

ಚೆನ್ನೈ: ಸಿನಿಮಾ ರಂಗದಲ್ಲಿನ ಕಾಸ್ಟಿಂಗ್ ಕೌಚ್ ಸಂಸ್ಕೃತಿ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದ್ದು, ನಟ, ರಾಜಕಾರಣಿ ಕಮಲ್ ಹಾಸನ್ ಕೂಡಾ ಕಾಸ್ಟಿಂಗ್ ಕೌಚ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ
ಹೊಸ ತಮಿಳುನಾಡು ರಚನೆಯಾಗುತ್ತಿದ್ದು, ಈ ವಿಚಾರ ಅಪ್ರಸ್ತುತ. ಕಾಸ್ಟಿಂಗ್ ಕೌಚ್ ಬಗ್ಗೆ ಚರ್ಚೆ ನಡೆಸಲು ಇದು ಸರಿಯಾದ ಸ್ಥಳವಲ್ಲಾ ಎಂದಿದ್ದಾರ.
ಆದರೆ, ನಾನೂ ಕೂಡಾ ಚಿತ್ರೋದ್ಯಮದಿಂದ ಬಂದಿದ್ದೇನೆ. ಕೌಚ್ ಬಗ್ಗೆ ಮಾತನಾಡಲು ಎಲ್ಲಾ ಮಹಿಳೆಯರು ಹಕ್ಕು ಹೊಂದಿದ್ದಾರೆ. ಯಾವ ಮಹಿಳೆಯೂ ಕಾಸ್ಟಿಂಗ್ ಕೌಚ್ ಪರವಾಗಿ ಮಾತನಾಡಬಾರದು ಎಂದು ಕಮಲ್ ಹಾಸನ್ ಹೇಳಿದ್ದಾರೆ.
ತೆಲುಗು ಚಿತ್ರರಂಗದಲ್ಲಿನ ಕಾಸ್ಟಿಂಗ್ ಕೌಚ್ ಬಗ್ಗೆ ಇತ್ತೀಚಿಗೆ ಧ್ವನಿ ಎತ್ತಿದ್ದ ಶ್ರೀರೆಡ್ಡಿ ಅರೆಬೆತ್ತಲೆಯಾಗಿ ಪ್ರತಿಭಟಿಸಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದರು. ಕಾಸ್ಟಿಂಗ್ ಕೌಚ್ ಪರ ಹಾಗೂ ವಿರುದ್ಧ ಚರ್ಚೆಗಳು ರಾಷ್ಟ್ರದಾದ್ಯಂತ ನಡೆಯುತ್ತಿದ್ದು, ಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.