ವಿಶ್ವಸಂಸ್ಥೆಯಲ್ಲಿ ಕಾಂಗ್ರೆಸ್ ಸಾಧನೆ ಹೊಗಳಿದ ಸುಷ್ಮಾ ಸ್ವರಾಜ್'ಗೆ ಧನ್ಯವಾದ: ರಾಹುಲ್ ಗಾಂಧಿ

ವಿಶ್ವಸಂಸ್ಥೆ 72ನೇ ಮಹಾ ಅಧಿವೇಶನದಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಮಾಡಿದ್ದ ಭಾಷಣವನ್ನು ಕಾಂಗ್ರೆಸ್ ಸ್ವಾಗತಿಸಿದ್ದು, ವಿಶ್ವಸಂಸ್ಥೆಯಲ್ಲಿ ಕಾಂಗ್ರೆಸ್ ಸಾಧನೆ ಹೊಗಳಿದ ಸುಷ್ಮಾ ಅವರಿಗೆ ಧನ್ಯವಾದಗಳು ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್...
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್  ಹಾಗೂ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ (ಸಂಗ್ರಹ ಚಿತ್ರ)
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ (ಸಂಗ್ರಹ ಚಿತ್ರ)

ನವದೆಹಲಿ: ವಿಶ್ವಸಂಸ್ಥೆ 72ನೇ ಮಹಾ ಅಧಿವೇಶನದಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಮಾಡಿದ್ದ ಭಾಷಣವನ್ನು ಕಾಂಗ್ರೆಸ್ ಸ್ವಾಗತಿಸಿದ್ದು, ವಿಶ್ವಸಂಸ್ಥೆಯಲ್ಲಿ ಕಾಂಗ್ರೆಸ್ ಸಾಧನೆ ಹೊಗಳಿದ ಸುಷ್ಮಾ ಅವರಿಗೆ ಧನ್ಯವಾದಗಳು ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಭಾನುವಾರ ಹೇಳಿದ್ದಾರೆ. 

72ನೇ ವಿಶ್ವಸಂಸ್ಥೆಯ ಮಹಾ ಅಧಿವೇಶನದಲ್ಲಿ ಮಾತನಾಡಿದ್ದ ಸುಷ್ಮಾ ಸ್ವರಾಜ್ ಅವರು, ಭಾರತ ಬಡತನ ನಿರ್ಮೂಲನೆ ಬಗ್ಗೆ ಗಮನ ಹರಿಸಿದರೆ, ಪಾಕಿಸ್ತಾನ ಉಗ್ರ ಸಂಘಟನೆಗಳನ್ನು ಹುಟ್ಟು ಹಾಕುವಿಕೆಯತ್ತ ಗಮನ ಹರಿಸುತ್ತಿದೆ. ನಾವು ಐಐಟಿ, ಎಐಐಎಂಎಸ್ ಮತ್ತು ಇಸ್ರೋ ಸಂಸ್ಥೆಗಳನ್ನು ಸ್ಥಾಪಿಸಿ ಅಭಿವೃದ್ಧಿ ನೋಡುತ್ತಿದ್ದೇವೆಂದು ಹೇಳಿದ್ದರು. 

ಈ ಹೇಳಿಕೆಯನ್ನು ಸ್ವಾಗತಿಸಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ರಾಹುಲ್ ಗಾಂಧಿಯವರು, ಕಾಂಗ್ರೆಸ್'ನ ಸಾಧನೆಗಳನ್ನು ವಿಶ್ವಸಂಸ್ಥೆಯಲ್ಲಿ ಹೊಗಳಿದ ಸುಷ್ಮಾ ಜೀಯವರಿಗೆ ಧನ್ಯವಾದಗಳು, ನಾವು ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಕೊನೆಗೂ ಎನ್ ಡಿಎ ಸರ್ಕಾರ ಒಪ್ಪಿಕೊಂಡಿದೆ ಎಂದು ಹೇಳಿಕೊಂಡಿದ್ದಾರೆ. 

ರಾಹುಲ್ ಗಾಂಧಿಯವರ ಟ್ವೀಟ್ ಬೆನ್ನಲ್ಲೇ ಕಾಂಗ್ರೆಸ್ ವಕ್ತಾರ ರಣದೀಪ್ ಸುಜ್ವೇಲಾ ಕೂಡ ಟ್ವೀಟ್ ಮಾಡಿದ್ದು, ಕಾಂಗ್ರೆಸ್ ಸರ್ಕಾರ 70 ವರ್ಷಗಳ ಕಾಲ ದೇಶದಲ್ಲಿ ಆಡಳಿತ ನಡೆಸಿತ್ತು. ಅಂದು ನಾವು ಮಾಡಿದ್ದ ಕಾರ್ಯಗಳನ್ನು ಇಂದು ಬಹಿರಂಪಡಿಸಿ ನಮ್ಮ ದಕ್ಷ ಆಡಳಿತವನ್ನು ಮೆಲುಕು ಹಾಕಲು ಸುಷ್ಮಾ ಸ್ವರಾಜ್ ಅವರು ಕನ್ನಡಿಯಾಗಿದ್ದಾರೆ. ಕಾಂಗ್ರೆಸ್ ಸರ್ಕಾರ ಭಾರತದ ಅಭಿವೃದ್ಧಿಯನ್ನು ಬಯಸಿತ್ತು. ಹೀಗಾಗಿ ಮತ್ತೆ ನಮ್ಮ ಕಾರ್ಯಗಳನ್ನು ಎನ್ ಡಿಎ ಸರ್ಕಾರ ಒಪ್ಪಿಕೊಂಡಿದೆ ಎಂದು ವ್ಯಂಗ್ಯವಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com