ಕತುವಾ ಅತ್ಯಾಚಾರ ಪ್ರಕರಣ; ಸಂತ್ರಸ್ತೆ ಗುರುತು ಬಹಿರಂಗಪಡಿಸುವವರಿಗೆ 6 ತಿಂಗಳು ಜೈಲು- ದೆಹಲಿ ಹೈಕೋರ್ಟ್

ಕತುವಾ ಅತ್ಯಾಚಾರ ಪ್ರಕರಣದ ಸಂತ್ರಸ್ತ ಬಾಲಕಿಯ ಗುರುತುಗಳನ್ನು ಬಹಿರಂಗ ಪಡಿಸುವ ಯಾವುದೇ ವ್ಯಕ್ತಿಗೆ 6 ತಿಂಗಳು ಜೈಲು ವಿಧಿಸಲಾಗುವುದು ಎಂದು ದೆಹಲಿ ಹೈಕೋರ್ಟ್ ಬುಧವಾರ ಹೇಳಿದೆ...
ದೆಹಲಿ ಹೈಕೋರ್ಟ್
ದೆಹಲಿ ಹೈಕೋರ್ಟ್
Updated on
ನವದೆಹಲಿ: ಕತುವಾ ಅತ್ಯಾಚಾರ ಪ್ರಕರಣದ ಸಂತ್ರಸ್ತ ಬಾಲಕಿಯ ಗುರುತುಗಳನ್ನು ಬಹಿರಂಗ ಪಡಿಸುವ ಯಾವುದೇ ವ್ಯಕ್ತಿಗೆ 6 ತಿಂಗಳು ಜೈಲು ವಿಧಿಸಲಾಗುವುದು ಎಂದು ದೆಹಲಿ ಹೈಕೋರ್ಟ್ ಬುಧವಾರ ಹೇಳಿದೆ. 
ಕತುವಾ ಅತ್ಯಾಚಾರ ಪ್ರಕರಣ ಸಂಬಂಧ ಇಂದು ವಿಚಾರಣೆ ನಡೆಸಿರುವ ನ್ಯಾಯಾಲಯವು ಅತ್ಯಾಚಾರ ಸಂತ್ರಸ್ತ ಬಾಲಕಿಯ ಗುರುತುಗಳನ್ನು ಬಹಿರಂಗಪಡಿಸುವವರಿಗೆ 6 ತಿಂಗಳು ಜೈಲುಶಿಕ್ಷೆ ವಿಧಿಸಲಾಗುವುದು ಎಂದು ಹೇಳಿದ್ದು, ಮುಂದಿನ ವಿಚಾರಣೆಯನ್ನು ಏಪ್ರಿಲ್. 25ಕ್ಕೆ ನಡೆಸುವುದಾಗಿ ತಿಳಿಸಿದೆ. 
ಆಲ್ಲದೆ, ಇದೇ ವೇಳೆ ಮಾಧ್ಯಮಗಳ ವಿರುದ್ಧವೂ ಚಾಟಿ ಬೀಸಿರುವ ನ್ಯಾಯಾಲಯ, ಅತ್ಯಾಚಾರ ಸಂತ್ರಸ್ತೆ ಬಾಲಕಿಯ ಗುರುತುಗಳನ್ನು ಬಹಿರಂಗಪಡಿಸಿ ನೋಟಿಸ್ ಗಳನ್ನು ಪಡೆದಿರುವ ಮಾಧ್ಯಮಗಳು ರೂ.10 ಲಕ್ಷ ದಂಡ ಕಟ್ಟುವಂತೆ ಆದೇಶಿಸಿದ್ದು, ದಂಡದ ಹಣವನ್ನು ಸಂತ್ರಸ್ತ ಬಾಲಕಿಯ ಕುಟುಂಬಕ್ಕೆ ಪರಿಹಾರವಾಗಿ ನೀಡುವುದಾಗಿ ಹೇಳಿದೆ.
ಅತ್ಯಾಚಾರ ಸಂತ್ರಸ್ತೆ ಗುರುತುಗಳನ್ನು ಬಹಿರಂಗಪಡಿಸಿರುವುದರ ಕುರಿತಂತೆ ನ್ಯಾಯಾಲಯಕ್ಕೆ ಪ್ರತಿಕ್ರಿಯೆ ನೀಡಿರುವ ಮಾಧ್ಯಮಗಳು, ಈ ಬಗ್ಗೆ ಕ್ಷಮೆಯಾಚಿಸಿವೆ. ಅಲ್ಲದೆ. ಇಂತಹ ಪ್ರಮಾದಗಳು ಮರುಕಳುಹಿಸುವುದಿಲ್ಲ ಎಂದು ಕ್ಷಮೆ ಕೋರಿವೆ.  

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com