ಮೂಲಗಳ ಪ್ರಕಾರ ಸಿಎಂ ಮೆಹಬೂಬಾ ಮುಫ್ತಿ ಸಂಪುಟ ಪರಿಷ್ಕರಣೆಗೆ ಬಿಜೆಪಿ ಮುಂದಾಗಿದ್ದು, ಇದೇ ಕಾರಣಕ್ಕೆ ಹಾಲಿ ಇರುವ ಸಚಿವರ ರಾಜಿನಾಮೆಗೆ ಮುಂದಾಗಿದೆ. ಅಲ್ಲದೆ ಈ ಸ್ಥಾನಕ್ಕೆ ಹೊಸ ಬಿಜೆಪಿ ಶಾಸಕರಿಗೆ ಅವಕಾಶ ನೀಡುವುದಾಗಿ ಬಿಜೆಪಿ ಮೂಲಗಳು ತಿಳಿಸಿವೆ. ಇತ್ತೀಚೆಗಷ್ಟೇ ಕಾಶ್ಮೀರ ಬಿಜೆಪಿ ಘಟಕದ ಮುಖ್ಯಸ್ಥ ರಾಮ್ ಮಾಧವ್ ಅವರು ಈ ಬಗ್ಗೆ ಬಿಜೆಪಿ ಶಾಸಕರೊಂದಿಗೆ ಚರ್ಚೆ ನಡೆಸಿದ್ದರು. ಕಳೆದವಾರ ನಡೆದ ಸಭೆಯಲ್ಲೂ ಈ ಬಗ್ಗೆ ಚರ್ಚೆ ನಡೆಸಲಾಗಿತ್ತು ಎಂದು ಬಿಜೆಪಿ ಮೂಲಗಳು ತಿಳಿಸಿವೆ.