ರೈಲಿನಂತೆ ಕಾಣುತ್ತಿದೆ ರಾಜಸ್ತಾನದ ಈ ಸರ್ಕಾರಿ ಶಾಲೆ
ರೈಲಿನಂತೆ ಕಾಣುತ್ತಿದೆ ರಾಜಸ್ತಾನದ ಈ ಸರ್ಕಾರಿ ಶಾಲೆ

ರೈಲಿನಂತೆ ಕಾಣುವ ರಾಜಸ್ತಾನದ ಈ ಸರ್ಕಾರಿ ಶಾಲೆ, ವಿದ್ಯಾರ್ಥಿಗಳ ಆಕರ್ಷಣೆ

ಶಾಲೆ ಕಟ್ಟಡ ಹಾಗೂ ಪರಿಸರ ಸುಂದರವಾಗಿದ್ದಷ್ಟು ವಿದ್ಯಾರ್ಥಿಗಳು ಅದರತ್ತ ಆಕರ್ಷಿತರಾಗುತ್ತಾರೆ. ಈ ನಿಟ್ಟಿನಲ್ಲಿ ರಾಜಸ್ತಾನದ ಶಾಲೆಯೊಂದನ್ನು ರೈಲಿನ ಮಾದರಿಯಂತೆ ಬಣ್ಣವನ್ನು ಬಳಿಯಲಾಗಿತ್ತು. ಇದೀಗ ಈ ಶಾಲೆ ದೇಶಗ ಗಮನವನ್ನು ತನ್ನತ್ತ ಸೆಳೆಯುವಂತೆ ಮಾಡಿದೆ...
ಅಲ್ವರ್: ಶಾಲೆ ಕಟ್ಟಡ ಹಾಗೂ ಪರಿಸರ ಸುಂದರವಾಗಿದ್ದಷ್ಟು ವಿದ್ಯಾರ್ಥಿಗಳು ಅದರತ್ತ ಆಕರ್ಷಿತರಾಗುತ್ತಾರೆ. ಈ ನಿಟ್ಟಿನಲ್ಲಿ ರಾಜಸ್ತಾನದ ಶಾಲೆಯೊಂದನ್ನು ರೈಲಿನ ಮಾದರಿಯಂತೆ ಬಣ್ಣವನ್ನು ಬಳಿಯಲಾಗಿತ್ತು. ಇದೀಗ ಈ ಶಾಲೆ ದೇಶಗ ಗಮನವನ್ನು ತನ್ನತ್ತ ಸೆಳೆಯುವಂತೆ ಮಾಡಿದೆ. 
ರಾಜಸ್ತಾನದ ಅಲ್ವರ್ ಗ್ರಾಮದಲ್ಲಿರುವ ಸರ್ಕಾರಿ ಶಾಲೆಯನ್ನು ರೈಲಿನ ಮಾದರಿಯಲ್ಲಿದೇಯ ಬಣ್ಣವನ್ನು ಬಳಿಯಲಾಗಿದೆ. ಮೇಲ್ನೋಟಕ್ಕೆ ಈ ಶಾಲೆ ರೈಲಿನಂತೆಯೇ ಕಂಡು ಬರುತ್ತಿದೆ. 
ಶಾಲೆಯಲ್ಲಿರುವ ವಿದ್ಯಾರ್ಥಿಗಳ ಕೊಠಡಿಗಳನ್ನು ಪಾಸೆಂಜರ್ ಕಂಪಾರ್ಟ್'ಮೆಂಟ್ ನಂತೆ ಬಣ್ಣವನ್ನು ನೀಡಲಾಗಿದೆ. ಇನ್ನು ಶಾಲೆಯ ಪ್ರಾಂಶುಪಾಲರ ಕಚೇರಿಯನ್ನು ಎಂಜಿನ್ ರೀತಿ ಮತ್ತು ಹೊರಾಂಗಣವನ್ನು ಪ್ಲಾಟ್'ಫಾರ್ಮ್ ರೀತಿಯಲ್ಲಿ ಗೋಚರಿಸುವಂತೆ ಬಣ್ಣವನ್ನು ಬಳಿಯಲಾಗಿದೆ. 
ಸರ್ಕಾರಿ ಶಾಲೆಗಳಲ್ಲಿ ವ್ಯವಸ್ಥೆಗಳಿಲ್ಲದ ಕಾರಣ ಸಾಕಷ್ಟು ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸುತ್ತಾರೆ. ಹೀಗಾಗಿ ಮಕ್ಕಳನ್ನು ಸೆಳೆಯುವ ಸಲುವಾಗಿ ರೈಲಿನಂತೆ ಶಾಲೆಗೆ ಬಣ್ಣವನ್ನು ಬಳಿಯಲಾಗಿದೆ ಎಂದು ಶಾಲೆ ಪ್ರಾಂಶುಪಾಲ ಪುರುಷೋತ್ತಮ್ ಗುಪ್ತಾ ಅವರು ಹೇಳಿದ್ದಾರೆ. 0
ಮಕ್ಕಳಿಗೆ ರೈಲು ಹಾಗೂ ಅದರೊಂದಿಗೆ ಪ್ರಯಾಣ ಮಾಡುವುದು ಎಂದರೆ ಬಹಳ ಇಷ್ಟ ಪಡುತ್ತಾರೆ. ಸರ್ಕಾರಿ ಶಾಲೆಗಳ ಕಟ್ಟಡಗಳು ಬೇಜಾರು ಪಡುತ್ತಾರೆ. ಇದರಿಂದ ಸರ್ಕಾರಿ ಶಾಲೆಗಳ ಮೇಲೆ ಮಕ್ಕಳು ಆಸಕ್ತಿ ಕಳೆದುಕೊಳ್ಳುವಂತಾಗುತ್ತದೆ. ಹೀಗಾಗಿಯೇ ಶಾಲೆಯನ್ನು ಮರುನಿರ್ಮಾಣ ಮಾಡಿ ರೈಲಿನಂತೆ ಬಣ್ಣವನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com