ಸಾಂದರ್ಭಿಕ ಚಿತ್ರ
ದೇಶ
ಕೇರಳ: ಸಂಬಂಧಿಯಿಂದಲೇ 7 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಕೊಲೆ
7 ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಸಂಬಂಧಿಕನಿಂದಲೇ ಅತ್ಯಾಚಾರ ನಡೆದು, ಬರ್ಬರವಾಗಿ ಹತ್ಯೆ ಮಾಡಿರುವ ಘಟನೆಯೊಂದು ಕೇರಳದ...
ಕೊಲ್ಲಂ: 7 ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಸಂಬಂಧಿಕನಿಂದಲೇ ಅತ್ಯಾಚಾರ ನಡೆದು, ಬರ್ಬರವಾಗಿ ಹತ್ಯೆ ಮಾಡಿರುವ ಘಟನೆಯೊಂದು ಕೇರಳದ ತಿರುವನಂತಪುರಂನಲ್ಲಿ ನಡೆದಿದೆ.
ನಿನ್ನೆ ಬೆಳಿಗ್ಗೆ ಶಾಲೆಗೆ ಹೋಗಿದ್ದ ಬಾಲಕಿ ಪುನಃ ಮನೆಗೆ ಬಂದಿಲ್ಲ. ಕತ್ತಲು ಕವಿಯುತ್ತಿದ್ದಂತೆಯೇ ಪೋಷಕರಲ್ಲಿ ಭೀತಿ ಎದುರಾಗಿದೆ. ಬಳಿಕ ಬಾಲಕಿ ನಾಪತ್ತೆಯಾಗಿರುವ ಕುರಿತಂತೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇದರಂತೆ ಬಾಲಕಿಗಾಗಿ ಹುಡುಕಾಟ ಆರಂಭಿಸಿದ್ದ ಪೊಲೀಸರಿಗೆ ತಿರುವನಂತಪುರಂ ನಿಂದ 60 ಕಿ.ಮೀ ದೂರದಲ್ಲಿರುವ ಕಲುತುಪುಝಾದ ರಬ್ಬರ್ ಎಸ್ಟೇಟ್ ನಲ್ಲಿ ಬಾಲಕಿಯ ಶವ ದೊರಕಿದೆ.
ವಿಚಾರಣೆ ವೇಳೆ ಬಾಲಕಿಯ ಸಂಬಂಧಿಯಾಗಿದ್ದ ರಾಜೇಶ್ ಮೇಲೆ ಪೊಲೀಸರಿಗೆ ಹಲವು ಸಂಶಯಗಳು ಉಂಟಾಗಿದೆ. ಇದರಂತೆ ರಾಜೇಶ್ ನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ಈ ವೇಳೆ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ತಾನೇ ಹತ್ಯೆ ಮಾಡಿರವುದಾಗಿ ರಾಜೇಶ್ ತಪ್ಪೊಪ್ಪಿಕೊಂಡಿದ್ದಾನೆಂದು ಹಿರಿಯ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