ಮಮತಾ ಬ್ಯಾನರ್ಜಿಯನ್ನು 'ಶೂರ್ಪನಖಿ' ಎಂದು ಕರೆದ ಉತ್ತರ ಪ್ರದೇಶ ಬಿಜೆಪಿ ಶಾಸಕ

ಉತ್ತರ ಪ್ರದೇಶದ ಬಿಜೆಪಿ ಶಾಸಕ ಸುರೇಂದ್ರಸಿಂಗ್ ಮಮತಾ ಬ್ಯಾನರ್ಜಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.ಕಾಂಗ್ರೆಸ್ ಪಕ್ಷವನ್ನು ರಾವಣನಿಗೆ ಹೋಲಿಕೆ ಮಾಡಿದ್ದು, ಮಮತಾ ಬ್ಯಾನರ್ಜಿಯನ್ನು ಶೂರ್ಪನಖಿ ಎಂದು ಕರೆದಿದ್ದಾರೆ.
ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ
Updated on

ಉತ್ತರ ಪ್ರದೇಶ:  ವಿವಾದಾತ್ಮಕ ಹೇಳಿಕೆಗಳನ್ನು ತಡೆಗಟ್ಟಿ ಎಂದು ಪ್ರಧಾನಿ ನರೇಂದ್ರಮೋದಿ ತನ್ನ ಪಕ್ಷದ ನಾಯಕರಿಗೆ ಹೇಳಿದ ಮಾರನೇ ದಿನವೇ  ಉತ್ತರ ಪ್ರದೇಶದ ಬಿಜೆಪಿ ಶಾಸಕ ಸುರೇಂದ್ರಸಿಂಗ್  ಮಮತಾ ಬ್ಯಾನರ್ಜಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಸುರೇಂದ್ರಸಿಂಗ್ , ಕಾಂಗ್ರೆಸ್ ಪಕ್ಷವನ್ನು ರಾವಣನಿಗೆ ಹೋಲಿಕೆ ಮಾಡಿದ್ದು, ಮಮತಾ ಬ್ಯಾನರ್ಜಿಯನ್ನು ಶೂರ್ಪನಖಿ ಎಂದು ಕರೆದಿದ್ದಾರೆ. ಹಿಂದೂ ಮಹಾಗ್ರಂಥ ರಾಮಾಯಣದಲ್ಲಿ ರಾವಣನ ತಂಗಿಯನ್ನು ಶೂರ್ಪನಖಿ ಆಗಿದ್ದಾಳೆ.

ಬೈರಿಯಾದಿಂದ ಮೊದಲ ಬಾರಿಗೆ ಶಾಸಕನಾಗಿ ಆಯ್ಕೆಯಾಗಿರುವ ಸುರೇಂದ್ರಸಿಂಗ್  ಮಮತಾ ಬ್ಯಾನರ್ಜಿ ಟೀಕಿಸುವ ಭರದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದು, ಪಶ್ಚಿಮ ಬಂಗಾಳದಲ್ಲಿ ಪ್ರತಿಭಟನೆ ಭುಗಿಲೇಳುವ ಸಾಧ್ಯತೆ ಇದೆ.

ಬಿಜೆಪಿ ಆಡಳಿತ ವಿರುವ ಎಲ್ಲಾ ರಾಜ್ಯಗಳ ಭಯೋತ್ಪಾದಕರು ಪಶ್ಚಿಮ ಬಂಗಾಳಕ್ಕೆ ಬರುತ್ತಿದ್ದು, ಇದೇ ಪರಿಸ್ಥಿತಿ ಮುಂದುವರೆದರೆ ಪಶ್ಚಿಮ ಬಂಗಾಳ ಕೂಡಾ  ಒಂದು ದಿನ ಜಮ್ಮು ಕಾಶ್ಮೀರವಾಗಲಿದೆ ಎಂದು ಮಮತಾ ಬ್ಯಾನರ್ಜಿ ಹೇಳಿಕೆ ನೀಡಿದ್ದರು.

ಇದನ್ನು ಟೀಕಿಸುವ ಭರದಲ್ಲಿ ಜಿಲ್ಲಾ ಪಂಚಾಯತ್ ಕಾರ್ಯಕ್ರಮದಲ್ಲಿ ಮಾತನಾಡಿದ
ಸುರೇಂದ್ರಸಿಂಗ್   ಕಾಂಗ್ರೆಸ್  ಪಕ್ಷವನ್ನು ರಾವಣನಿಗೆ ಹೋಲಿಸಿ, ಮಮತಾ ಬ್ಯಾನರ್ಜಿಯನ್ನು ಶೂರ್ಪನಖಿಗೆ ಹೋಲಿಕೆ ಮಾಡಿದ್ದ.

 ಪಶ್ಚಿಮ ಬಂಗಾಳದಲ್ಲಿ ಜನರ ಹತ್ಯೆಯಾಗುತ್ತಿದ್ದರೂ  ಅಲ್ಲಿನ ಮುಖ್ಯಮಂತ್ರಿಯಾಗಿರುವ ಮಮತಾ ಬ್ಯಾನರ್ಜಿ ಏನೂ ಮಾಡುತ್ತಿಲ್ಲ. ಶೂರ್ಪನಖಿ ಪಾತ್ರದಂತೆ ಇದ್ದಾರೆ ಎಂದು ಸುರೇಂದ್ರಸಿಂಗ್ ಹೇಳಿಕೆ ನೀಡಿದ್ದ.

 ಬಾಂಗ್ಲಾದೇಶದಿಂದ ಭಯೋತ್ಪಾದಕರು ಪಶ್ಚಿಮ ಬಂಗಾಳಕ್ಕೆ ಒಳನುಸುಳುತ್ತಿದ್ದು, ಹಿಂದೂಗಳಿಗೆ ತೊಂದರೆ ನೀಡುತ್ತಿದ್ದಾರೆ. ಆದರೆ. ನರೇಂದ್ರಮೋದಿ ಅವರಂತಹ ದಕ್ಷ ನಾಯಕರನ್ನು ಹೊಂದಿದ್ದು, ವಿದೇಶಿ ಶಕ್ತಿಗಳನ್ನು ಪಶ್ಚಿಮ ಬಂಗಾಳದಿಂದ ಹೊರ ದೊಡುವ ಶಕ್ತಿ ಹೊಂದಿರುವುದಾಗಿ ಮಮತಾ ವಿರುದ್ಧ ಟೀಕೆ ಮಾಡಿದ್ದ.

ಅಲ್ಲದೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರಮೋದಿ ನಾಯಕತ್ವದಲ್ಲಿ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯನ್ನು ಸೋಲಿಸಿ ಬಿಜೆಪಿ ಅಧಿಕಾರಕ್ಕೆ ಬರುವುದಾಗಿ ಸುರೇಂದ್ರ ಸಿಂಗ್ ಹೇಳಿಕೆ ನೀಡಿದ್ದಾನೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com