ಪ್ರಧಾನಿ ಮೋದಿ ಮನ್ ಕಿ ಬಾತ್ ಗೆ 3 ವರ್ಷ ಪೂರ್ಣ, ಇಂದು 36ನೇ ಆವೃತ್ತಿಯ ಕಾರ್ಯಕ್ರಮ

ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕಿ ಬಾತ್ ಕಾರ್ಯಕ್ರಮ ಇಂದಿಗೆ 3 ವರ್ಷ ಪೂರ್ಣಗೊಳಿಸಿದ್ದು, ನರೇಂದ್ರ ಮೋದಿ ಅವರು ಭಾನುವಾರ ತಮ್ಮ 36ನೇ ಆವೃತ್ತಿಯ ಕಾರ್ಯಕ್ರಮದಲ್ಲಿ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕಿ ಬಾತ್ ಕಾರ್ಯಕ್ರಮ ಇಂದಿಗೆ 3 ವರ್ಷ ಪೂರ್ಣಗೊಳಿಸಿದ್ದು, ನರೇಂದ್ರ ಮೋದಿ ಅವರು ಭಾನುವಾರ ತಮ್ಮ 36ನೇ ಆವೃತ್ತಿಯ ಕಾರ್ಯಕ್ರಮದಲ್ಲಿ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಪ್ರತೀ ಭಾನುವಾರ ಬೆಳಗ್ಗೆ 11 ಗಂಟೆ ರೇಡಿಯೋದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ವಿವಿಧ ವಿಚಾರಗಳ ಮಾತನಾಡುತ್ತಿದ್ದು, ಈ ಬಾರಿ ಬಹು ನಿರೀಕ್ಷಿತ ಬುಲೆಟ್ ರೈಲು ಹಾಗೂ ಸರ್ದಾರ್ ಸರೋವರ್ ಅಣೆಕಟ್ಟುಗಳ  ಕುರಿತು ಮಾತನಾಡುವ ಸಾಧ್ಯತೆ ಇದೆ. ಈ ಹಿಂದೆ ಜಪಾನ್ ಪ್ರಧಾನಿ ಶಿಂಜೋ ಅಬೆ ಅವರು ಭಾರತ ಪ್ರವಾಸ ಕೈಗೊಂಡಿದ್ದ ವೇಳೆ ಗುಜರಾತ್ ನ ಅಹ್ಮದಾಬಾದ್ ನಲ್ಲಿ ಬುಲೆಟ್ ರೈಲು ಯೋಜನೆಗೆ ಶಂಕು ಸ್ಥಾಪನೆ ಮಾಡಲಾಗಿತ್ತು.

ಅಂತೆಯೇ ಪ್ರಧಾನಿ ಮೋದಿ ಸರ್ದಾರ್ ಸರೋವರ ಅಣೆಕಟ್ಟನ್ನು ದೇಶಕ್ಕೆ ಸಮರ್ಪಿಸಿದ್ದರು. ಈ ಎರಡು ವಿಚಾರಗಳಲ್ಲಿದೇ ಪ್ರಧಾನಿ ನರೇಂದ್ರ ಮೋದಿ ಕುಸಿದಿರುವ ಆರ್ಥಿಕತೆಗೆ ಪುನಶ್ಚೇತನಗೊಳಿಸುವ ಕುರಿತೂ ತಮ್ಮ ಮನ್ ಕಿ  ಬಾತ್ ನಲ್ಲಿ ಮಾತನಾಡುವ ನಿರೀಕ್ಷೆ ಇದೆ.

ಪ್ರತೀ ಭಾರಿ ಮನ್ ಕಿ ಬಾತ್ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಪ್ರಜೆಗಳಿಂದ ವಿಷಯಗಳ ಆಯ್ಕೆ ಕುರಿತು ಸಲಹೆ ಪಡೆಯುತ್ತಿದ್ದು, ಈ ಬಾರಿಯ 36ನೇ ಅವೃತ್ತಿಗೂ ವಿಷಯ ಸೂಚಿಸುವಂತೆ ಟ್ವಿಟರ್ ನಲ್ಲಿ, ಆ್ಯಪ್ ನಲ್ಲಿ ಮತ್ತು  ಎಸ್ ಎಂಎಸ್ ಗಳ ಮೂಲಕ ಮನವಿ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com