ಕೇಂದ್ರದ ಮಾಜಿ ಹಣಕಾಸು ಸಚಿವ ಯಶವಂತ ಸಿನ್ಹಾ
ಕೇಂದ್ರದ ಮಾಜಿ ಹಣಕಾಸು ಸಚಿವ ಯಶವಂತ ಸಿನ್ಹಾ

ಇಂದಿನ ಆರ್ಥಿಕ ಅವ್ಯವಸ್ಥೆಗೆ ಯುಪಿಎ ಸರ್ಕಾರವನ್ನು ದೂಷಿಸುವುದು ಸರಿಯಲ್ಲ: ಯಶವಂತ ಸಿನ್ಹಾ

ದೇಶದಲ್ಲಿ ಎದುರಾಗಿರುವ ಆರ್ಥಿಕ ಅವ್ಯವಸ್ಥೆಗೆ ಈ ಹಿಂದೆ ಅಧಿಕಾರದಲ್ಲಿದ್ದ ಯುಪಿಎ ಸರ್ಕಾರವನ್ನು ದೂಷಿಸುವುದು ಸರಿಯಲ್ಲ ಎಂದು ಕೇಂದ್ರದ ಮಾಜಿ ಹಣಕಾಸು ಸಚಿವ ಯಶವಂತ ಸಿನ್ಹಾ ಅವರು ಹೇಳಿದ್ದಾರೆ...
ನವದೆಹಲಿ: ದೇಶದಲ್ಲಿ ಎದುರಾಗಿರುವ ಆರ್ಥಿಕ ಅವ್ಯವಸ್ಥೆಗೆ ಈ ಹಿಂದೆ ಅಧಿಕಾರದಲ್ಲಿದ್ದ ಯುಪಿಎ ಸರ್ಕಾರವನ್ನು ದೂಷಿಸುವುದು ಸರಿಯಲ್ಲ ಎಂದು ಕೇಂದ್ರದ ಮಾಜಿ ಹಣಕಾಸು ಸಚಿವ ಯಶವಂತ ಸಿನ್ಹಾ ಅವರು ಗುರುವಾರ ಹೇಳಿದ್ದಾರೆ.
ದೇಶದ ಆರ್ಥಿಕ ಬೆಳವಣಿಗೆ ಕುರಿತಂತೆ ಪತ್ರಿಯೊಂದಕ್ಕೆ ಲೇಖನ ಬರೆದಿದ್ದ ಯಶವಂತ ಸಿನ್ಹಾ ಅವರು, ಎರಡೂವರೆ ವರ್ಷದಲ್ಲಿ ಕೇಂದ್ರದ ಬಿಜೆಪಿ ಸರ್ಕಾರದ ಪ್ರತಿ ತಪ್ಪು ಹೆಜ್ಜೆಯ ಲೆಕ್ಕ ಕೊಟ್ಟಿದ್ದಾರೆ. ನೋಟು ಅಮಾನ್ಯ ದೇಶದ ಬಹುದೊಡ್ಡ ದುರಂತ. ಜಿಎಸ್ ಟಿಯನ್ನು ಅವಸರದಲ್ಲಿ ಏಕೆ ಜಾರಿ ಮಾಡಬೇಕಿತ್ತು . ಪ್ರಸ್ತುತ ನಾನು ಎತ್ತಿರುವ ದನಿ ಕೇವಲ ನನ್ನದಷ್ಟೇ ಅಲ್ಲ. ಬಿಜೆಪಿಯಲ್ಲೇ ಇರುವ ಹೇಳಬೇಕೆನಿಸಿದರೂ ಹೇಳಲಾರದೇ ಕುಳಿತಿರುವಂಥ ಅಂಖ್ಯಾತರ ಧ್ವನಿ ಎಂದು ಹೇಳಿದ್ದರು. 
ಯಶವಂತ ಸಿನ್ಹಾ ಅವರ ಹೇಳಿಕೆಗೆ ಸಹಜವಾಗಿಯೇ ಕಾಂಗ್ರೆಸ್ ನಾಯಕರು ಬೆಂಬಲ ಹಾಗೂ ಶ್ಲಾಘನೆ ವ್ಯಕ್ತಪಡಿಸುತ್ತಿದ್ದು, ಬಿಜೆಪಿ ಹೇಳಿಕೆಗಳನ್ನು ತಿರಸ್ಕರಿಸಿದೆ. 
ತಮ್ಮ ಲೇಖನ ಕುರಿತೆತ ವ್ಯಕ್ತವಾಗಿರುವ ಟೀಕಿಗಳ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಯಶವಂತ ಸಿನ್ಹಾ ಅವರು, ನಮ್ಮ ಅಧಿಕಾರದ ಅವಧಿಯಲ್ಲಿ ನಮಗೆ ಸಂಪೂರ್ಣ ಅವಕಾಶಗಳು ದೊರಕಿತ್ತು. ಹೀಗಾಗಿ ದೇಶದಲ್ಲಿ ಎದುರಾಗಿರುವ ಆರ್ಥಿಕ ಅವ್ಯವಸ್ಥೆಗೆ ಯುಪಿಎ ಸರ್ಕಾರವನ್ನೂ ದೂಷಿಸಬಾರದು ಎಂದು ಹೇಳಿದ್ದಾರೆ. 
