ನಾಪತ್ತೆಯಾಗಿದ್ದ ವಿದೇಶಿ ಮಹಿಳೆಯ ಮೃತದೇಹ ಶಂಕಾಸ್ಪದ ರೀತಿಯಲ್ಲಿ ಕೇರಳದಲ್ಲಿ ಪತ್ತೆ

ಮಾ.14 ರಿಂದ ನಾಪತ್ತೆಯಾಗಿದ್ದ ಲಿಥುಯಾನಿಯನ್ ಪ್ರವಾಸಿಯೊಬ್ಬರ ಮೃತದೇಹ ಶಂಕಾಸ್ಪದ ರೀತಿಯಲ್ಲಿ ಕೊವಾಲಮ್ ಬಳಿಯ ವಾಜಾಮುಟ್ಟಮ್ ನಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೇರಳ :  ಮಾ.14 ರಿಂದ ನಾಪತ್ತೆಯಾಗಿದ್ದ ಲಿಥುಯಾನಿಯನ್ ಪ್ರವಾಸಿಯೊಬ್ಬರ ಮೃತದೇಹ  ಶಂಕಾಸ್ಪದ ರೀತಿಯಲ್ಲಿ  ಕೊವಾಲಮ್ ಬಳಿಯ ವಾಜಾಮುಟ್ಟಮ್ ನಲ್ಲಿ ಪತ್ತೆಯಾಗಿದೆ ಎಂದು  ಪೊಲೀಸರು ತಿಳಿಸಿದ್ದಾರೆ

ನಿನ್ನೆ ದಿನ  ವಿದೇಶಿ ಮಹಿಳೆಯ ಶವವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಮಾನಸಿಕ ಒತ್ತಡ ಕಾರಣ ಅಯುರ್ವೇದ ಚಿಕಿತ್ಸೆ ಪಡೆಯಲು ಪಡೆದಿದ್ದ 33 ವರ್ಷದ ಲಿಗಾ ಮಾರ್ಚ್ 14 ರಿಂದ ಕೊವಾಲಮ್ ನಿಂದ  ನಾಪತ್ತೆಯಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.

  ಸಾವಿನ ಬಗ್ಗೆ ತಿಳಿಯಲು ವಿಧಿವಿಜ್ಞಾನ ಪ್ರಯೋಗಾಲಯ ಹಾಗೂ ಡಿಎನ್ ಎ ಪರೀಕ್ಷೆಗೆ ಕಳಹಿಸಲಾಗಿದೆ ಎಂದು ತಿರುವನಂತಪುರಂ ಪೊಲೀಸ್ ಆಯುಕ್ತ ಪಿ. ಪ್ರಕಾಶ್ ತಿಳಿಸಿದ್ದಾರೆ.
 ಲಿಗಾ ಪತಿ ಹಾಗೂ ಸಹೋದರಿಯರು ಇಂದು ಬೆಳ್ಳಿಗೆ ಮಂಗಳೂರಿನಿಂದ ತಿರುವನಂತಪುರಕ್ಕೆ ಆಗಮಿಸಿದ್ದಾರೆ..

ನಾಪತ್ತೆಯಾಗಿದ್ದ ಮಹಿಳೆಯ ಕೂದಲು ಹಾಗೂ ಶರ್ಟಿಗೂ ಈ ಮೃತದೇಹಕ್ಕೂ ಹೋಲಿಕೆಯಾಗುವಂತಿದೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ.ಲಿಗಾ ಹುಡುಕಾಟಕ್ಕಾಗಿ ವಿಶೇಷ ತನಿಖಾ ತಂಡವನ್ನು ಪೊಲೀಸರು ರಚಿಸಿದ್ದಾರೆ.

 ಆ ಮಹಿಳೆಯ ಬಗ್ಗೆ ಮಾಹಿತಿ ನೀಡಿದ್ದವರಿಗೆ 2 ಲಕ್ಷ ರೂಪಾಯಿ ಬಹುಮಾನವನ್ನು ಪೊಲೀಸರು ಘೋಷಿಸಿದ್ದಾರೆ. ಪೊಥೆನ್ ಕೋಡ್ ಬಳಿಯ ಖಾಸಗಿ ಆಯುರ್ವೇದ ಚಿಕಿತ್ಸಾ ಕೇಂದ್ರದಲ್ಲಿ ಲಿಗಾ  ತಂಗಿದ್ದರು. ಮಾರ್ಚ್, 14 ರಂದು  ಕೊವಾಲಂ ನಲ್ಲಿರುವ ಆಕೆಯ ಸಹೋದರಿ ಮನೆಗೆ ಬಂದಿದ್ದರು. ಅಂದ ಮಧ್ಯಾಹ್ನದಿಂದ ಅವರು ನಾಪತ್ತೆಯಾಗಿದ್ದಾರೆ.

ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.



ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com