ಮತ್ತೆ ಮುಂಬೈನಲ್ಲಿ ಮಹಾಮಳೆ: 24 ಗಂಟೆಗಳಲ್ಲಿ ಭಾರೀ ಮಳೆ ಮುನ್ಸೂಚನೆ

ವಾಣಿಜ್ಯ ನಗರಿ ಮುಂಬೈನಲ್ಲಿ ಭಾರೀ ಮಳೆಯಾಗುತ್ತಿದ್ದು, ಸತತವಾಗಿ ಸುರಿಯುತ್ತಿರುವ ಮಳೆಗೆ ಮಹಾನಗರಿ ತತ್ತರಿಸಿ ಹೋಗಿದೆ. ಮುಂದಿನ 24 ಗಂಟೆಗಳಲ್ಲಿ ಮತ್ತೆ ಭಾರೀ ಮಳೆ ಸುರಿಯುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ...
ಮತ್ತೆ ಮುಂಬೈನಲ್ಲಿ ಮಹಾಮಳೆ
ಮತ್ತೆ ಮುಂಬೈನಲ್ಲಿ ಮಹಾಮಳೆ
ಮುಂಬೈ: ವಾಣಿಜ್ಯ ನಗರಿ ಮುಂಬೈನಲ್ಲಿ ಭಾರೀ ಮಳೆಯಾಗುತ್ತಿದ್ದು, ಸತತವಾಗಿ ಸುರಿಯುತ್ತಿರುವ ಮಳೆಗೆ ಮಹಾನಗರಿ ತತ್ತರಿಸಿ ಹೋಗಿದೆ. ಮುಂದಿನ 24 ಗಂಟೆಗಳಲ್ಲಿ ಮತ್ತೆ ಭಾರೀ ಮಳೆ ಸುರಿಯುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಬುಧವಾರ ಎಚ್ಚರಿಕೆ ನೀಡಿದೆ. 
ನಿನ್ನೆಯಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ವಾಣಿಜ್ಯ ನಗರಿ ತತ್ತರಿಸಿ ಹೋಗಿದ್ದು, ಮುಂಬೈನ ಪ್ರಮುಖ ನಗರಗಳಾದ ಮಲದ್ ಸಬ್ ಬೇ, ಕಿಂಗ್ ವೃತ್ತ. ದದರ್, ಹಿಂದ್ ಮಾತಾ ಹಾಗೂ ವಿಮಾನ ವಿಲ್ದಾಣ ಸಂಪೂರ್ಣ ಜವಾವೃತಗೊಂಡಿವೆ. 
ಭಾರೀ ಮಳೆಯಿಂದಾಗಿ ಮುಂಬೈನಲ್ಲಿ ಸಂಚರಿಸುವ ಪ್ರಮುಖ ಸ್ಥಳೀಯ ರೈಲುಗಳು ಸುಮಾರು 15ರಿಂದ 20 ನಿಮಿಷಗಳ ಕಾಲ ತಡವಾಗಿ ಸಂಚರಿಸುತ್ತಿವೆ. ನಿನ್ನೆ ಸುರಿದ ಭಾರೀ ಮಳೆಯ ನೀರು ವಿಮಾನ ನಿಲ್ದಾಣಗಳು ಜಲಾವೃತ್ತಗೊಳ್ಳುವಂತೆ ಮಾಡಿದ್ದು. ಈ ಹಿನ್ನಲೆಯಲ್ಲಿ ವಿಮಾನ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ. ಇದರ ಜೊತೆಗೆ ಗೋವಾ, ದೆಹಲಿ, ಹೈದರಾಬಾದ್ ಮತ್ತು ಬೆಂಗಳೂರಿನ ಕೆಲವು ವಿಮಾನಗಳ ಮಾರ್ಗವನ್ನು ಬದಲಿಸಲಾಗಿದೆ. 
ಕಳೆದ ತಿಂಗಳು 29ರಂದು ಮುಂಬೈನಲ್ಲಿ 9 ಗಂಟೆಗಳ ಅವಧಿಯಲ್ಲಿ 297.6 ಎಂ.ಎಂ ಮಳೆ ಸುರಿದಿತ್ತು. ಇದು ಒಂದು ದಶಕದಲ್ಲಿಯೇ ಅತ್ಯಂತ ಹೆಚ್ಚು ಸುರಿದ ದಾಖಲೆಯ ಮಳೆಯೆಂದೇ ಹೇಳಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com