ಸಮಯಕ್ಕೆ ಬಾರದ ಆ್ಯಂಬುಲೆನ್ಸ್; ತಾಯಿಯ ಆಕ್ಸಿಜನ್ ಸಿಲಿಂಡರ್ ಹೊತ್ತು ನಡೆದ ಪುತ್ರ!

ಸಿಬ್ಬಂದಿಗಳ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನದಿಂದ ಬಡ ರೋಗಿಗಳು ಇಂದಿಗೂ ಸಂಕಷ್ಟದಲ್ಲಿ ಜೀವನವನ್ನು ನಡೆಸುತ್ತಿದ್ದಾರೆ. ಇದಕ್ಕೆ ಉದಾಹರಣೆ ಎಂಬಂತೆ ಉತ್ತರಪ್ರದೇಶದಲ್ಲೊಂದು ಘಟನೆಯೊಂದು ನಡೆದಿದೆ...
ಸಮಯಕ್ಕೆ ಬಾರದ ಆ್ಯಂಬುಲೆನ್ಸ್; ತಾಯಿಯ ಆಕ್ಸಿಜನ್ ಸಿಲಿಂಡರ್ ಹೊತ್ತು ನಡೆದ ಪುತ್ರ!
ಸಮಯಕ್ಕೆ ಬಾರದ ಆ್ಯಂಬುಲೆನ್ಸ್; ತಾಯಿಯ ಆಕ್ಸಿಜನ್ ಸಿಲಿಂಡರ್ ಹೊತ್ತು ನಡೆದ ಪುತ್ರ!
ರುನಕ್ತಾ: ಸಿಬ್ಬಂದಿಗಳ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನದಿಂದ ಬಡ ರೋಗಿಗಳು ಇಂದಿಗೂ ಸಂಕಷ್ಟದಲ್ಲಿ ಜೀವನವನ್ನು ನಡೆಸುತ್ತಿದ್ದಾರೆ. ಇದಕ್ಕೆ ಉದಾಹರಣೆ ಎಂಬಂತೆ ಉತ್ತರಪ್ರದೇಶದಲ್ಲೊಂದು ಘಟನೆಯೊಂದು ನಡೆದಿದೆ. 
ಸಮಯಕ್ಕೆ ಸರಿಯಾಗಿ ಆ್ಯಂಬುಲೆನ್ಸ್ ಬಾರದ ಕಾರಣ ತಾಯಿಯ ಆಕ್ಸಿಜನ್ ಸಿಲಿಂಡರ್'ನ್ನು ಹೆಗಲ ಮೇಲೆ ಪುತ್ರ ಹೊತ್ತುಕೊಂಡು ನಿಂತಿರುವ ಫೋಟೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. 
ಆಸ್ಪತ್ರೆಯ ಬಳಿ ಆ್ಯಂಬುಲೆನ್ಸ್ ಗಾಗಿ ತಾಯಿ ಹಾಗೂ ಮಗ ಬಹಳಷ್ಟು ಸಮಯ ಕಾದಿದ್ದಾರೆ. ಆದರೆ ಆ್ಯಂಬುಲೆನ್ಸ್ ಬಾರದ ಕಾರಣ ಆಕ್ಸಿಜನ್ ಸಿಲಿಂಡರ್ ನ್ನು ಹೆಗಲ ಮೇಲೆ ಹೊತ್ತುಕೊಂಡು, ಅದಕ ಪೈಪ್ ನ್ನು ಕೈಯಲ್ಲಿ ಹಿಡಿದು ತಾಯಿ ಹಾಗೂ ಮಗ ಮುಂದಕ್ಕೆ ಸಾಗಿದ್ದಾರೆಂದು ತಿಳಿದುಬಂದಿದೆ. 
ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರು ಆಗ್ರಾ ಮೆಡಿಕಲ್ ಕಾಲೇಜು ಆಸ್ಪತ್ರೆ ಆರೋಪಗಳನ್ನು ನಿರಾಕರಿಸಿದೆ. 
ನಾವು ಆ್ಯಂಬುಲೆನ್ಸ್ ಕೊಡುವಷ್ಟರಲ್ಲಿ ಅವರ ಸಿಲಿಂಡರ್'ನ್ನು ಹೊತ್ತುಕೊಂಡಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಕೆಲ ಮಾಧ್ಯಮಗಳು ಫೋಟೋ ತೆಗೆದಿದೆ. ಆಸ್ಪತ್ರೆ ಸಿಬ್ಬಂದಿಗಳು ಆ್ಯಂಬುಲೆನ್ಸ್ ವಾಹನ ನೀಡಲು ನಿರಾಕರಿಸಿಲ್ಲ. ಸಿಬ್ಬಂದಿಗಳು ತಪ್ಪು ಮಾಡಿದ್ದೇ ಆದರೆ, ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com