ಕೇರಳ ವಿಮಾನ ನಿಲ್ದಾಣದಲ್ಲಿನ ಪತ್ತೆಕಾರಕದಿಂದ ಗೋಲ್ಡನ್ ಪೇಸ್ಟ್ ವ್ಯಕ್ತಿಯ ಬಂಧನ

ದೇಶದಲ್ಲಿನ ಅನೇಕ ವಿಮಾನ ನಿಲ್ದಾಣಗಳ ಮೂಲಕ ಕಳ್ಳ ಮಾರ್ಗದ ಮೂಲಕ ಚಿನ್ನವನ್ನು ಸಾಗಣೆ ಮಾಡಲಾಗುತ್ತಿದೆ.ಇತ್ತೀಚಿಗೆ ಅಚ್ಚರಿಯ ರೀತಿಯಲ್ಲಿ ಹಳದಿ ಲೋಹದ ಕಳ್ಳಸಾಗಣೆ ಹೆಚ್ಚಾಗುತ್ತಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಕೊಚ್ಚಿ: ದೇಶದಲ್ಲಿನ ಅನೇಕ ವಿಮಾನ ನಿಲ್ದಾಣಗಳ ಮೂಲಕ ಕಳ್ಳ ಮಾರ್ಗದ  ಮೂಲಕ ಚಿನ್ನವನ್ನು ಸಾಗಣೆ ಮಾಡಲಾಗುತ್ತಿದೆ.ಇತ್ತೀಚಿಗೆ ಅಚ್ಚರಿಯ ರೀತಿಯಲ್ಲಿ ಹಳದಿ ಲೋಹದ ಕಳ್ಳಸಾಗಣೆ ಹೆಚ್ಚಾಗುತ್ತಿದೆ.

ಇಲ್ಲಿನ ವಿಮಾನ ನಿಲ್ದಾಣದಲ್ಲಿ ಲೋಹ ಸಂಶೋಧಕ ಉಪಕರಣದಿಂದ   ಚಿನ್ನದ ಲೇಪಿತ ವಸ್ತು ಸಾಗಿಸುತ್ತಿದ್ದವನನ್ನು ಬಂಧಿಸಲಾಗಿದೆ.

ನಿಡಮ್ ಬಾಸೇರಿ ವಿಮಾನ ನಿಲ್ದಾಣ ಮೂಲಕ ಚಿನ್ನ ಲೇಪಿತ ವಸ್ತು ಸಾಗಿಸುತ್ತಿದ್ದ ಕಾಸರಗೋಡುವಿನ ನಿವಾಸಿಯೊಬ್ಬರನ್ನು ಕಳೆದ ವಾರ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

 851 ಗ್ರಾಂ ತೂಕದ ಈ ವಸ್ತುವಿನ ಬೆಲೆ 26. 3 ಲಕ್ಷ ರೂ ಆಗಿದೆ. ಬೆಲ್ಟ್ ನಲ್ಲಿ ಇದನ್ನು ಇಡಲಾಗಿತ್ತು. ಸೊಂಟದ ಸುತ್ತಲು ಇದನ್ನು ಧರಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 ಇಂತಹ ಹಲವು ಪ್ರಕರಣಗಳನ್ನು ನೋಡಿದ್ದೇವೆ. ಲೋಹ ಸಂಶೋಧಕ ಉಪಕರಣಗಳು ಚಿನ್ನ ಲೇಪಿತವನ್ನು ಪತ್ತೆಹಚ್ಚುವಲ್ಲಿ ವಿಫಲವಾದರೆ, ಇದನ್ನು ಹೇಗೆ ಹಾಕಲಾಗುತ್ತದೆ ಎಂಬ ಬಗ್ಗೆಯೂ ಮಾಹಿತಿ ತಿಳಿಯಲಾಗಿದೆ. ನೀಡುಮ್ ಬಾಸರಿ, ಕೋಝಿಕೋಡು, ತಿರುವನಂತಪುರ ವಿಮಾನ ನಿಲ್ದಾಣದಲ್ಲಿ ಇದರ ಬಗ್ಗೆ ವರದಿಯಾಗಿವೆ.

