ಛತ್ತೀಸ್ ಗಢ: ಭದ್ರತಾ ಪಡೆಗಳೊಂದಿಗೆ ಎನ್'ಕೌಂಟರ್ ನಲ್ಲಿ 7 ನಕ್ಸಲರು ಹತ

ಛತ್ತೀಸ್ಗಢ-ತೆಲಂಗಾಣ ಗಡಿ ಭಾಗದಲ್ಲಿ ಭದ್ರತಾಪಡೆಗಳು ನಡೆಸಿದ ಎನ್'ಕೌಂಟರ್ ಐವರು ಮಹಿಳೆಯರು ಸೇರಿ ಒಟ್ಟು 7 ಮಂದಿ ನಕ್ಸಲರು ಮೃತಪಟ್ಟಿದ್ದಾರೆಂದು ಶುಕ್ರವಾರ ತಿಳಿದುಬಂದಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ರಾಯ್ಪುರ: ಛತ್ತೀಸ್ಗಢ-ತೆಲಂಗಾಣ ಗಡಿ ಭಾಗದಲ್ಲಿ ಭದ್ರತಾಪಡೆಗಳು ನಡೆಸಿದ ಎನ್'ಕೌಂಟರ್ ಐವರು ಮಹಿಳೆಯರು ಸೇರಿ ಒಟ್ಟು 7 ಮಂದಿ ನಕ್ಸಲರು ಮೃತಪಟ್ಟಿದ್ದಾರೆಂದು ಶುಕ್ರವಾರ ತಿಳಿದುಬಂದಿದೆ. 
ಭದ್ರತಾಪಡೆಗಳು ಎನ್'ಕೌಂಟರ್ ನಡೆಸುತ್ತಿದ್ದಂತೆಯೇ ನಕ್ಸಲರು ಪ್ರತಿದಾಳಿ ನಡೆಸಿದ್ದಾರೆ. ಈ ವೇಳೆ ಮೂವರುಪ ಯೋಧರಿಗೆ ಗಾಯಗಳಾಗಿರುವುದಾಗಿ ವರದಿಗಳು ತಿಳಿಸಿವೆ. 
ದಕ್ಷಿಣ ರಾಯ್ಪುರದ ಹತ್ತಿರದಲ್ಲಿರುವ ಐಕ್ಪೆಂಟಾ ಎಂಬ ಅರಣ್ಯ ಪ್ರದೇಶದಲ್ಲಿ ನಕ್ಸಲರು ತಮ್ಮ ಕಾರ್ಯಚಟುವಟಿಕೆಗಳನ್ನು ನಡೆಸುತ್ತಿದ್ದರು. ಈ ಬಗ್ಗೆ ಮಾಹಿತಿ ತಿಳಿದ ಭದ್ರತಾ ಪಡೆಗಳು ಸ್ಥಳವನ್ನು ಸುತ್ತುವರೆದರು. ಕೂಡಲೇ ಕಾರ್ಯಾಚರಣೆ ಆರಂಭಿಸಿದರು. 
ಬಳಿಕ ನಕ್ಸಲರೂ ಕೂಡ ಭದ್ರತಾ ಪಡೆಗಳ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಲು ಆರಂಭಿಸಿದ್ದಾರೆ. ಈ ವೇಳೆ ಮೂವರು ಯೋಧರು ಗಾಯಗೊಂಡಿದ್ದಾರೆ. ಈ ವರೆಗೂ 7 ನಕ್ಸಲರ ಮೃತದೇಹಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಬಸ್ತಾರ್ ಡಿಐಜಿ ಪಿ. ಸುಂದರ್ರಾಜ್ ಅವರು ಹೇಳಿದ್ದಾರೆ.
ಎನ್'ಕೌಂಟರ್ ನಡೆದ ಸ್ಥಳದಲ್ಲಿ ಸ್ವಯಂ ಚಾಲಿತ ರೈಫಲ್ 1, ಎಸ್'ಬಿಬಿಎಲ್ ಗನ್ 4, 303 ರೈಫಲ್ 1, ರಾಕೆಟ್ ಲಾಂಚರ್ 5 ಸೇರಿದಂತೆ ಹಲವು ಸ್ಫೋಟಕ ಸಾಮಾಗ್ರಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. 
ಮಹಾರಾಷ್ಟ್ರದ ಗಡ್ಚಿಚಿರೋಳಿಯಲ್ಲಿ ಕಳೆದ ವಾರ ನಡೆಸಲಾದ ಎರಡು ಪ್ರತ್ಯೇಕ ಕಾರ್ಯಾಚರಣೆಯಲ್ಲಿ 39 ನಕ್ಸಲರನ್ನು ಹತ್ಯೆ ಮಾಡಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com