ಬನಾರಸ್ ಹಿಂದೂ ವಿವಿ ವಿವಾದ: ವಿದ್ಯಾರ್ಥಿನಿಯರ ಮೇಲೆ ಲಾಠಿಚಾರ್ಜ್ ನಡೆದಿಲ್ಲ- ಪ್ರಾಂಶುಪಾಲ ತ್ರಿಪಾಠಿ

ಪ್ರತಿಭಟನಾನಿರತ ವಿದ್ಯಾರ್ಥಿನಿಯರ ಪೊಲೀಸರು ಯಾವುದೇ ರೀತಿಯ ಲಾಠಿಚಾರ್ಜ್ ಮಾಡಿಲ್ಲ ಎಂದು ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಪ್ರಾಂಶುಪಾಲ ಗಿರೀಶ್ ಚಂದ್ರ ತ್ರಿಪಾಠಿಯವರು ಮಂಗಳವಾರ ಹೇಳಿದ್ದಾರೆ...
ಪ್ರತಿಭಟನಾ ಸ್ಥಳದಲ್ಲಿ ವಿದ್ಯಾರ್ಥಿನಿಯರು ಹಾಗೂ ಪೊಲೀಸರು
ಪ್ರತಿಭಟನಾ ಸ್ಥಳದಲ್ಲಿ ವಿದ್ಯಾರ್ಥಿನಿಯರು ಹಾಗೂ ಪೊಲೀಸರು
Updated on

ವಾರಣಾಸಿ: ಪ್ರತಿಭಟನಾನಿರತ ವಿದ್ಯಾರ್ಥಿನಿಯರ ಪೊಲೀಸರು ಯಾವುದೇ ರೀತಿಯ ಲಾಠಿಚಾರ್ಜ್ ಮಾಡಿಲ್ಲ ಎಂದು ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಪ್ರಾಂಶುಪಾಲ ಗಿರೀಶ್ ಚಂದ್ರ ತ್ರಿಪಾಠಿಯವರು ಮಂಗಳವಾರ ಹೇಳಿದ್ದಾರೆ. 

ಪ್ರತಿಭಟನೆ ವೇಳೆ ಪೊಲೀಸರು ವಿದ್ಯಾರ್ಥಿನಿಯರ ಮೇಲೆ ಲಾಠಿ ಚಾರ್ಜ್ ಮಾಡಿದ್ದರು ಎಂಬ ಆರೋಪಗಳನ್ನು ನಿರಾಕರಿಸಿರುವ ಅವರು, ಪೊಲೀಸರು ಯುವತಿಯರ ಮೇಲೆ ಲಾಠಿ ಚಾರ್ಜ್ ಮಾಡಿರಲಿಲ್ಲ. ಹೊರಗಿನಿಂದ ಬಂದ ಕೆಲಸವರು ಪ್ರತಿಭಟನಾಕಾರರೊಂದಿಗೆ ಸೇರಿಕೊಂಡಿದ್ದರು. ಈ ವೇಳೆ ಪೋಲೀಸರ ಮೇಲೆಯೇ ದಾಳಿ ನಡೆಸಲಾಗಿತ್ತು. ಬಳಿಕ ಸ್ಥಳದಲ್ಲಿ ಹಿಂಸಾಚಾರ ಸೃಷ್ಟಿಗೊಂಡಿತ್ತು ಎಂದು ಹೇಳಿದ್ದಾರೆ. 

ವಾರಣಾಸಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭೇಟಿ ನೀಡಿದ್ದರು. ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ಪ್ರತಿಭಟನೆ ಹಿಂಸಾಚಾರದ ಹಿಂದೆ ಕೆಲ ಪಟ್ಟಭದ್ರ ಹಿತಾಸಕ್ತಿಗಳ ಕೈವಾಡಗಳಿವೆ.

