ವಿಡಿಯೋಕಾನ್ ಸಾಲ ಪ್ರಕರಣ: ಆದಾಯ ತೆರಿಗೆ ಇಲಾಖೆಯಿಂದ ದೀಪಕ್ ಕೋಚಾರ್ ಗೆ ನೋಟಿಸ್

ವಿಡಿಯೋಕಾನ್ ಬ್ಯಾಂಕ್ ಸಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ದೀಪಕ್ ಕೋಚಾರ್ ಗೆ ನೋಟಿಸ್ ಜಾರಿಗೊಳಿಸಿದೆ.
ವಿಡಿಯೋಕಾನ್ ಸಾಲ ಪ್ರಕರಣ: ಆದಾಯ ತೆರಿಗೆ ಇಲಾಖೆಯಿಂದ ದೀಪಕ್ ಕೋಚಾರ್ ಗೆ ನೋಟಿಸ್
ವಿಡಿಯೋಕಾನ್ ಸಾಲ ಪ್ರಕರಣ: ಆದಾಯ ತೆರಿಗೆ ಇಲಾಖೆಯಿಂದ ದೀಪಕ್ ಕೋಚಾರ್ ಗೆ ನೋಟಿಸ್
ನವದೆಹಲಿ: ವಿಡಿಯೋಕಾನ್ ಬ್ಯಾಂಕ್ ಸಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ದೀಪಕ್ ಕೋಚಾರ್ ಗೆ ನೋಟಿಸ್ ಜಾರಿಗೊಳಿಸಿದೆ. 
ದೀಪಕ್ ಕೋಚಾರ್, ಐಸಿಐಸಿಐ ಬ್ಯಾಂಕ್ ಎಂಡಿ ಹಾಗೂ ಸಿಇಒ ಚಂದಾ ಕೋಚಾರ್ ಪತಿಯಾಗಿದ್ದು, ಐಟಿ ಕಾಯ್ದೆ ಸೆಕ್ಷನ್ 131 ರ ಅಡಿಯಲ್ಲಿ ನೋಟಿಸ್ ಕಳಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ. 
ದೀಪಕ್ ಕೋಚಾರ್ ಗೆ ವೈಯಕ್ತಿಕ ಫೈನಾನ್ಸ್ ವಿವರ, ಆದಾಯ ತೆರಿಗೆ ವಿವರಗಳನ್ನು ಸಲ್ಲಿಸುವಂತೆ ಸೂಚಿಸಲಾಗಿದ್ದು, ಸಂಸ್ಥೆಯ ಆರ್ಥಿಕ ವಿವರಗಳನ್ನೂ ಸಲ್ಲಿಸಲು ಸೂಚನೆ ನೀಡಲಾಗಿದೆ. ಸಂಸ್ಥೆಯೊಂದಿಗೆ ಗುರುತಿಸಿಕೊಂಡಿರ್ಪುವ ಇನ್ನೂ ಅನೇಕರಿಗೆ ನೊಟೀಸ್ ಜಾರಿಗೊಳಿಸಲಾಗಿದೆ ಎಂದು ಐಟಿ ಇಲಾಖೆ ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com