ಕಲ್ಲು ತೂರಾಟ, ಹಿಂಸಾಚಾರ, ಭಯೋತ್ಪಾದನೆಯಿಂದ ತತ್ತರಿಸಿ ಹೋಗಿದ್ದ ಜಮ್ಮು ಮತ್ತು ಕಾಶ್ಮೀರದಲ್ಲಿ ಇದೀಗ ಶಾಂತಿಯ ಚಿಗುರುಗಳು ಮೊಳಕೆಯೊಡೆಯುತ್ತಿವೆ ಎಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರು ಹೇಳಿದ್ದಾರೆ...
ಶ್ರೀನಗರ: ಕಲ್ಲು ತೂರಾಟ, ಹಿಂಸಾಚಾರ, ಭಯೋತ್ಪಾದನೆಯಿಂದ ತತ್ತರಿಸಿ ಹೋಗಿದ್ದ ಜಮ್ಮು ಮತ್ತು ಕಾಶ್ಮೀರದಲ್ಲಿ ಇದೀಗ ಶಾಂತಿಯ ಚಿಗುರುಗಳು ಮೊಳಕೆಯೊಡೆಯುತ್ತಿವೆ ಎಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರು ಹೇಳಿದ್ದಾರೆ.
ಈ ಕುರಿತಂತೆ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿರುವ ಅವರು, ಜಮ್ಮು ಮತ್ತು ಕಾಶ್ಮೀರದಲ್ಲಿರುವ ಜನತೆ ಗೌರವಯುತವಾಗಿ ಜೀವನ ನಡೆಸಲು ಬೇಕಾದ ವಾತಾವರಣ ನಿರ್ಮಿಸುವತ್ತ ಸರ್ಕಾರ ಶ್ರಮ ಪಡುತ್ತಿದೆ ಎಂದು ಹೇಳಿದ್ದಾರೆ.
ಕಾಶ್ಮೀರದಲ್ಲಿ ಶಾಂತಿಯುತ ವಾತಾವರಣ ನಿರ್ಮಾಣ ಮಾಡುವತ್ತ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ಕ್ರಮಗಳನ್ನು ಮುಫ್ತಿಯವರು ಇದೇ ವೇಳೆ ಪ್ರಶಂಸಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಕಾಶ್ಮೀರದ ಜನರನ್ನು ಅಪ್ಪಿಕೊಳ್ಳಿ ಎಂದು ದೇಶದ ಜನತೆಗೆ ನೀಡಿದ ಸಂದೇಶ ಇದಕ್ಕೆ ಮೊದಲ ಹೆಜ್ಜೆಯಾಯಿತು.
ಕೆಲ ದಿನಗಳ ಹಿಂದಷ್ಟೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿಯವರು ಕಾಶ್ಮೀರದ ಯುವಕ ಬಿಲಾರ್ ದಾರ್ ಅವರ ಸಾಮಾಜಿಕ ಕಳಕಳಿಯನ್ನು ಶ್ಲಾಘಿಸಿದ್ದರು. ಇದು ಕಾಶ್ಮೀರರದ ಪತ್ರಿಕೆಗಳಲ್ಲಿ ಮುಖಪುಟದ ಸುತ್ತಿಯಾಯಿತು. ಸಾಮಾಜಿಕ ಜಾಲತಾಣಗಳಲ್ಲೂ ಇದು ಬಹು ಚರ್ಚೆಯ ವಿಷಯವಾಗಿತ್ತು. ಶಾಂತಿಯ ದಿನಗಳಿಗಾಗಿ ಜಮ್ಮು ಮತ್ತು ಕಾಶ್ಮೀರದ ಜನತೆ ಅತ್ಯಾಸಕ್ತಿಯಿಂದ ಎದುರು ನೋಡುತ್ತಿದ್ದಾರೆಂದು ತಿಳಿಸಿದ್ದಾರೆ.