ಬಿಹಾರ ವಸತಿ ನಿಲಯ ಲೈಂಗಿಕ ಕಿರುಕುಳ: ಸಮಾಜ ಕಲ್ಯಾಣ ಸಚಿವರ ವಜಾಕ್ಕೆ ಬಿಜೆಪಿ ಒತ್ತಾಯ, ಜೆಡಿಯು ಅಸಮ್ಮತಿ

ವಸತಿ ನಿಲಯಗಳಲ್ಲಿ ಅಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರದ ಸಮಾಜ ಕಲ್ಯಾಣ ಇಲಾಖೆ ರಾಜೀನಾಮೆಗೆ ಬಿಜೆಪಿ ಒತ್ತಾಯಿಸಿದೆ. ಆದರೆ, ಇದಕ್ಕೆ ಜೆಡಿಯು ಅಸಮ್ಮತಿ ವ್ಯಕ್ತಪಡಿಸಿದ್ದು, ಎನ್ ಡಿ ಎ ಮೈತ್ರಿಕೂಟದಲ್ಲಿ ಬಿಕ್ಕಟ್ಟು ತಲೆದೋರಿದೆ.
ಬಿಹಾರ ವಸತಿ ನಿಲಯಗಳ  ಚಿತ್ರ
ಬಿಹಾರ ವಸತಿ ನಿಲಯಗಳ ಚಿತ್ರ

ಪಾಟ್ನಾ : ಮುಜಾಫರ್ ಪುರ್  ವಸತಿ ನಿಲಯ ಸೇರಿದಂತೆ  ಜಿಲ್ಲೆಯಲ್ಲಿನ ವಸತಿ ನಿಲಯಗಳ  ಬಗ್ಗೆ ಉದಾಸೀನ ತೋರಿದ ಹಿನ್ನೆಲೆಯಲ್ಲಿ  ಸಮಾಜ ಕಲ್ಯಾಣ ಇಲಾಖೆಯ 13 ಅಧಿಕಾರಿಗಳನ್ನು  ಬಿಹಾರ ಸರ್ಕಾರ  ಅಮಾತುಗೊಳಿಸಿದ್ದರೂ ಇದೀಗ  ಎನ್ ಡಿಎ ಮೈತ್ರಿಕೂಟದಲ್ಲಿ ಬಿಕ್ಕಟ್ಟು ಉಲ್ಬಣಿಸಿದ್ದು,  ಸಮಾಜ ಕಲ್ಯಾಣ ಇಲಾಖೆ ಸಚಿವೆ ಮಂಜು ವರ್ಮಾ  ಅವರನ್ನು  ವಜಾ ಮಾಡಬೇಕೆಂದು  ಬಿಜೆಪಿ ನಾಯಕ ಸಿಪಿ  ಠಾಕೂರ್  ಆಗ್ರಹಿಸಿದ್ದಾರೆ.

ಮುಜಾಫರ್ ಪುರ್  ವಸತಿ ನಿಲಯದಲ್ಲಿ  ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಾಜ ಕಲ್ಯಾಣ ಇಲಾಖೆ ಸಚಿವೆ ಮಂಜು ವರ್ಮಾ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು  ಬಿಜೆಪಿ ಹಿರಿಯ ನಾಯಕ ಸಿ. ಪಿ. ಠಾಕೂರ್ ಒತ್ತಾಯಿಸಿದ್ದಾರೆ.

ಸಮಾಜ ಕಲ್ಯಾಣ ಇಲಾಖೆಯಲ್ಲಿ ಅನೇಕ ಲೋಪಗಳು ಉಂಟಾಗಿದ್ದು, ಈ ವಿಚಾರ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುವ ಮುನ್ನ  ಪರಿಸ್ಥಿತಿ ಕೈ ಮೀರದಂತೆ  ನೋಡಿಕೊಳ್ಳಬೇಕಾಗಿದೆ. ಹೀಗಾಗಿ  ನೈತಿಕ ಹೊಣೆ ಹೊತ್ತು ಮಂಜು ವರ್ಮಾ  ರಾಜೀನಾಮೆ ನೀಡಬೇಕೆಂದು ಅವರು ಹೇಳಿದ್ದಾರೆ.

