30 ವರ್ಷ ಭಾರತೀಯ ಸೇನೆಯಲ್ಲಿ ಸೇವೆಸಲ್ಲಿಸಿದ್ದರೂ ಇವರು ಭಾರತೀಯರಲ್ಲ, ಇದು ಎನ್‌ಆರ್‌ಸಿ ಎಡವಟ್ಟು

ಅಸ್ಸಾಂ ಸರ್ಕಾರ ನಡೆಸಿದ್ದ ರಾಷ್ಟ್ಪೀಯ ನಾಗರಿಕರ ನೋಂದಣಿಯ ಒಂದೊಂದೇ ಎಡವಟ್ಟು ಬಯಲಾಗುತ್ತಿದ್ದು, ಭಾರತೀಯ ಸೇನೆಯಲ್ಲಿ 30 ವರ್ಷ ಸೇವೆ ಸಲ್ಲಿಸಿಗ್ಗ ನಿವೃತ್ತ ಯೋಧನ ಹೆಸರೂ ಕೂಡ ಎನ್‌ಆರ್‌ಸಿ ಪಟ್ಟಿಯಿಂದ ನಾಪತ್ತೆಯಾಗಿದೆ.
ನಿವೃತ್ತ ಯೋಧ ಮಹಮದ್ ಹಕ್
ನಿವೃತ್ತ ಯೋಧ ಮಹಮದ್ ಹಕ್
ಗುವಾಹತಿ: ಅಸ್ಸಾಂ ಸರ್ಕಾರ ನಡೆಸಿದ್ದ ರಾಷ್ಟ್ಪೀಯ ನಾಗರಿಕರ ನೋಂದಣಿಯ ಒಂದೊಂದೇ ಎಡವಟ್ಟು ಬಯಲಾಗುತ್ತಿದ್ದು, ಭಾರತೀಯ ಸೇನೆಯಲ್ಲಿ 30 ವರ್ಷ ಸೇವೆ ಸಲ್ಲಿಸಿಗ್ಗ ನಿವೃತ್ತ ಯೋಧನ ಹೆಸರೂ ಕೂಡ ಎನ್‌ಆರ್‌ಸಿ ಪಟ್ಟಿಯಿಂದ ನಾಪತ್ತೆಯಾಗಿದೆ.
ಸೇನೆಯಲ್ಲಿ ಜೂನಿಯರ್ ಕಮಿಷನ್ಡ್ ಅಧಿಕಾರಿಯಾಗಿ 30 ವರ್ಷ ಸೇವೆ ಸಲ್ಲಿಸಿದ್ದ ಮಹಮದ್ ಎ ಹಕ್ ಎಂಬ ನಿವೃತ್ತ ಯೋಧರ ಹೆಸರು ಪಟ್ಟಿಯಿಂದ ನಾಪತ್ತೆಯಾಗಿದ್ದು, ಎನ್ ಆರ್ ಸಿ ಯ ಕಾರ್ಯವೈಖರಿ ಬಗ್ಗೆ ಅನುಮಾನ ಹುಟ್ಟುಹಾಕುವಂತೆ ಮಾಡಿದೆ. ಈ ಬಗ್ಗೆ ನಿರಾಶೆಯಿಂದ ಮಾತನಾಡಿರುವ ಯೋಧ ಮಹಮದ್ ಹಕ್ ಸರ್ಕಾರದ ಕಾರ್ಯವೈಖರಿ ನಿಜಕ್ಕೂ ನಮಗೆ ನಿರಾಶೆ ಮೂಡಿಸಿದೆ. ನಾನು 30 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿದ್ದೇನೆ. ನನ್ನಂತಹ ನಿವೃತ್ತ ಯೋಧರಿಗೇ ಇಂತಹ ಪರಿಸ್ಥಿತಿಯಾದರೆ ಜನ ಸಾಮಾನ್ಯರ ಗತಿ ಏನು.. ಸರ್ಕಾರ ನಿವೃತ್ತ ಯೋಧರಿಗೆ ನೀಡುವ ಗೌರವ ಇದೇ ಏನು ಎಂದು ಪ್ರಶ್ನಿಸಿದ್ದಾರೆ. 
ಯಾವುದೇ ರೀತಿಯ ತನಿಖೆ ಮಾಡುವಾಗ ನಿಷ್ಪಕ್ಷಪಾತವಾಗಿ ಮತ್ತು ಸೌಹಾರ್ಧಯುತವಾಗಿ ಮಾಡಬೇಕು. ನನ್ನ ಪೋಷಕರ ವಂಶವೃಕ್ಷ ಪಟ್ಟಿಯೇ ನನ್ನ ಬಳಿ ಇದೆ. ಹೀಗಿದ್ದೂ ಎನ್ ಆರ್ ಸಿಯಲ್ಲಿ ಹೆಸರಿಲ್ಲ ಎಂದರೆ ನೋವಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಮಹಮದ್ ಹಕ್ 1986 ರಿಂದ 2016ರವರೆಗೂ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. 
ಇದೇ ಅಂತಿಮವಲ್ಲ: ಸರ್ಕಾರದ ಸ್ಪಷ್ಟನೆ
ಇನ್ನು ಹಾಲಿ ಎನ್ ಆರ್ ಸಿ ಪಟ್ಟಿಯಿಂದಾಗಿ ಭುಗಿಲೆದ್ದಿರುವ ವಿವಾದಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ಅಸ್ಸಾಂ ಸರ್ಕಾರ, ಇದು ಅಂತಿಮ ಪಟ್ಟಿಯೇನಲ್ಲ. ತಾಂತ್ರಿಕ ಮತ್ತು ಇತರೆ ಕಾರಣಗಳಿಂದ ಹಲವರ ಹೆಸರು ನಾಪತ್ತೆಯಾಗಿರಬಹುದು. ಆದರೆ ಡಿಸೆಂಬರ್ ನಲ್ಲಿ ಪ್ರಕಟ ಮಾಡಲಾಗುವ ಪಟ್ಟಿ ಪೂರ್ಣ ಪ್ರಮಾಣದಲ್ಲಿ ಯಾವುದೇ ಸಮಸ್ಯೆಗಳಿಲ್ಲದೇ ಇರುತ್ತದೆ ಎಂದು ಭಾವಿಸಿದ್ದೇವೆ. ಈಗಾಗಲೇ ಮತದಾರರ ಪಟ್ಟಿಯಲ್ಲಿ ಹೆಸರಿದ್ದವರನ್ನೂ ಎನ್ ಆರ್ ಸಿ ಪಟ್ಟಿಗೆ ಸೇರಿಸಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com