ಮುಂಬೈ: ಪೊಲೀಸ್ ದಾಳಿ ವೇಳೆ ಕಟ್ಟಡ ಮೇಲಿಂದ ಬಿದ್ದು ಇಬ್ಬರು ಲೈಂಗಿಕ ಕಾರ್ಯಕರ್ತೆಯರ ಸಾವು

ಪೊಲೀಸ್ ದಾಳಿ ವೇಳೆ ಇಲ್ಲಿನ ಗ್ರಾಂಟ್ ರಸ್ತೆಯಲ್ಲಿನ ಕಟ್ಟಡವೊಂದರ ಮೇಲಿಂದ ಬಿದ್ದು 30 ಹಾಗೂ 50 ವರ್ಷದ ಇಬ್ಬರು ಲೈಂಗಿಕ ಕಾರ್ಯಕರ್ತೆಯರು ಬಿದ್ದು ಸಾವನ್ನಪ್ಪಿರುವ ಘಟನೆ ಮಂಗಳವಾರ ರಾತ್ರಿ ಇಲ್ಲಿನ ಗ್ರಾಂಟ್ ರಸ್ತೆಯಲ್ಲಿ ನಡೆದಿದೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬೈ: ಪೊಲೀಸ್ ದಾಳಿ ವೇಳೆ ಇಲ್ಲಿನ ಗ್ರಾಂಟ್ ರಸ್ತೆಯಲ್ಲಿನ ಕಟ್ಟಡವೊಂದರ ಮೇಲಿಂದ ಬಿದ್ದು  30 ಹಾಗೂ 50 ವರ್ಷದ ಇಬ್ಬರು ಲೈಂಗಿಕ ಕಾರ್ಯಕರ್ತೆಯರು  ಬಿದ್ದು ಸಾವನ್ನಪ್ಪಿರುವ ಘಟನೆ ಮಂಗಳವಾರ ರಾತ್ರಿ ಇಲ್ಲಿನ ಗ್ರಾಂಟ್ ರಸ್ತೆಯಲ್ಲಿ ನಡೆದಿದೆ.

ಪೊಲೀಸರು ಕಾರ್ಯಾಚರಣೆ ಆರಂಭಿಸುತ್ತಿದ್ದಂತೆ ಮೂರನೇ ಮಹಡಿಯಿಂದ ಜಿಗಿದ್ದು ಅಥವಾ ಬಿದ್ದು ಅವರಿಬ್ಬರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ. ಡಿ. ಬಿ. ಮಾರ್ಗ್ ಪೊಲೀಸ್ ಠಾಣೆಯಿಂದ 50 ಮೀ. ದೂರದಲ್ಲಿ ಈ ಕಟ್ಟಡವಿದೆ.

ಮೃತರು ಪಶ್ಚಿಮ ಬಂಗಾಳ ಮೂಲದವರಾಗಿದ್ದು, ಈ ಸಂಬಂಧ ಪೊಲೀಸರು ಅಪಘಾತ ಸಾವು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ.

ಲೈಂಗಿಕ ಚಟುವಟಿಕೆ ವಿರುದ್ಧ ಇಲ್ಲಿನ ನಿವಾಸಿಗಳು ಕಳೆದ ತಿಂಗಳು ಮೊಂಬತ್ತಿ ಪ್ರತಿಭಟನೆ ನಡೆಸಿದ್ದರು. ಪೊಲೀಸರು ಕೂಡಲೇ ಲೈಂಗಿಕ  ಕಾರ್ಯಕರ್ತೆಯರ  ಅಡ್ಡೆಗಳ ಮೇಲೆ ಕಾರ್ಯಾಚರಣೆ ನಡೆಸಿದ್ದರು. ಆಗಿನಿಂದಲೂ  ಪೊಲೀಸರ ತಂಡ ಆಗ್ಗಾಗೇ ಭೇಟಿ ನೀಡಿ ಇಂತಹ ಚಟುವಟಿಕೆಗಳು ಮತ್ತೆ ತಲೆ ಎತ್ತದಂತೆ  ನಿಗಾವಹಿಸಿದ್ದರು.

ಆದರೆ, ಮಂಗಳವಾರ ರಾತ್ರಿ ಪರಿಶೀಲನೆ ವೇಳೆ ಪೊಲೀಸರು ಓಮ್ ನಿವಾಸ್ ಕಟ್ಟಡಕ್ಕೆ ಭೇಟಿ ನೀಡಿದ್ದಾಗ ಮೂವರು ಮಹಿಳೆಯರು, ನಾಲ್ವರು ಪುರುಷರು ಕಂಡುಬಂದಿದ್ದಾರೆ. ನಂತರ ವಿಚಾರಣೆ ನಡೆಸಿದ ಬಳಿಕ ಪೊಲೀಸ್ ಠಾಣೆಗೆ ಕರೆದುಕೊಂಡು ಬರಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಆ ಕಟ್ಟಡದಿಂದ ಪೊಲೀಸರು ಹಿಂತಿರುಗಿದ 20 ನಿಮಿಷದ ಬಳಿಕ ಒಬ್ಬ ಮಹಿಳೆ ಠಾಣೆಗೆ ಬಂದಿದ್ದು, ಇಬ್ಬರು ಮಹಿಳೆಯರು ಗಾಯಗೊಂಡಿರುವ ಸ್ಥಿತಿಯಲ್ಲಿರುವ  ಇರುವುದಾಗಿ ಹೇಳಿದ್ದಾರೆ.

ನಂತರ ಪೊಲೀಸರ ತಂಡ ಅಲ್ಲಿಗೆ ಧಾವಿಸಿದ್ದು,  ಒಬ್ಬಳನ್ನು ಜೆಜೆ ಆಸ್ಪತ್ರೆಗೆ ಸೇರಿಸಲಾಗಿದ್ದು, ಆಕೆ ಮೃತಪಟ್ಟಿದ್ದಾಳೆ.ಚಿಕಿತ್ಸೆ ಫಲಕಾರಿಯಾಗದೆ ಮತ್ತೊಬ್ಬ ಮಹಿಳೆಯೂ ಮೃತಪಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com