ಸಿಲ್ಚಾರ್ ನಲ್ಲಿ ಟಿಎಂಸಿ ಸಂಸದರ ಬಂಧನ ಯತ್ನ, ಇದು ಅಂತ್ಯದ ಆರಂಭ: ಬಿಜೆಪಿ ವಿರುದ್ಧ ಮಮತಾ ವಾಗ್ದಾಳಿ

".ಅಸ್ಸಾಂ ನಲ್ಲಿ ನಡೆಯುತ್ತಿರುವ ದೌರ್ಜನ್ಯವು ಕೇವಲ ಖಂಡನಾರ್ಹವಷ್ಟೇ ಆಗಿಲ್ಲ. ಇದು ಅಂತ್ಯದ ಆರಂಭವಾಗಿದೆ ಎಂದು ನಾನು ಭಾವಿಸುತ್ತೇನೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
ಕೋಲ್ಕತ್ತಾ: ".ಅಸ್ಸಾಂ ನಲ್ಲಿ ನಡೆಯುತ್ತಿರುವ  ದೌರ್ಜನ್ಯವು ಕೇವಲ ಖಂಡನಾರ್ಹವಷ್ಟೇ ಆಗಿಲ್ಲ. ಇದು ಅಂತ್ಯದ ಆರಂಭವಾಗಿದೆ ಎಂದು ನಾನು ಭಾವಿಸುತ್ತೇನೆ. ಬಿಜೆಪಿಗರು ನಿರಾಶೆಗೊಂಡಿದ್ದಾರೆ. ಅವರು ರಾಜಕೀಯವಾಗಿ ಸೊತಿದ್ದಾರೆ ಹಾಗಾಗಿ ಈ ಪರಿದಾಷ್ಟೆ ಮೆರೆಯುತ್ತಿದ್ದಾರೆ" ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದರು. ಪಶ್ಚಿಮ ಬಂಗಾಳದ ಟಿಎಂಸಿ ಸಂಸದರನ್ನು ಸಿಲ್ಚಾರ್ ವಿಮಾನ ನಿಲ್ದಾಣದಲ್ಲಿ ಬಂಧಿಸುವ ಪ್ರಯತ್ನ ನಡೆದ ಕುರಿತು ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಎನ್ಆರ್‏ಸಿ ಕರಡು ಪ್ರಕಟಣೆಯ ಹಿನ್ನೆಲೆಯಲ್ಲಿ ಅಸ್ಸಾಂನಲ್ಲಿ ಪರಿಸ್ಥಿತಿಯನ್ನು ಅವಲೋಕಿಸಲು ಇಂದು ಸಿಲ್ಚಾರ್ ಗೆ ಆಗಮಿಸಿದ್ದ ತೃಣಮೂಲ ಕಾಂಗ್ರೆಸ್ ನಿಯೋಗವನ್ನು ಅಲ್ಲಿನ ವಿಮಾನ ನಿಲ್ದಾಣದಲ್ಲೇ ತಡೆದು ನಿಲ್ಲಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಪಿಟಿಐ ಜತೆ ಮಾತನಾಡಿದ ನಿಯೋಗದ ಸದಸ್ಯರಾಗಿದ್ದ ಟಿಎಂಸಿ ಸಂಸದ ಸುಖೇಂದ್ ಶೇಖರ್ ರಾಯ್ ನಮಗೆ ಅಸ್ಸಾಂ ಗೆ ತೆರಳಲು ತೊಂದರೆಯನ್ನುಂಟು ಮಾಡಲು ಪೋಲೀಸರು ಯೋಜಿಸಿದ್ದಾರೆ. ವಿಮಾನ ನಿಲ್ದಾಣದಲ್ಲಿ  1000 ಪೊಲೀಸರು ಇದ್ದರು ಎಂದಿದ್ದಾರೆ.
ಬರಾಕ್ ವ್ಯಾಲಿ ಪ್ರದೇಶದ ಕಚಾರ್ ಜಿಲ್ಲೆಯ ಕುಂಭಿಗ್ರಾಮ್ ವಿಮಾನ ನಿಲ್ದಾಣದ ವಿಐಪಿ ಕೋಣೆಯಲ್ಲಿ ಆರು ಸಂಸದರು ಸೇರಿದಂತೆ ಟಿಎಂಸಿ ನಿಯೋಗವನ್ನು ಇರಿಸಲಾಗಿದೆ ಎಂದು ಮೂಲಗಳು ಹೇಳಿದೆ. ಕಚಾರ್ ಜಿಲ್ಲಾಡಳಿತ ಎನ್ಆರ್‏ಸಿ ಪ್ರಕ್ರಿಯೆಯಲ್ಲಿ ಯಾವ ವ್ಯಕ್ತಿಗೂ ಪ್ರವೇಶವಿಲ್ಲ ಎಂದಿದ್ದು ಕಳೆದ ರಾತ್ರಿಯಿಂದಲೇ ಸೆಕ್ಷನ್ 144 ರ ಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದೆ.
ಬಿಜೆಪಿಯ ನೇತೃತ್ವದ ಕೇಂದ್ರ ಸರ್ಕಾರ ಎನ್ಆರ್‏ಸಿ ವಿಚಾರದಲ್ಲಿ  "ಮತ ಬ್ಯಾಂಕ್ ರಾಜಕೀಯ" ನಡೆಸುತ್ತಿದೆ  ದೇಶದಲ್ಲಿ "ಭಾರತೀಯ ನಾಗರಿಕರು ನಿರಾಶ್ರಿತರಾಗಿದ್ದಾರೆ" ಎಂದು ಟಿಎಂಸಿ ಅಧಿನಾಯಕಿ ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com