ಸಿಯಾಚಿನ್ ನಲ್ಲಿ ಸ್ವಚ್ಚ ಭಾರತ ಅಭಿಯಾನ ನಡೆಸಿದ ಭಾರತೀಯ ಸೇನೆ

ಪ್ರಧಾನಿ ನರೇಂದ್ರ ಮೋದಿ ಮಹತ್ವಾಕಾಂಕ್ಷೆಯ ಯೋಜನೆ ಸ್ವಚ್ಚ ಭಾರತ ಅಜೆಂಡಾವನ್ನು ಮುಂದಿಟ್ಟುಕೊಂಡು ಭಾರತೀಯ ಸೇನೆ ವಿಶ್ವದಲ್ಲೇ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್....
ಸಿಯಾಚಿನ್ ನಲ್ಲಿ ಸ್ವಚ್ಚ ಭಾರತ ಅಭಿಯಾನ ನಡೆಸಿದ ಬಾರತೀಯ ಸೇನೆ
ಸಿಯಾಚಿನ್ ನಲ್ಲಿ ಸ್ವಚ್ಚ ಭಾರತ ಅಭಿಯಾನ ನಡೆಸಿದ ಬಾರತೀಯ ಸೇನೆ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮಹತ್ವಾಕಾಂಕ್ಷೆಯ ಯೋಜನೆ ಸ್ವಚ್ಚ ಭಾರತ ಅಜೆಂಡಾವನ್ನು ಮುಂದಿಟ್ಟುಕೊಂಡು ಭಾರತೀಯ ಸೇನೆ ವಿಶ್ವದಲ್ಲೇ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್ ನಲ್ಲಿ ಸ್ವಚ್ಚತಾ ಕಾರ್ಯ ಪ್ರಾರಂಭಿಸಿದೆ.
ಸಿಯಾಚಿನ್ ಪ್ರದೇಶ ಬೆಟ್ತ ಗುಡ್ಡಗಳಿಂದ ಕೂಡಿದ ಕಣಿವೆ ಸ್ಥಳವಾಗಿದೆ. ಇಂತಹಾ ಪ್ರದೇಶದಲ್ಲಿ ಹಿಮನದಿಯಿಂದ  ತ್ಯಾಜ್ಯವನ್ನು ತೆಗೆದು ಸ್ವಚ್ಚ ಮಾಡುವುದು ಒಂದು ಸವಾಲಾಗಿದೆ. ಈ ಸ್ವಚ್ಚತಾ ಕಾರ್ಯದಿಂದ ಪರಿಸರಕ್ಕೆ ಆಗುವ ಹಾನಿಯನ್ನು ತಪ್ಪಿಸಬಹುದು.
ಯುದ್ಧಭೂಮಿಯಲ್ಲಿ ಸ್ವಚ್ಚತೆಯನ್ನು ಕಾಪಾಡಿಕೊಳ್ಳಲು ಸೈನ್ಯವು ಈ ಕ್ರಮ ಅನುಸರಿಸಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
"ಸಿಯಾಚಿನ್ ಹಿಮನದಿಯ ಪರಿಸರ ಸಮತೋಲನವನ್ನು ಕಾಪಾಡಿಕೊಳ್ಳುವುದು ಈ ಕಾರ್ಯದ ಪ್ರಧಾನ ಉದ್ದೇಶವಾಗಿದೆ, ಅಕ್ಟೋಬರ್ 2014 ರಲ್ಲಿ ಈ ಕಾರ್ಯಾಚರಣೆಯನ್ನು ಪ್ರಾರಂಭಿಸಿದಾಗಿನಿಂದ ಈ ವರೆಗೆ ಸೇನಾ ಪಡೆಗಳು ಸಿಯಾಚಿನ್ ತಳ ಬಾಗದಲ್ಲಿ 63 ಟನ್ ಗಳಷ್ಟು ಕಸವನ್ನು ವಿಲೇವಾರಿ ಮಾಡಿವೆ" ಎಂದು ಸಚಿವಾಲಯ ಪ್ರಕಟಣೆ ತಿಳಿಸಿದೆ.
ಮ್ಯಾನ್-ಪ್ಯಾಕ್ ಲೋಡ್, ಪೋರ್ಟರ್ಸ್, ಕುದುರೆಗಳು ಮತ್ತು ಕೆಲವೊಮ್ಮೆ ಹೆಲಿಕಾಪ್ಟರ್ಗಳನ್ನು ಬಳಸಿ ದೊಡ್ದ ಪ್ರಮಾಣದಲ್ಲಿ ಇಲ್ಲಿನ ಕಸವನ್ನು ವಿಲೇವಾರಿ ಮಾದಲಾಗಿದೆ.
ಪ್ಯಾಕಿಂಗ್ ವಸ್ತುಗಳು, ಬ್ಯಾರಲ್ ಗಳು, ಪರಿಸರಕ್ಕೆ ಹಾನಿಯಾಗಬಲ್ಲ ರಾಸಾಯನಿಕ ವಸ್ತುಗಳನ್ನು ಈ ಕಸವು ಒಳಗೊಂಡಿದೆ.
ಹೀಗೆ ತೆಗೆದಿರುವ ಕಸವನ್ನು ಭೂಮಿಯಲ್ಲಿ ತೋಡಿದ್ದ ಆಲವಾದ ಗುಂಡಿಗಳಲ್ಲಿ ಸೇರಿಸಲಾಗುತ್ತದೆ. ನದಿಗಳ ಹರಿವಿಗೆ, ಭೂ ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಈ ಗುಂಡಿಗಳನ್ನು ಅಗೆಯಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com