ಗೋರಖ್ಪುರದ ಈ ಮುಸ್ಲಿಂ ಮದರಸಾದಲ್ಲಿ ಸಂಸ್ಕೃತ ಪಾಠ-ಪ್ರವಚನ!
ಮುಸ್ಲಿಂ ಶಿಕ್ಷಕರನ್ನು ಹೊಂದಿರುವ ಈ ಮದರಸಾದಲ್ಲಿ ಸಂಸ್ಕೃತ ಪಾಠ-ಪ್ರವಚನಗಳು ನಡೆಯುತ್ತಿದೆ. ಹಿಜಾಬ್ ಧರಿಸಿ ಬರುವ ಇಲ್ಲಿನ ವಿದ್ಯಾರ್ಥಿನಿಯರು ಶ್ರದ್ಧಾಭಕ್ತಿಯಿಂದ ಸಂಸ್ಕೃತದ ಪದ್ಯದ ಸಾಲುಗಳನ್ನು ಕಲಿಯುತ್ತಿದ್ದಾರೆ...
ಸಂಸ್ಕೃತ ಪಾಠ-ಪ್ರವಚನ ಮಾಡುತ್ತಿದೆ ಗೋರಖ್ಪುರದಲ್ಲಿರುವ ಈ ಮುಸ್ಲಿಂ ಮದರಸಾ!
ಗೋರಖ್ಪುರ: ಮುಸ್ಲಿಂ ಶಿಕ್ಷಕರನ್ನು ಹೊಂದಿರುವ ಈ ಮದರಸಾದಲ್ಲಿ ಸಂಸ್ಕೃತ ಪಾಠ-ಪ್ರವಚನಗಳು ನಡೆಯುತ್ತಿದೆ. ಹಿಜಾಬ್ ಧರಿಸಿ ಬರುವ ಇಲ್ಲಿನ ವಿದ್ಯಾರ್ಥಿನಿಯರು ಶ್ರದ್ಧಾಭಕ್ತಿಯಿಂದ ಸಂಸ್ಕೃತದ ಪದ್ಯದ ಸಾಲುಗಳನ್ನು ಕಲಿಯುತ್ತಿದ್ದಾರೆ.
ಸಂಸ್ಕೃತದ ಪಾಠ ಪ್ರವಚನ ಮಾಡುವ ಈ ಮದರಸಾ ಇರುವುದು ಉತ್ತರಪ್ರದೇಶ ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕ್ಷೇತ್ರ ಗೋರಖ್ಪುರದಲ್ಲಿ.
ಸಂಸ್ಕೃತ ಕಲಿಯುವುದಕ್ಕೆ ನಮಗೆ ಬಹಳ ಸಂತೋಷವಾಗುತ್ತಿದೆ. ನಮ್ಮ ಶಿಕ್ಷಕರು ಬಹಳ ಉತ್ತಮವಾಗಿ ಹೇಳಿಕೊಡುತ್ತಾರೆ. ಸಂಸ್ಕೃತ ಕಲಿಯಲು ನಮ್ಮ ಪೋಷಕರೂ ಸಹಾಯ ಮಾಡುತ್ತಿದ್ದಾರೆಂದು ವಿದ್ಯಾರ್ಥಿಯೊಬ್ಬರು ಹೇಳಿದ್ದಾರೆ.
ಮದರಸಾದ ಪ್ರಾಂಶುಪಾಲರು ಮಾತನಾಡಿ, ನಮ್ಮದು ಆಧುನಿಕ ಮದರಸಾವಾಗಿದ್ದು, ಇದು ಉತ್ತರಪ್ರದೇಶದ ಶಿಕ್ಷಣ ಮಂಡಳಿಗೆ ಸೇರಿದ್ದಾಗಿದೆ. ಇಲ್ಲಿ, ಇಂಗ್ಲೀಷ್, ಹಿಂದಿ, ವಿಜ್ಞಾನ, ಉರ್ದು ಮತ್ತು ಗಣಿತದೊಂದಿಗೆ ಸಂಸ್ಕೃತವನ್ನೂ ಕಲಿಸುತ್ತೇವೆ. ಅಲ್ಲದೆ, ಅರಬಿಕ್ ಸಹ ಇಲ್ಲಿ ಹೇಳಿಕೊಡಲಾಗುತ್ತದೆ ಎಂದು ತಿಳಿಸಿದ್ದಾರೆ.