ಈ ಕುರಿತಂತೆ ಟ್ವಿಟರ್ ನಲ್ಲಿ ಬರೆದಿರುವ ರಾಹುಲ್ ಗಾಂಧಿಯವರು, ಲೋಯಾ ಅವರ ನಿಗೂಢ ಸಾವು ಕುರಿತಂತೆ ಕೆಲ ಭರವಸೆಗಳಿದ್ದವು. ಸತ್ಯ ಹೊರಬರಲಿದೆ ಎಂದು ಕೋಟ್ಯಾಂತರ ಭಾರತೀಯರು ಕಾಯುತ್ತಿದ್ದರು. ಆದರೆ, ಇದೀಗ ಆ ಭರವಸೆಗಳೂ ಕೂಡ ಇಲ್ಲದಂತಾಗಿದೆ ಎಂದು ಲೋಯಾ ಅವರ ಕುಟುಂಬಸ್ಥರು ಹೇಳಿದ್ದಾರೆ. ಆದರೆ, ಲೋಯಾ ಕುಟುಂಬಸ್ಥರಿಗೆ ಹೇಳಲು ಬಯಸುತ್ತೇನೆ, ಈಗಲೂ ಭರವಸೆಗಳಿವೆ... ಏಕೆಂದರೆ ಕೋಟ್ಯಾಂತರ ಭಾರತೀಯರು ಸತ್ಯವನ್ನು ನೋಡಲು ಬಯಸುತ್ತಿದ್ದಾರೆ. ಲೋಯಾ ಅವರನ್ನು ಭಾರತ ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದ್ದಾರೆ.