ಮಲ್ಟಿಫ್ಲೆಕ್ಸ್‌ಗಳಲ್ಲಿ ಎಂಆರ್‌ಪಿ ದರದಲ್ಲೇ ತಿಂಡಿ-ತಿನಿಸು ಮಾರಾಟ: ಬಾಂಬೆ ಹೈಕೋರ್ಟ್‌ ಆದೇಶ

ಮಹತ್ವದ ಬೆಳವಣಿಗೆಯಲ್ಲಿ ಮಲ್ಟಿಪ್ಲೆಕ್ಸ್ ಥಿಯೇಟರ್ ಗಳು ಸಾಮಾನ್ಯ ನಿಗದಿತ ಎಂಆರ್ ಪಿ ಬೆಲೆಯಲ್ಲೇ ತಿಂಡಿ ತಿನಿಸುಗಳನ್ನು ಮಾರಾಟ ಮಾಡಬೇಕು ಎಂದು ಬಾಂಬೇ ಹೈಕೋರ್ಟ್ ಗುರುವಾರ ಆದೇಶ ಹೊರಡಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮುಂಬೈ: ಮಹತ್ವದ ಬೆಳವಣಿಗೆಯಲ್ಲಿ ಮಲ್ಟಿಪ್ಲೆಕ್ಸ್ ಥಿಯೇಟರ್ ಗಳು ಸಾಮಾನ್ಯ ನಿಗದಿತ ಎಂಆರ್ ಪಿ ಬೆಲೆಯಲ್ಲೇ ತಿಂಡಿ ತಿನಿಸುಗಳನ್ನು ಮಾರಾಟ ಮಾಡಬೇಕು ಎಂದು ಬಾಂಬೇ ಹೈಕೋರ್ಟ್ ಗುರುವಾರ ಆದೇಶ ಹೊರಡಿಸಿದೆ.
ಪ್ರೇಕ್ಷಕರು ತಿನ್ನುವ ಪದಾರ್ಥಗಳು ಅಥವಾ ಕುಡಿಯುವ ನೀರನ್ನು ತಮ್ಮ ಜತೆ ಚಿತ್ರಮಂದಿರಗಳಿಗೆ ಕೊಂಡೊಯ್ಯುವುದರ ವಿರುದ್ಧ ಮಲ್ಟಿಫ್ಲೆಕ್ಸ್‌ಗಳು ನಿಷೇಧ ಹೇರಿರುವುದನ್ನು ಪ್ರಶ್ನಿಸಿ ಮುಂಬೈ ನಿವಾಸಿ ಜೈನೇಂದ್ರ ಬಕ್ಷಿ ಎಂಬುವವರ ಸಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಮುಂಬಯಿ ಹೈಕೋರ್ಟ್‌ ಈ ಆದೇಶ ಹೊರಡಿಸಿದೆ.  ಮಲ್ಟಿಫ್ಲೆಕ್ಸ್‌ಗಳ ಒಳಗೆ ಮಾರಾಟ ಮಾಡಲಾಗುವ ತಿನ್ನುವ ಪದಾರ್ಥಗಳು ಹಾಗೂ ಕುಡಿಯುವ ನೀರಿನ ಬೆಲೆ ಮಿತಿಮೀರಿದೆ ಎಂದು ಕಿಡಿಕಾರಿರುವ ಬಾಂಬೆ ಹೈಕೋರ್ಟ್‌, ಗರಿಷ್ಠ ಮಾರಾಟ ಬೆಲೆ (ಎಂಆರ್‌ಪಿ)ಯಲ್ಲಿಯೇ ಮಾರಾಟ ಮಾಡಬೇಕು ಎಂದು ಹೇಳಿದೆ.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌.ಎಂ. ಖೇಮ್ಕರ್‌ ಅವರು, 'ಚಿತ್ರಮಂದಿರಗಳ ಒಳಗೆ ಮಾರಾಟ ಮಾಡಲಾಗುವ ತಿಂಡಿ ಹಾಗೂ ನೀರಿನ ಬಾಟಲ್‌ಗಳ ಬೆಲೆ ನಿಜವಾಗಿಯೂ ಮಿತಿಮೀರಿದೆ. ಈ ಅನುಭವ ಸ್ವತಃ ನಮಗೂ ಆಗಿದೆ. ಅವುಗಳನ್ನು ನೀವು (ಮಲ್ಟಿಫ್ಲೆಕ್ಸ್‌ಗಳು) ನಿಗದಿತ ದರದಲ್ಲೇ ಮಾರಾಟ ಮಾಡಬೇಕು. ಅಂತೆಯೇ ಈ ಸಂಬಂಧ ಪರಿಸ್ಥಿತಿಯನ್ನು ಸೂಕ್ತ ರೀತಿಯಲ್ಲಿ ನಿಭಾಯಿಸುವಂತೆ ಮಹರಾಷ್ಟ್ರ ಸರ್ಕಾರಕ್ಕೆ ನಿರ್ದೇಶನ ನೀಡಿದ್ದಾರೆ. ಏತನ್ಮಧ್ಯೆ, ಬೆಲೆಯ ಮೇಲೆ ನಿಯಂತ್ರಣ ಹೇರಲು ಆರು ವಾರಗಳೊಳಗೆ 'ಬೆಲೆ ನೀತಿ' ರೂಪಿಸುವುದಾಗಿ ಮಹಾರಾಷ್ಟ್ರ ಸರ್ಕಾರ ತಿಳಿಸಿದೆ. 
ಅಲ್ಲದೆ ಪ್ರಕರಣದ ಮುಂದಿನ ವಿಚಾರಣೆ ಜೂನ್‌ 12ಕ್ಕೆ ಮುಂದೂಡಿದ್ದಾರೆ. ಮಲ್ಟಿಫ್ಲೆಕ್ಸ್‌ಗಳಲ್ಲಿ ಮಾರಾಟ ಮಾಡಲಾಗುವ ತಿಂಡಿ ಪದಾರ್ಥಗಳ ಬೆಲೆ ಒಮ್ಮೊಮ್ಮೆ ಟಿಕೆಟ್‌ ದರವನ್ನೂ ಮೀರಿಸುವಂತಿರುತ್ತದೆ ಎನ್ನಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com