ಹಿಂದೂಗಳು ಜಾತ್ಯಾತೀತರಾಗಿರುವುದರಿಂದ ಭಾರತ ಜಾತ್ಯಾತೀತ ರಾಷ್ಟ್ರವಾಗಿದೆ: ಖುರೇಷಿ

ಹಿಂದೂಗಳು ನಿಜಜ್ವಾದ ಜಾತ್ಯಾತೀತರಾಗಿದ್ದು, ಮುಸ್ಲಿಮರು ಬೇರೆ ರಾಷ್ಟ್ರಗಳಿಗಿಂತ ಭಾರತದಲ್ಲಿ ಹೆಚ್ಚು ಸುರಕ್ಷಿತರಾಗಿದ್ದಾರೆ ಎಂದು ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ ಖುರೇಷಿ ಹೇಳಿದ್ದಾರೆ.
ಹಿಂದೂಗಳು ಜಾತ್ಯಾತೀತರಾಗಿರುವುದರಿಂದ ಭಾರತ ಜಾತ್ಯಾತೀತ ರಾಷ್ಟ್ರವಾಗಿದೆ: ಖುರೇಷಿ
ನವದೆಹಲಿ: ಹಿಂದೂಗಳು ನಿಜಜ್ವಾದ ಜಾತ್ಯಾತೀತರಾಗಿದ್ದು, ಮುಸ್ಲಿಮರು ಬೇರೆ ರಾಷ್ಟ್ರಗಳಿಗಿಂತ ಭಾರತದಲ್ಲಿ ಹೆಚ್ಚು ಸುರಕ್ಷಿತರಾಗಿದ್ದಾರೆ ಎಂದು ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ ಖುರೇಷಿ ಹೇಳಿದ್ದಾರೆ. 
ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿರುವುದು ಸತ್ಯ. ಕೋಮು ದೃವೀಕರಣದ ಪ್ರಯತ್ನ ನಡೆಯುವವರೆಗೂ ಈ ಅಸಹಿಷ್ಣುತೆಯನ್ನು ಕೊನೆಗಾಣಿಸಲು ಸಾಧ್ಯವಾಗುವುದಿಲ್ಲ ಎಂದು ಖುರೇಷಿ ಅಭಿಪ್ರಾಯಪಟ್ಟಿದ್ದಾರೆ. ಹೌದು, ದೇಶದಲ್ಲಿ ಅಸಹಿಷ್ಣುತೆ ಹೆಚ್ಚಾಗುತ್ತಿದೆ, ಅದೂ 5-10 ವರ್ಷಗಳಿಂದ ಹೆಚ್ಚಾಗುತ್ತಿದೆ ಓಟ್ ಬ್ಯಾಂಕ್ ರಾಜಕಾರಣದಿಂದ ಈ ರೀತಿಯಾಗುತ್ತಿದೆ ಎಂದು ಖುರೇಷಿ ಅಭಿಪ್ರಾಯಪಟ್ಟಿದ್ದಾರೆ. 
ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಗೆ ಓಟ್ ಬ್ಯಾಂಕ್ ರಾಜಕಾರಣವೇ ಕಾರಣವಾಗಿದೆ, ಭಾರತ ಜಾತ್ಯಾತೀತ ರಾಷ್ಟ್ರ ಎಂಬುದರಲ್ಲಿ ಅನುಮಾನವಿಲ್ಲ ಏಕೆಂದರೆ ಹಿಂದೂಗಳು ಜಾತ್ಯಾತೀತರಾಗಿದ್ದಾರೆ. ಹಿಂದೂಗಳ ಸಂಸ್ಕೃತಿಯೇ ಜಾತ್ಯಾತೀತವಾದದ್ದು ಅದೇ ಭಾರತದ ಮೂಲಭೂತ ಲಕ್ಷಣವೂ ಆಗಿದೆ ಎಂದು ಖುರೇಷಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com