ಮೆಕ್ಕಾ ಮಸೀದಿ ಸ್ಫೋಟ: ಎನ್ಐಎ ನ್ಯಾಯಾಧೀಶ ರೆಡ್ಡಿ ರಾಜೀನಾಮೆ ತಿರಸ್ಕೃತ, ಕರ್ತವ್ಯಕ್ಕೆ ಹಾಜರು

2007ರ ಮೆಕ್ಕಾ ಮಸೀದಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಐವರು ಆರೋಪಿಗಳನ್ನು ಖುಲಾಸೆಗೊಳಿಸಿ ತೀರ್ಪು ನೀಡಿದ್ದ ಎನ್ ಐಎ ವಿಶೇಷ ಕೋರ್ಟ್ ನ್ಯಾಯಾಧೀಶ ರವೀಂದ್ರ ರೆಡ್ಡಿ...
ಕೆ. ರವೀಂದ್ರ ರೆಡ್ಡಿ
ಕೆ. ರವೀಂದ್ರ ರೆಡ್ಡಿ
ಹೈದರಾಬಾದ್: 2007ರ ಮೆಕ್ಕಾ ಮಸೀದಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಐವರು ಆರೋಪಿಗಳನ್ನು ಖುಲಾಸೆಗೊಳಿಸಿ ತೀರ್ಪು ನೀಡಿದ್ದ ಎನ್ ಐಎ ವಿಶೇಷ ಕೋರ್ಟ್ ನ್ಯಾಯಾಧೀಶ ರವೀಂದ್ರ ರೆಡ್ಡಿ ನೀಡಿದ್ದ ರಾಜೀನಾಮೆಯನ್ನು ಹೈದರಾಬಾದ್ ಹೈಕೋರ್ಟ್ ತಿರಸ್ಕರಿಸಿದೆ. 
ಇದೀಗ ನ್ಯಾಯಾಧೀಶ ರವೀಂದ್ರ ರೆಡ್ಡಿ ಮತ್ತೆ ನಾಂಪಲ್ಲಿಯ ಕ್ರಿಮಿನಲ್ ನ್ಯಾಯಾಲಯ ನ್ಯಾಯಾಧಿಶರಾಗಿ ಕರ್ತ್ವ್ಯಕ್ಕೆ ಹಾಜರಾಗಿದ್ದರೆ.
ರಾಜೀನಾಮೆ ಸಲ್ಲಿಸುವ 3 ತಿಂಗಳ ಮುನ್ನ ನೋಟೀಸ್ ನಿಡಬೇಕಾಗಿದ್ದು ನ್ಯಾಯಾಧಿಶ ರೆಡ್ಡಿ ಈ ನೋಟೀಸ್ ನೀಡದ ಹಿನ್ನೆಲೆಯಲ್ಲಿ ಅವರ ರಾಜೀನಾಮೆ ಅಂಗೀಕಾರವಾಗಿಲ್ಲ ಎನ್ನಲಾಗಿದೆ. 
ಇದರ ನಡುವೆ ನ್ಯಾಯಾಧೀಶ ರವೀಂದ್ರ ರೆಡ್ಡಿ ಇದೇ ಜೂನ್ ನಲ್ಲಿ ಕರ್ತವ್ಯದಿಂದ ನಿವೃತ್ತಿ ಹೊಂದಲಿದ್ದಾರೆ.
ನಾಂಪಲ್ಲಿ ಕ್ರಿಮಿನಲ್ ಕೋರ್ಟ್ ನ  4 ನೇ ಹೆಚ್ಚುವರಿ ಮೆಟ್ರೋಪಾಲಿಟನ್ ಸೆಷನ್ಸ್ ನ್ಯಾಯಾಧೀಶ ಹಾಗೂ 18 ನೇ ಹೆಚ್ಚುವರಿ ಮುಖ್ಯ ನ್ಯಾಯಾಧೀಶರಾಗಿ ರೆಡ್ಡಿ ಆಯ್ಕೆಯಾಗಿದ್ದಾರೆ.
ವೈಯುಕ್ತಿಕ ಕಾರಣದಿಂದ ರಾಜೀನಾಮೆ ಸಲ್ಲಿಸುತ್ತೇನೆಂದು ತಮ್ಮ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದ ರೆಡ್ಡಿ ತಾನು 15 ದಿನಗಳ ಕಾಲ ರಜೆ ಪಡೆದಿದ್ದು ಈ ರಜೆಯನ್ನು ಮುಂದುವರಿಸಬೇಕೆಂದು ಪತ್ರದಲ್ಲಿ ಒತ್ತಾಯಿಸಿದ್ದರು.
ಆದರೆ ಹೈದರಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ರಮೇಶ್ ರಂಗನಾಥನ್, ರವೀಂದ್ರ ರೆಡ್ಡಿ ಅವರ ರಾಜೀನಾಮೆಯನ್ನು ಸ್ವೀಕರಿಸಿಲ್ಲ. ಜತೆಗೆ ಅವರ ಅವರ 15-ದಿನಗಳ ರಜೆ ವಿನಂತಿಯನ್ನು ತಿರಸ್ಕರಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com