ಹನಿಪ್ರೀತ್'ಗಾಗಿ ತೀವ್ರಗೊಂಡ ಹುಡುಕಾಟ: ಬಿಕಾನೆರ್ 6 ಪ್ರದೇಶಗಳಲ್ಲಿ ಪೊಲೀಸರ ದಾಳಿ

ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೋಷಿ ಎಂದು ಸಾಬೀತಾದ ಬಳಿಕ ಜೈಲುಪಾಲಾಗಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಮ್ ಸಿಂಗ್ ಅವರ ದತ್ತು ಪುತ್ರಿ ಹನಿಪ್ರೀತ್ ಇನ್ಸಾನ್ ರನ್ನು ಬಂಧನಕ್ಕೊಳಪಡಿಸಲು ಹರಿಯಾಣ ಪೊಲೀಸರು ಹರಸಾಹಸ ಪಡುತ್ತಿದ್ದು...
ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಮ್ ಸಿಂಗ್ ಹಾಗೂ ಅವರ ದತ್ತು ಪುತ್ರಿ ಹನಿಪ್ರೀತ್ ಇನ್ಸಾನ್
ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಮ್ ಸಿಂಗ್ ಹಾಗೂ ಅವರ ದತ್ತು ಪುತ್ರಿ ಹನಿಪ್ರೀತ್ ಇನ್ಸಾನ್
ಬಿಕಾನೆರ್: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೋಷಿ ಎಂದು ಸಾಬೀತಾದ ಬಳಿಕ ಜೈಲುಪಾಲಾಗಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಮ್ ಸಿಂಗ್ ಅವರ ದತ್ತು ಪುತ್ರಿ ಹನಿಪ್ರೀತ್ ಇನ್ಸಾನ್ ರನ್ನು ಬಂಧನಕ್ಕೊಳಪಡಿಸಲು ಹರಿಯಾಣ ಪೊಲೀಸರು ಹರಸಾಹಸ ಪಡುತ್ತಿದ್ದು, ಬಿಕಾನೆರ್'ನ 6 ಪ್ರದೇಶಗಳಲ್ಲಿ ದಾಳಿ ನಡೆಸಿದ್ದಾರೆಂದು ಶನಿವಾರ ತಿಳಿದುಬಂದಿದೆ. 
ಪಂಚಕುಲದ ಸೆಕ್ಟರ್-3 ಪೊಲೀಸ್ ಠಾಣೆಯ ಅಧಿಕಾರಿಗಳ ತಂಡ ಪಿಲಿಬಂಗಾ, ಲುಂಕರ್ನ್ಸಾರ್, ಶ್ರೀ ಕೊಲಯತ್, ಜಮ್ಸರ್, ಜಗ್ದೆವಾಲಾ ಮತ್ತು ಗುರುಸಾರ್ ಮೊದಿಯಾ ಪ್ರದೇಶಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆಂದು ತಿಳಿದುಬಂದಿದೆ. 
ಪೊಲೀಸ್ ಅಧಿಕಾರಿ ಮುಕೇಶ್ ಮಲ್ಹೋತ್ರಾ, ಸರ್ಕನ್ ಇನ್ಸ್ ಪೆಕ್ಟರ್ ಅಮನ್ ಕುಮಾರ್, ಎಸ್ಐ ನರೇಶ್ ಮತ್ತು ಇತರೆ ಮಹಿಳಾ ಅಧಿಕಾರಿಗಳ ಸೇರಿದಂತೆ ಸ್ಥಳೀಯ ಪೊಲೀಸರು ದಾಳಿ ನಡೆಸಿದ್ದಾರೆಂದು ವರದಿಗಳು ತಿಳಿಸಿವೆ. 
ಡೇರಾ ಮುಖ್ಯಸ್ಥನ ಅನುಯಾಗಿದ್ದ ರಾಕೇಶ್ ಕುಮಾರ್ ನನ್ನು ಈ ಹಿಂದೆ ಬಂಧನಕ್ಕೊಳಪಡಿಸಲಾಗಿತ್ತು. ವಿಚಾರಣೆ ವೇಳೆ ರಾಮ್ ರಹೀಮ್ ಬಿಕಾನೆರ್ ನಲ್ಲೂ ಆಶ್ರಮ ನಡೆಸುತ್ತಿರುವುದಾಗಿ ಮಾಹಿತಿ ನೀಡಿದ್ದ. ಹೀಗಾಗಿ ಹರಿಯಾಣ ಪೊಲೀಸರ ತಂಡ ಸ್ಥಳೀಯರ ನೆರವಿನೊಂದಿಗೆ ಬಿಕಾನೆರ್'ನಲ್ಲಿರುವ ಡೇರಾ ಅಡಗುತಾಣಗಳ ಮೇಲೆ ದಾಳಿ ನಡೆಸಿತ್ತು ಎಂದು ಮಲ್ಹೋತ್ರಾ ಅವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com