ಜಾರ್ಖಾಂಡ್: ಅಪ್ರಾಪ್ತ ಬಾಲಕಿಯೊಂದಿಗೆ ವಿವಾಹಕ್ಕೆ ಒತ್ತಾಯ, ವಿರೋಧಿಸಿದ್ದಕ್ಕೆ ಒಂದೇ ಕುಟುಂಬದ ಐವರನ್ನು ಹತ್ಯೆಗೈದ ವಿವಾಹಿತ

ಅಪ್ರಾಪ್ತ ಬಾಲಕಿಯೊಂದಿಗೆ ವಿವಾಹ ಮಾಡಿಕೊಳ್ಳುತ್ತೇನೆಂದು ಒತ್ತಾಯ ಮಾಡುತ್ತಿದ್ದ ವಿವಾಹಿತನೊಬ್ಬ, ಇದಕ್ಕೆ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದಕ್ಕೆ ತನ್ನದೇ ಕುಟುಂಬದ ಐವರನ್ನು ಹತ್ಯೆ ಮಾಡಿರುವ ಘಟನೆ ಜಾರ್ಖಾಂಡ್'ನ ಪಶ್ಚಿಮ ಸಿಂಘ್ಭೂಮ್ ಎಂಬ ಜಿಲ್ಲೆಯಲ್ಲಿ ನಡೆದಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ಪಾಟ್ನ; ಅಪ್ರಾಪ್ತ ಬಾಲಕಿಯೊಂದಿಗೆ ವಿವಾಹ ಮಾಡಿಕೊಳ್ಳುತ್ತೇನೆಂದು ಒತ್ತಾಯ ಮಾಡುತ್ತಿದ್ದ ವಿವಾಹಿತನೊಬ್ಬ, ಇದಕ್ಕೆ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದಕ್ಕೆ ತನ್ನದೇ ಕುಟುಂಬದ ಐವರನ್ನು ಹತ್ಯೆ ಮಾಡಿರುವ ಘಟನೆ ಜಾರ್ಖಾಂಡ್'ನ ಪಶ್ಚಿಮ ಸಿಂಘ್ಭೂಮ್ ಎಂಬ ಜಿಲ್ಲೆಯಲ್ಲಿ ನಡೆದಿದೆ. 
ತೊಪೈ ಬೌಪೈ ಹತ್ಯೆ ಮಾಡಿದ ಆರೋಪಿಯಾಗಿದ್ದಾನೆ. ಆರೋಪಿಯನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. 
ಮುಗಿ ಸಿರ್ಕಾ (17) ಯುವತಿಯನ್ನು ವಿವಾಹವಾಗಲು ತೊಪೈ ಬಯಸಿದ್ದ. ಇದಕ್ಕೆ ಯುವತಿಯ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹಿನ್ನಲೆಯಲ್ಲಿ ತೀವ್ರವಾಗಿ ಕೆಂಡಾಮಂಡಲಗೊಂಡ ತೊಪೈ ಬಾಲಕಿ ಮುಗಿ ಸಿರ್ಕಾ ಸೇರಿ ಆಕೆಯ ತಂದೆ ರಾಮ್ ಸಿಂಗ್ ಸಿರ್ಕಾ, ಪತ್ನಿ, ಹಾಗೂ ಅವರ ಇಬ್ಬರು ಗಂಡು ಮಕ್ಕಳನ್ನು ಹತ್ಯೆ ಮಾಡಿದ್ದಾರೆ. 
ಒಂದೇ ಕುಟುಂಬ ಐವರು ಮಾರ್ಚ್ 15 ರಿಂದಲೂ ನಾಪತ್ತೆಯಾಗಿರುವ ಹಿನ್ನಲೆಯಲ್ಲಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಾರ್ಚ್ 27 ರಂದು ರುಂಡವಿಲ್ಲದ ದೇಹವೊಂದು ಅರಣ್ಯ ಪ್ರದೇಶದಲ್ಲಿ ದೊರಕಿದ್ದು. ಈ ದೇಹ ರಾಮ್ ಸಿಂಗ್ ಸಿರ್ಕಾ ಅವರದ್ದೇ ಎಂದು ಹೇಳಲಾಗಿತ್ತು. ನಂತರ ತನಿಖೆ ನಡೆಸಿದ್ದ ಪೊಲೀಸರಿಗೆ ಮತ್ತೆ ನಾಲ್ಕು ಮೃತದೇಹಗಳು ದೊರಕಿದೆ. 
ಮಾರ್ಚ್.14 ರಂದು 8 ಮಂದಿ ದುಷ್ಕರ್ಮಿಗಳೊಂದಿಗೆ ರಾಮ್ ಸಿಂಗ್ ಸಿರ್ಕಾ ಅವರ ಮನೆಗೆ ಬಂದಿದ್ದಾರೆ. ಘಟನೆ ವೇಳೆ ರಾಮ್ ಸಿಂಗ್ ಅವರು ಮಾರುಕಟ್ಟೆಗೆ ಹೋಗಿದ್ದರು. ಈ ವೇಳೆ ಮನೆಗೆ ನುಗ್ಗಿರುವ ಆರೋಪಿಗಳು ರಾಮ್ ಸಿಂಗ್ ಅವರ ಪುತ್ರಿ ಮುಗಿ, ಪುತ್ರರಾದ ಕೊಡ ಮತ್ತು ಸೊನಾ ಮತ್ರು ಪತ್ನಿ ಪನೊ ಕುಐ ಎಲ್ಲರನ್ನೂ ಹತ್ಯೆ ಮಾಡಿದ್ದಾನೆ. ರಾತ್ರಿ ಸಿರ್ಕಾರ ಅವರು ಮನೆಗೆ ಬಂದಾಗ ನಂತರ ಸಿರ್ಕಾರ ಅವರ ರುಂಡ ಕಡಿದು ಹತ್ಯೆ ಮಾಡಿದ್ದಾನೆಂದು ತಿಳಿದುಬಂದಿದೆ. 
ಪ್ರಕರಣ ಸಂಬಂಧ ತೊಪೈ ಸೇರಿ ಒಟ್ಟು 9 ಮಂದಿಯನ್ನು ಬಂಧನಕ್ಕೊಳಪಡಿಸಿರುವ ಪೊಲೀಸರು, ವಿಚೀರಣೆ ನಡೆಸುತ್ತಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com