ಈ ಪ್ರಕಾರ ಚಿನ್ನ ಸಾಗಿಸುವ ಜನರ ಬಗ್ಗೆ ವಿಚಾರಣೆ ನಡೆಸಲಾಗಿದ್ದು, ಚಿನ್ನದ ವಸ್ತುವಿನ ಬಗ್ಗೆ ಅನುಮಾನ ಬಂದರೆ ಇಡೀ ದೇಹವನ್ನು ಪರೀಕ್ಷಿಸಲಾಗುತ್ತದೆ ಎಂದು ಕಸ್ಟಮ್ಸ್  ಆಯುಕ್ತ ಸಮಿತ್ ಕುಮಾರ್ ತಿಳಿಸಿದ್ದಾರೆ.

ಕೇರಳವೂ ಸೇರಿದಂತೆ ರಾಸಾಯನಿಕ ತಜ್ಞರ ನೆರವಿನಿಂದ ಚಿನ್ನವನ್ನು ಪೇಸ್ಟ್ ಆಗಿ ಪರಿವರ್ತಿಸಲಾಗುತ್ತಿದೆ  ಎಂದು ಮತ್ತೊಬ್ಬ ಅಧಿಕಾರಿ ಹೇಳುತ್ತಾರೆ.

ಪೇಸ್ಟ್ ಮಾದರಿಯಲ್ಲಿ ಸಾಕಷ್ಚು ಪ್ರಮಾಣದ  ಚಿನ್ನವನ್ನು ಕಳ್ಳ ಸಾಗಣೆ ಮಾಡಲಾಗುತ್ತಿದೆ.  ಎಲ್ಲರ ದೇಹ ಪರೀಕ್ಷೆಯಿಂದ ಸಂತೋಷಗೊಳ್ಳುವುದಿಲ್ಲ. ಶಂಕಿತರನ್ನು ಮಾತ್ರ ಪರೀಕ್ಷಿಸಲಾಗುತ್ತದೆ ಎಂದು ಮತ್ತೊಬ್ಬ ಅಧಿಕಾರಿ ಹೇಳುತ್ತಾರೆ.

 ಈ ಸಂಬಂಧ ಮುಂಜಾಗ್ರತಾ ಕ್ರಮಗಳನ್ನು ಇನ್ನಷ್ಟು ಹೆಚ್ಚಿಸಲು   ಕಸ್ಟಮ್ಸ್ ಇಲಾಖೆ  ನಿರ್ಧರಿಸಿದೆ. ಈ ಬಗ್ಗೆ ಮಾಹಿತಿ ನೀಡುವ ಜನರಿಗೆ  ವಶಪಡಿಸಿಕೊಂಡ ಚಿನ್ನದಲ್ಲಿ ಶೇಕಡಾ 20 -30ರಷ್ಟು ಮಾರುಕಟ್ಟೆ  ಮೌಲ್ಯದಂತೆ ಭಾರೀ ಕೊಡುಗೆಯನ್ನು ನೀಡಲು ಘೋಷಣೆ ಮಾಡಲಾಗಿದೆ.

2017-18 ರ ಆರ್ಥಿಕ ವರ್ಷದಲ್ಲಿ ಕೊಚ್ಚಿನ್ ಕಸ್ಟಮ್ಸ್ ಅಧಿಕಾರಿಗಳು 26.97 ಕೋಟಿ ರೂಪಾಯಿ ಬೆಲೆಬಾಳುವ 87 ಕೆಜಿ ತೂಕದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಈ ಅವಧಿಯಲ್ಲಿ 254ಕ್ಕೂ ಹೆಚ್ಚು ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ.



Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com