ಜನರು ಉದ್ಯೋಗವನ್ನು ಬಯಸುತ್ತಿದ್ದಾರೆ. ಆದರೆ, ದೇಶದಲ್ಲಿ ಎದುರಾಗಿರುವ ಆರ್ಥಿಕ ಅವ್ಯವಸ್ಥೆಯಿಂದಾಗಿ ಜನತೆ ಕೆಲಸವಿಲ್ಲವೆಂದು ದುಃಖಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. 
ಸಂಪೂರ್ಣ ಬೆಂಬಲ ನೀಡಿ ನಾನೂ ಕೂಡ ಸರಕು ಮತ್ತು ಸೇವಾ ತೆರಿಕೆಯನ್ನು ಒಪ್ಪಿಕೊಂಡಿದ್ದೆ. ಜಿಎಸ್ ಟಿ ಜಾರಿಗೆ ತಂದ ರೀತಿಯಲ್ಲಿ ಸಮಸ್ಯೆಯಿತ್ತು. ನೋಟು ನಿಷೇಧದ ಬಳಿಕ ಜಿಎಸ್ ಟಿ ಜಾರಿಗೆತಂದಿದ್ದು ಎಲ್ಲರಿಗೂ ದೊಡ್ಡ ಆಘಾತವನ್ನು ತಂದಿತ್ತು ಎಂದಿದ್ದಾರೆ. 
ಇದೇ ವೇಳೆ ಕೇಂದ್ರ ಸರ್ಕಾರ ನೋಟು ನಿಷೇಧ ಕುರಿತಂತೆ ಟೀಕೆ ಮಾಡಿರುವ ಅವರು, ದೇಶದ ಆರ್ಥಿಕ ಪರಿಸ್ಥಿತಿ ಸರಿಯಿಲ್ಲದ ಸಂದರ್ಭದಲ್ಲಿ ನೋಟು ನಿಷೇಧ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು ಎಂದು ತಿಳಿಸಿದ್ದಾರೆ.
ಬಳಿಕ ರಾಜನಾಥ್ ಸಿಂಗ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ, ರಾಜನಾಥ್ ಸಿಂಗ್ ಹಾಗೂ ಪಿಯೂಫ್ ಗೋಶಾಲ್ ಅವರಿಗೆ ಆರ್ಥಿಕತೆಯ ಕುರಿತು ನನಗಿಂತಲೂ ಹೆಚ್ಚು ತಿಳಿದುಕೊಂಡಿರುವ ವ್ಯಕ್ತಿಗಳಾಗಿರಬೇಕು. ಹೀಗಾಗಿ ಅವರು ವಿಶ್ವಾದ ಆರ್ಥಿಕತೆಗೆ ಭಾರತವೇ ಬೆನ್ನುಲುಬಾಗಿದೆ ಎಂದು ಚಿಂತಿಸುತ್ತಿದ್ದಾರೆ. ಇದನ್ನು ನಾನು ಒಪ್ಪುವುದಿಲ್ಲ ಎಂದಿದ್ದಾರೆ. 
ಯಶವಂತ ಸಿನ್ಹಾ ಅವರ ಹೇಳಿಕೆಗೆ ನಿನ್ನೆಯಷ್ಟೇ ಪ್ರತಿಕ್ರಿಯೆ ನೀಡಿದ್ದ ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರು, ಭಾರತ ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎಂಬುದನ್ನು ಜಗತ್ತೇ ಒಪ್ಪಿಕೊಂಡಿದೆ. ಈ ಅಂಶವನ್ನು ಯಾರೊಬ್ಬರೂ ಮರೆಯುವಂತಿಲ್ಲ. ಆರ್ಥಿಕತೆಯ ವಿಷಯದಲ್ಲಿ, ಅಂತರಾಷ್ಟ್ರೀಯ ದೃಷ್ಟಿಕೋನದಲ್ಲಿ ಭಾರತದ ವಿಶ್ವಾಸಾರ್ಹತೆ ವೃದ್ಧಿಯಾಗಿದೆ ಎಂದು ಹೇಳಿದ್ದರು. 

Related Stories

No stories found.

Advertisement

X
Kannada Prabha
www.kannadaprabha.com