ಮತಕ್ಕಾಗಿ ನಾವು ರಾಜಕೀಯ ಮಾಡಲ್ಲ; ನಮಗೆ ಪಕ್ಷಕ್ಕಿಂತ ದೇಶ ಮುಖ್ಯ: ವಾರಣಾಸಿಯಲ್ಲಿ ಪ್ರಧಾನಿ ಮೋದಿ

ನಾವು ರಾಜಕೀಯ ಮಾಡುತ್ತಿರುವುದು ಮತಕ್ಕಾಗಿ ಅಲ್ಲ, ದೇಶದ ಅಭಿವೃದ್ಧಿಯೇ ನಮ್ಮ ಮೊದಲ ಆದ್ಯತೆ ಎಂದು ಹೇಳಿದ ಪ್ರಧಾನಿ...
ನರೇಂದ್ರ ಮೋದಿ
ನರೇಂದ್ರ ಮೋದಿ
ಶಹನ್ ಶಾಪುರ(ವಾರಣಾಸಿ): ನಾವು ರಾಜಕೀಯ ಮಾಡುತ್ತಿರುವುದು ಮತಕ್ಕಾಗಿ ಅಲ್ಲ, ದೇಶದ ಅಭಿವೃದ್ಧಿಯೇ ನಮ್ಮ ಮೊದಲ ಆದ್ಯತೆ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ  ತಮ್ಮ ರಾಜಕೀಯ ವೈರಿಗಳಿಗೆ ತಿರುಗೇಟು ನೀಡಿದ್ದಾರೆ.
ಎರಡು ದಿನಗಳ ವಾರಣಾಸಿ ಪ್ರವಾಸದಲ್ಲಿರುವ ಪ್ರಧಾನಿ ಮೋದಿ, ಪಶು ಆರೋಗ್ಯ ಮೇಳ ಉದ್ಘಾಟಿಸಿ ಮಾತನಾಡಿದರು, 2022 ರ ವೇಳೆಗೆ ಕೃಷಿಯ ಆದಾಯವನ್ನು ದುಪ್ಪಟ್ಟುಗೊಳಿಸಿ, ಮನೆಯಿಲ್ಲದವರಿಗೆ ಸೂರು ಒದಗಿಸುವ ಭರವಸೆ ನೀಡಿದರು.
ನಮ್ಮ ಪಕ್ಷ(ಬಿಜೆಪಿ) ರಾಜಕೀಯ ಮಾಡುತ್ತಿರುವ ವೋಟಿಗಾಗಿ ಅಲ್ಲ, ನಮ್ಮ ಸಂಸ್ಕೃತಿಯೇ ಭಿನ್ನ, ರಾಜಕೀಯದಲ್ಲಿ ಜನರು ಕೇವಲ ವೋಟುಗಳನ್ನು ಬಯಸುತ್ತಾರೆ, ನಾವು ಅವರಿಗಿಂತ ವಿಭಿನ್ನ, ನಮ್ಮ ಸರ್ಕಾರ ಕಪ್ಪು ಹಣದ ವಿರುದ್ಧ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಿದೆ, ಅಪ್ರಾಮಾಣಿಕರ ಲೂಟಿಯಿಂದಾಗಿ ಬಡವರು ಕಷ್ಟದಲ್ಲಿ ಸಿಲುಕುವಂತಾಗಿದೆ ಎಂದು ಹೇಳಿದ್ದಾರೆ.
ಕೆಲವು ರಾಜಕಾರಣಿಗಳು ಕೇವಲ ಮತಕ್ಕಾಗಿ ಮಾತ್ರ ಕೆಲಸ ಮಾಡುತ್ತಾರೆ, ಆದರೆ ನಾವು ಇದರಿಂದ ಹೊರತಾಗಿದ್ದು, ನಮ್ಮದು ವಿಭಿನ್ನ ಸಂಸ್ಕೃತಿಯಾಗಿದೆ, ನಮಗೆ ಎಲ್ಲಕ್ಕಿಂತ ದೇಶವೇ ದೊಡ್ಡದು ಎಂದು ಹೇಳಿದ್ದಾರೆ. 
ಪಶು ಆರೋಗ್ಯ ಮೇಳವನ್ನು ಇದೇ ಮೊದಲ ಬಾರಿಗೆ 1800 ಎಕರೆ ಜಾಗದಲ್ಲಿ ಬೃಹತ್ ಪ್ರಮಾಣದಲ್ಲಿ ಆಯೋಜಿಸಲಾಗಿತ್ತು, ಈ ಪ್ರಾಣಿಗಳು ಮತದಾನ ಮಾಡುವುದಿಲ್ಲ, ಅವು ಯಾವ ಮತದಾರರಿಗೂ ಸೇರಿದವಲ್ಲ, ಎಂದು ಹೇಳಿದ ಅವರು, ಜಾನುವಾರುಗಳ ಆರೋಗ್ಯದ ಬಗ್ಗೆ ಎಚ್ಚರ ವಹಿಸಬೇಕು,ಇದರಿಂದ ಹಾಲಿನ ಉತ್ಪಾದನೆಯಲ್ಲಿ ಏರಿಕೆಯಾಗುತ್ತದೆ, ಇತರೆ ದೇಶಗಳಿಗೆ ಹೋಲಿಸಿದರೇ ಭಾರತದಲ್ಲಿ ಹಾಲಿನ ಉತ್ಪಾದನೆ ಕಡಿಮೆಯಿದೆ ಎಂದು ಅಭಿಪ್ರಾಯಪಟ್ಟರು.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಕಾರ್ಯಕ್ರಮ ಆಯೋಜಿಸಿರುವುದಕ್ಕೆ ಮೋದಿ ಮೆಚ್ಚುಗೆ ವ್ಯಕ್ತ ಪಡಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com