ಪ್ರಾಂಶುಪಾಲನಾಗಿ ನಾನು 2014ರಲ್ಲಿ ವಿಶ್ವವಿದ್ಯಾಲಯಕ್ಕೆ ಬಂದಾಗ ದೊಡ್ಡ ಮಟ್ಟದ ಪ್ರತಿಭಟನೆ ನಡೆಯುತ್ತಿತ್ತು. ಈ ವೇಳೆ 100ಕ್ಕೂ ಹೆಚ್ಚು ಯುವಕರು ಆಸ್ಪತ್ರೆಗೆ ದಾಖಲಾಗಿತ್ತು. ವಿಶ್ವವಿದ್ಯಾಲಯದ ಆವರಣದಲ್ಲಿ ಈ ರೀತಿಯ ಘಟನೆಗಳು ನಡೆಯುತ್ತಿರುತ್ತವೆ. ಇವುಗಳನ್ನು ನಿಲ್ಲಿಸಲು ಸಾಧ್ಯವಿಲ್ಲ. ಆದರೆ, ಈ ಬಾರಿ ನಡೆದಿರುವ ಪ್ರತಿಭಟನೆಯಲ್ಲಿ ಹೊರಗಿನವರ ಕೈವಾಡವಿದೆ. ರಾಜಕೀಯ ಪಕ್ಷಗಳ ಕೈವಾಡವಿದೆ. ವಿಶ್ವವಿದ್ಯಾಲಯ ಆವರಣದ ಶಾಂತಿಗೆ ಧಕ್ಕೆಯುಂಟು ಮಾಡಲು ಯತ್ನಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ. 

ಇದೇ ವೇಳೆ ವಿದ್ಯಾರ್ಥಿನಿಯರ ಭದ್ರತೆ ಕುರಿತ ಪ್ರಶ್ನೆಗೆ ಉತ್ತರಿಸುವ ಅವರು, ವಿಶ್ವವಿದ್ಯಾಲಯದ ಸುತ್ತಮುತ್ತಲಿನಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಬಹಳ ಹಿಂದೆಯೇ ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ಪ್ರಸ್ತುತ ಪ್ರತಿಭಟನೆ ನಡೆಸುತ್ತಿರುವ ಯುವತಿಯರೇ ಈ ಹಿಂದೆ ನಮ್ಮ ಬಳಿ ಬಂದು ಸಿಸಿಟಿವಿ ಕ್ಯಾಮೆರಾಗಳಿಂದ ನಮ್ಮ ಖಾಸಗಿತನಕ್ಕೆ ತೊಂದರೆಯಾಗುತ್ತಿದೆ ಎಂದು ಹೇಳಿದ್ದರು. ವಿಶ್ವವಿದ್ಯಾಲಯ 65 ಭಾಗಗಳ ಮೇಲೆ ಸಿಸಿಟಿವಿ ಕಣ್ಗಾವಲಿರಿಸಲಾಗಿದೆ. ಭದ್ರತೆ ಯಾವುದೇ ತೊಡಕಿಲ್ಲ. 

ನಿಯಮಗಳ ಪ್ರಕಾರ ವಿಶ್ವವಿದ್ಯಾಲಯದ ಭದ್ರತೆಗೆ ಮಾಜಿ ಯೋಧರನ್ನು ಭದ್ರತಾ ಸಿಬ್ಬಂದಿಯಾಗಿ ನೇಮಕ ಮಾಡಿಕೊಳ್ಳಬಹುದು. ಮಹಿಳಾ ಭದ್ರತಾಧಿಕಾರಿಗಳ ನೇಮಕಾತಿ ಕುರಿತಂತೆ ಪ್ರಕ್ರಿಯೆಗಳು ಮುಂದುವರೆದಿದೆ ಎಂದಿದ್ದಾರೆ. 

