ಇ-ಫೈಲಿಂಗ್ ಪೋರ್ಟಲ್ ನಲ್ಲಿ ಸ್ವವಿವರ ಅಪ್ಡೇಟ್ ಮಾಡಲು ತೆರಿಗೆದಾರರಿಗೆ ಐಟಿ ಇಲಾಖೆ ಸೂಚನೆ

ಐಟಿ ಇಲಾಖೆ ಹಾಗೂ ತೆರಿಗೆದಾರರ ನಡುವೆ ಪರಿಣಾಮಕಾರಿ ಸಂಪರ್ಕ ಇರುವಂತೆ ಮಾಡಲು ಇ-ಫೈಲಿಂಗ್ ಪೋರ್ಟಲ್ ನಲ್ಲಿ ಸ್ವವಿವರ ಅಪ್ಡೇಟ್ ಮಾಡುವಂತೆ ತೆರಿಗೆದಾರರಿಗೆ ಐಟಿ ಇಲಾಖೆ ಸೂಚನೆ ನೀಡಿದೆ.
ತೆರಿಗೆ ಇಲಾಖೆ
ತೆರಿಗೆ ಇಲಾಖೆ
ನವದೆಹಲಿ: ಐಟಿ ಇಲಾಖೆ ಹಾಗೂ ತೆರಿಗೆದಾರರ ನಡುವೆ ಪರಿಣಾಮಕಾರಿ ಸಂಪರ್ಕ ಇರುವಂತೆ ಮಾಡಲು ಇ-ಫೈಲಿಂಗ್ ಪೋರ್ಟಲ್ ನಲ್ಲಿ ಸ್ವವಿವರ ಅಪ್ಡೇಟ್ ಮಾಡುವಂತೆ ತೆರಿಗೆದಾರರಿಗೆ ಐಟಿ ಇಲಾಖೆ ಸೂಚನೆ ನೀಡಿದೆ. 
ವೈಯಕ್ತಿಕ ವಿವರ ಹಾಗೂ ಇ-ಮೇಲ್ ವಿವರಗಳು, ಮೊಬೈಲ್ ಫೋನ್ ನಂಬರ್, ವಿಳಾಸ, ಬ್ಯಾಂಕ್ ಖಾತೆ ವಿವರಗಳನ್ನು ಇ-ಫೈಲಿಂಗ್ ಪೋರ್ಟಲ್ ನಲ್ಲಿ ಸ್ವವಿವರ ಸಮೇತ ಇ-ಫೈಲಿಂಗ್ ಪೋರ್ಟಲ್ ನಲ್ಲಿ ಸಲ್ಲಿಸಲು 
ತೆರಿಗೆದಾರರಿಗೆ ಸಲಹೆ ನೀಡಲಾಗಿದೆ. 
ತೆರಿಗೆದಾರರಿಗೆ ಒಟಿಪಿ ಕಳಿಸಿದ ನಂತರ ವಿವರಗಳನ್ನು ಪರಿಶೀಲನೆ ನಡೆಸಲಾಗುವುದು ಎಂದು ಐಟಿ ಇಲಾಖೆ ಹೇಳಿದೆ. ಈಗಿರುವ ಇ-ಫೈಲಿಂಗ್ ಬಳಕೆದಾರರು ತಮ್ಮ ಪ್ರೊಫೈಲ್ ನ್ನು ಅಪ್ಡೇಟ್ ಮಾಡಬೇಕಿದೆ ಎಂದು ಇಲಾಖೆಯ ಸುತ್ತೋಲೆ ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com