ಬಹುಜನ ಸಮಾಜ ಪಕ್ಷದ ನಾಯಕ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ದೀಪಕ್ ಭಾರದ್ವಾಜ್ ಅವರನ್ನು ಇತ್ತೀಚೆಗಷ್ಟೇ ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com