ಮಂಜು ವರ್ಮಾ ವಸತಿ ನಿಲಯಗಳಲ್ಲಿ ಕಾರ್ಯನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿರುವುದರ  ಜೊತೆಗೆ ಅವರ ಪತ್ನಿ ಮಾಜಿ  ಎಂಎಲ್ ಸಿ  ಮುಜಾಫರ್ ಪುರ್  ವಸತಿ ನಿಲಯಕ್ಕೆ ಅಕ್ರಮವಾಗಿ  ಪ್ರವೇಶಿಸಿರುವ ಕುರಿತಂತೆ ಆರೋಪ ಕೇಳಿಬಂದಿದೆ ಆದಾಗ್ಯೂ, ಜೆಡಿಯು ನಾಯಕರು  ಮಂಜು ವರ್ಮಾ ಅವರನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ.

ಇಡೀ ಪ್ರಕರಣದಲ್ಲಿ ಮಂಜು ವರ್ಮಾ ಎಲ್ಲೂ ಕಂಡಬಂದಿಲ್ಲ. ಅವರ ಪತಿಯನ್ನು ಕೂಡಾ  ಬಂಧಿಸಿಲ್ಲ ಹೀಗಾಗಿ ಅವರು ರಾಜೀನಾಮೆ ನೀಡಬೇಕಾದ ಅಗತ್ಯವಿಲ್ಲ ಎಂದು ಜೆಡಿಯು  ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ  ಕೆ. ಸಿ. ತ್ಯಾಗಿ ಸಮರ್ಥಿಸಿಕೊಂಡಿದ್ದಾರೆ.

ಮಂಜು ವರ್ಮಾ ಅವರನ್ನು  ಸಂಪುಟದಿಂದ ಕೈ ಬಿಡುವ ಅಗತ್ಯ ಇಲ್ಲವೇ ಇಲ್ಲ ಎಂದು ಬಿಹಾರ ಗ್ರಾಮೀಣ ಅಭಿವೃದ್ದಿ ಸಚಿವ ಶ್ರವಣ್ ಕುಮಾರ್  ಮತ್ತು ಅಲ್ಪಸಂಖ್ಯಾತ ಸಚಿವ ಖುರ್ಷಿದ್ ಅಲಂ ಹೇಳಿದ್ದಾರೆ.

ನಕಾರಾತ್ಮಕ ವಿಷಯಗಳನ್ನು ಎಳೆಯುವಲ್ಲಿ ಪ್ರತಿಪಕ್ಷಗಳ ನಾಯಕರು ನಿರತರಾಗಿದ್ದಾರೆ.  ಕಾನೂನಿನಡಿಯಲ್ಲಿ ಬಿಹಾರದಲ್ಲಿ ಎಲ್ಲಾ ಸಕಾರಾತ್ಮಕ ಬೆಳವಣಿಗೆಗಳು ಆಗಲಿವೆ. ಯಾರೇ ಅಪರಾಧ ಮಾಡಿದ್ದರೂ ಅವರು ಜೈಲಿಗೆ ಹೋಗುತ್ತಾರೆ. ಅಪರಾಧಿಗಳನ್ನು ರಕ್ಷಿಸಲು ಹೋದವರು ಕೂಡಾ  ಜೈಲಿಗೆ ಹೋಗುತ್ತಾರೆ. ಅಪರಾಧ ವಿಚಾರದಲ್ಲಿ ನಿರ್ಲಕ್ಷ್ಯ ತೋರಿಲ್ಲ ಎಂದು ನಿತಿಶ್ ಕುಮಾರ್  ಹೇಳಿದ್ದಾರೆ.

ವಸತಿ ನಿಲಯಗಳಲ್ಲಿ ಬಾಲಕಿಯರ ಮೇಲಿನ ಲೈಂಗಿಕ ಕಿರುಕುಳ ಪ್ರಕರಣ ಸಂಬಂಧ ಟಾಟಾ ಸಾಮಾಜಿಕ ವಿಜ್ಞಾನಗಳ ಸಂಸ್ಥೆ ವರದಿ ನೀಡಿದ ನಂತರ ಕ್ರಮ ಕೈಗೊಳ್ಳುವಲ್ಲಿ ವಿಳಂಬ ಆಧಾರದ ಮೇಲೆ  ಆರು ಜಿಲ್ಲೆಗಳ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಹಾಗೂ ಏಳು ಜಿಲ್ಲೆಗಳ  ಮಕ್ಕಳ ಸಂರಕ್ಷಣಾ ಅಧಿಕಾರಿಗಳನ್ನು  ಸೇವೆಯಿಂದ ಅಮಾನತ್ತುಗೊಳಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com