5 ವರ್ಷಗಳಲ್ಲಿ ಭಾರತ ಮತ್ತೊಂದು ಸಿಲಿಕಾನ್ ವ್ಯಾಲಿಯಾಗಬಹುದು: ವಿಶ್ವ ಬ್ಯಾಂಕ್

ಹೊಸತನ್ನು ಅನ್ವೇಷಿಸುವ ಪರಿಸರವನ್ನು ಉತ್ತೇಜಿಸಿದರೆ ಭಾರತಕ್ಕೆ ಕೇವಲ 5 ವರ್ಷಗಳಲ್ಲಿ ಮತ್ತೊಂದು ಸಿಲಿಕಾನ್ ವ್ಯಾಲಿಯಾಗುವ ಸಾಮರ್ಥ್ಯವಿದೆ ಎಂದು ವಿಶ್ವ ವ್ಯಾಂಕ್ ಹೇಳಿದೆ.
ವಿಶ್ವಬ್ಯಾಂಕ್
ವಿಶ್ವಬ್ಯಾಂಕ್
ನವದೆಹಲಿ: ಹೊಸತನ್ನು ಅನ್ವೇಷಿಸುವ ಪರಿಸರವನ್ನು ಉತ್ತೇಜಿಸಿದರೆ ಭಾರತಕ್ಕೆ ಕೇವಲ 5 ವರ್ಷಗಳಲ್ಲಿ ಮತ್ತೊಂದು ಸಿಲಿಕಾನ್ ವ್ಯಾಲಿಯಾಗುವ ಸಾಮರ್ಥ್ಯವಿದೆ ಎಂದು ವಿಶ್ವ ವ್ಯಾಂಕ್ ಹೇಳಿದೆ. 
ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಅನ್ವೇಷಣೆಗಳು ನಡೆಯುತ್ತಿರುವುದರ ಬಗ್ಗೆ ವರದಿಯನ್ನು ಪ್ರಕಟಿಸಿರುವ ವಿಶ್ವ ಬ್ಯಾಂಕ್ ನ ಭಾರತೀಯ ಮುಖ್ಯಸ್ಥ ಜುನೈದ್ ಕಮಲ್ ಅಹ್ಮದ್, ಪ್ರಪಂಚ ದಿನದಿಂದ ದಿನಕ್ಕೆ ಬದಲಾಗುತ್ತಿದ್ದು, ಮುಂದಿನ 5 ವರ್ಷಗಳಲ್ಲಿ ನಾವು ಭಾರತದಲ್ಲಿ ಮತ್ತೊಂದು ಸಿಲಿಕಾನ್ ವ್ಯಾಲಿಯನ್ನು ನೋಡಬಹುದು ಎಂದು ಹೇಳಿದ್ದಾರೆ.
ಭಾರತದಲ್ಲಿ ಸಂಸ್ಥೆಗಳು  ನಿಂತಲ್ಲೇ ನಿಂತಿದ್ದು, ಅನ್ವೇಷಣೆಯ ಪರಿಸರವನ್ನು ಉತ್ತೇಜಿಸುವ ಅಗತ್ಯವಿದೆ, ಅಭಿವೃದ್ಧಿಶೀಲ ರಾಷ್ಟ್ರಗಳ ಪೈಕಿ ರಾಷ್ಟ್ರೀಯ ಇನ್ನೋವೇಷನ್ ವ್ಯವಸ್ಥೆ ವಿಸ್ತಾರಗೊಳ್ಳಬೇಕಿದೆ ಎಂದೂ ಜುನೈದ್ ಕಮಲ್ ಅಹ್ಮದ್ ಅಭಿಪ್ರಾಯಪಟ್ಟಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com