ಎಸ್ ಸಿ/ಎಸ್ ಟಿ ಕಾಯ್ದೆ ಸಂಬಂಧ ಭುಗಿಲೆದ್ದ ಗಲಭೆಯಲ್ಲಿ ಮಾಯಾವತಿ ಪಕ್ಷದ ಜನಪ್ರತಿನಿಧಿಗಳ ಕೈವಾಡ!

ಎಸ್ ಸಿ/ಎಸ್ ಟಿ ಕಾಯ್ದೆ ಸಂಬಂಧ ಭುಗಿಲೆದ್ದ ಗಲಭೆಯಲ್ಲಿ ಮಾಯಾವತಿ ಪಕ್ಷದ ಜನಪ್ರತಿನಿಧಿಗಳ ಕೈವಾಡವಿದೆ ಎಂದು ಉತ್ತರ ಪ್ರದೇಶ ಪೊಲೀಸರು ತಿಳಿಸಿದ್ದಾರೆ.
ಪ್ರತಿಭಟನಾಕಾರರಿಂದ ಹಿಂಸಾಚಾರ
ಪ್ರತಿಭಟನಾಕಾರರಿಂದ ಹಿಂಸಾಚಾರ
ಲಖನೌ: ಎಸ್ ಸಿ/ಎಸ್ ಟಿ ಕಾಯ್ದೆ ಸಂಬಂಧ ಭುಗಿಲೆದ್ದ ಗಲಭೆಯಲ್ಲಿ ಮಾಯಾವತಿ ಪಕ್ಷದ ಜನಪ್ರತಿನಿಧಿಗಳ ಕೈವಾಡವಿದೆ ಎಂದು ಉತ್ತರ ಪ್ರದೇಶ ಪೊಲೀಸರು ತಿಳಿಸಿದ್ದಾರೆ.
ಎಸ್ ಸಿ/ಎಸ್ ಟಿ ಕಾಯ್ದೆ ಸಂಬಂಧ ದಲಿತಪರ ಸಂಘಟನೆಗಳು ನಿನ್ನೆ ಕರೆ ನೀಡಿದ್ದ ಭಾರತ್ ಬಂದ್ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಕಲ್ಲು ತೂರಾಟ, ಪರಸ್ಪರ ಗುಂಪು ಘರ್ಷಣೆಗಳಂತಹ ಪ್ರಕರಣಗಲ್ಲಿ ಒಟ್ಟು 8 ಮಂದಿ ಸಾವನ್ನಪ್ಪಿದ್ದಾರೆ. ಇದೀಗ ಈ ಹಿಂಸಾಚಾರ ಸಂಬಂಧ ಉತ್ತರ ಪ್ರದೇಶ ಪೊಲೀಸರು ಹೇಳಿಕೆ ನೀಡಿದ್ದು, ಗಲಭೆಗೆ ಮಾಯಾವತಿ ಅವರ ಸಮಾಜವಾದಿ ಪಕ್ಷದ ಜನಪ್ರತಿನಿಧಿಗಳ ಪ್ರಚೋದನೆಯೇ ಕಾರಣ ಎಂದು ಹೇಳಿದ್ದಾರೆ.
ಪ್ರಮುಖವಾಗಿ ಮೀರುತ್ ನ ಹಸ್ತಿನಾಪುರ ವಿಧಾನಸಭಾ ಕ್ಷೇತ್ರದ ಬಿಎಸ್ ಪಿ ಶಾಸಕ ಯೋಗೇಶ್ ವರ್ಮಾ ದಲಿತ ಭಾರತ್ ಬಂದ್ ವೇಳೆ ಪ್ರಚೋದನಾತ್ಮರ ಹೇಳಿಕೆ ನೀಡಿದ್ದರು. ಇದು ಹಿಂಸಾಚಾರಕ್ಕೆ ಕಾರಣ ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ.  ಉತ್ತರ ಪ್ರದೇಶವೊಂದರಲ್ಲೇ ಒಟ್ಟು ಇಬ್ಬರು ದಲಿತ ಪ್ರತಿಭಟನಾಕಾರರು ಸಾವನ್ನಪ್ಪಿದ್ದು, ಸುಮಾರು 75ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಹಿಂಸಾಚಾರ ಪ್ರಕರಣ ಸಂಬಂಧ ಉತ್ತರ ಪ್ರದೇಶದಾದ್ಯಂತ ಒಟ್ಟು 200 ಅಧಿಕ ಮಂದಿ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com