ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸೆಣೆಸಲು ಬೆಕ್ಕು, ನಾಯಿ, ಮುಂಗುಸಿಗಳು ಒಗ್ಗೂಡುತ್ತಿವೆ: ಅಮಿತ್ ಶಾ ವ್ಯಂಗ್ಯ

2019 ರ ಲೋಕಸಭಾ ಚುನಾವಣೆಗೆ ಬಿಜೆಪಿ ವಿರುದ್ಧ ಒಂದಾಗುತ್ತಿರುವ ಪ್ರತಿಪಕ್ಷಗಳ ವಿರುದ್ಧ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವ್ಯಂಗ್ಯವಾಡಿದ್ದು, ಪ್ರಧಾನಿ ವಿರುದ್ಧ ಬೆಕ್ಕು, ನಾಯಿ, ಮುಂಗುಸಿಗಳು ಒಗ್ಗೂಡುತ್ತಿವೆ
ಅಮಿತ್ ಶಾ
ಅಮಿತ್ ಶಾ
ಮುಂಬೈ: 2019 ರ ಲೋಕಸಭಾ ಚುನಾವಣೆಗೆ ಬಿಜೆಪಿ ವಿರುದ್ಧ ಒಂದಾಗುತ್ತಿರುವ ಪ್ರತಿಪಕ್ಷಗಳ ವಿರುದ್ಧ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವ್ಯಂಗ್ಯವಾಡಿದ್ದು, ಪ್ರಧಾನಿ ವಿರುದ್ಧ ಬೆಕ್ಕು, ನಾಯಿ, ಮುಂಗುಸಿಗಳು ಒಗ್ಗೂಡುತ್ತಿವೆ ಎಂದು ವಾಗ್ದಾಳಿ ನಡೆಸಿದ್ದಾರೆ. 
ಏ.06 ರಂದು ಬಿಜೆಪಿಯ 38 ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಮುಂಬೈ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿರುವ ಅಮಿತ್ ಶಾ, ಸಂಸತ್ ಕಲಾಪ ನಡೆಯಲು ಅವಕಾಶ ನೀಡದ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸಂಸತ್ ಅಧಿವೇಶನ ಸುಗಮವಾಗಿ ನಡೆಯಲು ಬಯಸಿದ್ದರು. ಆದರೆ ಪ್ರತಿಪಕ್ಷಗಳು ಅದಕ್ಕೆ ಅವಕಾಶ ನೀಡಿಲ್ಲ ಎಂದು ಆರೋಪಿಸಿದ್ದಾರೆ. 
ಇದೇ ವೇಳೆ ಮೀಸಲಾತಿ ಕುರಿತಾಗಿಯೂ ಬಿಜೆಪಿಯನಿಲುವನ್ನು ಸ್ಪಷ್ಟಪಡಿಸಿರುವ ಅಮಿತ್ ಶಾ ಬಿಜೆಪಿ ಮೀಸಲಾತಿಯನ್ನು ವಿರೋಧಿಸುವುದಿಲ್ಲ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com