ಮಲ್ಲಾಪುರಂ: ಪಿಡಿಪಿ ನಾಯಕ ಅಬ್ದುಲ್ ನಾಸಿರ್ ಮದನಿಯ ವಿಚಾರಣೆಯನ್ನು ಕರ್ನಾಟಕ ಸರ್ಕಾರ ನಿಧಾನ ಮಾಡುತ್ತಿದ್ದು ಒಂದು ಆತನನ್ನು ಬಿಡುಗಡೆ ಮಾಡಿ ಇಲ್ಲದಿದ್ದರೆ ಗಲ್ಲಿಗೇರಿಸಿ ಎಂದು ಕೇರಳ ಸ್ಥಳೀಯಾಡಳಿತ ಖಾತೆ ಸಚಿವ ಕೆಟಿ ಜಲೀಲ್ ಹೇಳಿದ್ದಾರೆ.
ಜೀವನ ಮತ್ತು ಮರಣ ನಡುವಿನ ಚಿತ್ರಹಿಂಸೆ ಅಸಹನೀಯವಾಗಿದೆ ಎಂದು ಜಲೀಲ್ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ಕಳೆದ ಶುಕ್ರವಾರ ಬೆಂಗಳೂರಿನಲ್ಲಿ ಮದನಿಯನ್ನು ಜಲೀಲ್ ಭೇಟಿ ಮಾಡಿದ್ದರು. ಮದನಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಆದರೆ ಮಾನಸಿಕವಾಗಿ ಗಟ್ಟಿಯಾಗಿದ್ದಾರೆ ಎಂದು ಹೇಳಿದ್ದಾರೆ.
ಸಾಕ್ಷ್ಯಧಾರ ಕೊರತೆ ಹಿನ್ನೆಲೆಯಲ್ಲಿ ಒಂಬತ್ತು ವರ್ಷಗಳ ನಂತರ ಮದನಿಯನ್ನು ಬಿಡುಗಡೆ ಮಾಡಲಾಗಿತ್ತು. ನಂತರ ನಕಲಿ ಪ್ರಕರಣಗಳ ಮೂಲಕ ಕರ್ನಾಟಕ ಸರ್ಕಾರ ಮತ್ತೆ ಅವರನ್ನು ಬಂಧಿಯನ್ನಾಗಿಸಿ ವಿಚಾರಣೆಯನ್ನು ವಿಳಂಬ ಮಾಡುತ್ತಿದ್ದು ಇದು ಮದನಿ ಅಮಾಯಕ ಎಂಬುದನ್ನು ಸಾಬೀತುಪಡಿಸುತ್ತದೆ.