ಮಮತಾ ಬ್ಯಾನರ್ಜಿ
ದೇಶ
ದುರ್ಗಾಪೂಜೆಗೆ ಮಮತಾ ಬ್ಯಾನರ್ಜಿ ರಚನೆಯ ಥೀಮ್ ಸಾಂಗ್!
ಪಶ್ಚಿಮ ಬಂಗಾಳದಲ್ಲಿ ದುರ್ಗಾಪೂಜೆ ಅದ್ಧೂರಿಯಿಂದ ನಡೆಯುತ್ತಿದ್ದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದುರ್ಗಾ ಪೂಜೆಗೆ ರಚಿಸಿರುವ ಥೀಮ್ ಸಾಂಗ್ ಜನಪ್ರಿಯತೆ ಗಳಿಸಿದೆ.
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ದುರ್ಗಾಪೂಜೆ ಅದ್ಧೂರಿಯಿಂದ ನಡೆಯುತ್ತಿದ್ದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದುರ್ಗಾ ಪೂಜೆಗೆ ರಚಿಸಿರುವ ಥೀಮ್ ಸಾಂಗ್ ಜನಪ್ರಿಯತೆ ಗಳಿಸಿದೆ.
ವಿವಿಧತೆ, ಏಕತೆಯ ಎಳೆಯನ್ನಿಟ್ಟುಕೊಂಡು ಮಮತಾ ಬ್ಯಾನರ್ಜಿ ಹಾಡನ್ನು ರಚಿಸಿದ್ದು, ಸುರುಚಿ ಸಂಘ ಪೂಜೆಯಲ್ಲಿ ಹಾಕಲಾಗುತ್ತಿದೆ. ಥೀಮ್ ಸಾಂಗ್ ನ್ನು ಶ್ರೇಯಾ ಘೋಷಾಲ್ ಹಾಡಿದ್ದು, ಥೀಮ್ ಸಾಂಗ್ ನ ವಿಡಿಯೋವನ್ನು ಮಮತಾ ಬ್ಯಾನರ್ಜಿ ತಮ್ಮ ಫೇಸ್ ಬುಕ್ ಪೇಜ್, ಟ್ವಿಟರ್ ಖಾತೆಯಲ್ಲಿ ಅಪ್ ಲೋಡ್ ಮಾಡಿದ್ದಾರೆ.
ಮಮತಾ ಬ್ಯಾನರ್ಜಿ ಈ ಹಿಂದೆಯೂ ಸಹ ಗೀತರಚನೆ ಮಾಡಿದ್ದು, ಕಳೆದ ವರ್ಷದ ಹಾಡಿಗೆ ಗಾಯಕರಾದ ಜೀತ್ ಗಂಗೂಲಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಪ್ರತಿಯೊಬ್ಬ ಬೆಂಗಾಲಿಯೂ ದುರ್ಗಾ ಪೂಜೆಯೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ಸುರುಚಿ ಸಂಘ ಪೂಜೆಯ ಸಂಗೀತದೊಂದಿಗೆ ನನಗೆ ಅವಿನಾಭಾವ ಸಂಬಂಧವಿದೆ ಎಂದು ಗಂಗೂಲಿ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