ಇದರಂತೆ ವಿಶ್ವವಿದ್ಯಾಲಯದ ಉಪ ಪ್ರಾಂಶುಪಾಲ ಪ್ರತಿಕ್ರಿಯೆ ನೀಡಿದ, ವಿಶ್ವವಿದ್ಯಾಲಯದ ಆವರಣದಲ್ಲಿ ಎಲ್ಲವೂ ಸಾಮಾನ್ಯವಾಗಿಯೇ ಇತ್ತು. ಹೊರಗಿನಿಂದ ಬಂದವರು ಪ್ರಚಾರದ ಉದ್ದೇಶದಿಂದ ವಿವಾದವನ್ನು ಹುಟ್ಟುಹಾಕಿದ್ದಾರೆ.

ವಿಶ್ವವಿದ್ಯಾಲಯದ ತೃತೀಯ ವರ್ಷದ ಇಬ್ಬರು ವಿದ್ಯಾರ್ಥಿನಿಯರು ಕಳೆದ ಗುರುವಾರ ರಾತ್ರಿ ತಮ್ಮ ಹಾಸ್ಟೆಲ್ ಗೆ ಹಿಂದಿರುತ್ತಿದ್ದ ವೇಲೆ ಭಾರತ್ ಕಲಾ ಭವನ್ ಬಳಿ ಬೈಕ್ ನಲ್ಲಿ ಬಂದಿರುವ ಬೀದಿ ಕಾಮಣ್ಣರು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಹೇಳಲಾಗುತ್ತಿತ್ತು. 

ಈ ಬಗ್ಗೆ ವಿದ್ಯಾರ್ಥಿನಿಯರು ಹಾಸ್ಟೆಲ್ ನ ಭದ್ರತಾ ಸಿಬ್ಬಂದಿಯ ಮೇಲ್ವಿಚಾರಕರಿಗೆ ಮಾಹಿತಿ ನೀಡಿದ್ದರು. ಆದರೆ, ವಿದ್ಯಾರ್ಥಿನಿಯರ ನೆರವಿಗೆ ಬರಬೇಕಿದ್ದ ಮೇಲ್ವಿಚಾರಕರು, ಸಂಜೆ ಬಳಿಕ ಹಾಸ್ಟೆಲ್ ಬಿಟ್ಟು ಹೊರಗಡೆ ಹೋಗಿದ್ದು ಯಾಕೆ ಎಂದು ವಿದ್ಯಾರ್ಥಿನಿಯರನ್ನೇ ದಬಾಯಿಸಿದ್ದಾರೆ. 

ಇದರಿಂದ ಆಕ್ರೋಶಗೊಂಡ ನೂರಾರು ವಿದ್ಯಾರ್ಥಿನಿಯರು ಶುಕ್ರವಾರ ಬೆಳಿಗ್ಗೆಯಿಂದಲೇ ಪ್ರತಿಭಟನೆ ನಡೆಸಲು ಆರಂಭಿಸಿದ್ದರು. ಆಡಳಿತ ಮಂಡಳಿತ ವರ್ತನೆಗೆ ತೀವ್ರ ಖಂಡನೆ ವ್ಯಕ್ತಪಡಿಸಿದ್ದರು.  

ಇದರಂತೆ ವಿದ್ಯಾರ್ಥಿನಿಯರ ಪ್ರತಿಭಟನೆ ಶನಿವಾರ ಹಿಂಸಾಚಾರಕ್ಕೆ ತಿರುಗಿತ್ತು. ಪೊಲೀಸರು ಪ್ರತಿಭಟನಾನಿರತ ವಿದ್ಯಾರ್ಥಿನಿಯರ ಮೇಲೆ ಲಾಠಿ ಚಾರ್ಜ್ ನಡೆಸಿದ್ದರು ಎಂಬ ಆರೋಪಗಳು ಕೇಳಿಬಂದಿದ್ದವು. 

ಘಟನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಗೂ ಹಲವಾರು ಉನ್ನತ ರಾಜಕೀಯ ನಾಯಕರು ಖಂಡನೆಗಳನ್ನು ವ್ಯಕ್ತಪಡಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com