ಕರುಣಾನಿಧಿ ಆರೋಗ್ಯ ಮತ್ತಷ್ಟು ಕ್ಷೀಣ, ಮುಂದಿನ 24 ಗಂಟೆ ನಿರ್ಣಾಯಕ: ಆಸ್ಪತ್ರೆ

ಕಳೆದ 10 ದಿನಗಳಿಂದ ಕಾವೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಡಿಎಂಕೆ ವರಿಷ್ಠ ಕರುಣಾನಿಧಿ ಅವರ ಆರೋಗ್ಯ ಮತ್ತಷ್ಟು ಕ್ಷೀಣಗೊಂಡಿದ್ದು, ಅವರ ಅಂಗಾಂಗಗಳನ್ನು ಸಹಜ ಸ್ಥಿತಿಯಲ್ಲಿಡುವುದು ಸವಾಲು ಆಗಿದೆ ಎಂದು ಆಸ್ಪತ್ರೆ ಹೇಳಿಕೆ ನೀಡಿದೆ.
ಕರುಣಾನಿಧಿ , ಸ್ಟಾಲಿನ್
ಕರುಣಾನಿಧಿ , ಸ್ಟಾಲಿನ್

ಚೆನ್ನೈ : ಕಳೆದ 10 ದಿನಗಳಿಂದ  ಕಾವೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಡಿಎಂಕೆ ವರಿಷ್ಠ ಕರುಣಾನಿಧಿ ಅವರ ಆರೋಗ್ಯ ಮತ್ತಷ್ಟು ಕ್ಷೀಣಗೊಂಡಿದ್ದು,  ಅವರ  ಅಂಗಾಂಗಗಳನ್ನು ಸಹಜ ಸ್ಥಿತಿಯಲ್ಲಿಡುವುದು  ಸವಾಲು ಆಗಿದೆ ಎಂದು ಆಸ್ಪತ್ರೆ  ಹೇಳಿಕೆ ನೀಡಿದೆ.

94 ವರ್ಷದ ಮಾಜಿ ತಮಿಳುನಾಡು ಮುಖ್ಯಮಂತ್ರಿ ಅವರನ್ನು ನಿರಂತರವಾಗಿ ತಪಾಸಣೆ ನಡೆಸಲಾಗುತ್ತಿದ್ದು, ನುರಿತ  ವೈದ್ಯರ  ಸಹಕಾರದೊಂದಿಗೆ  ಚಿಕಿತ್ಸೆ ನೀಡಲಾಗುತ್ತಿದೆ ಎಂದು  ಕಾವೇರಿ ಆಸ್ಪತ್ರೆಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.

ವಯೋ ಸಹಜ ಸಮಸ್ಯೆಯಿಂದಾಗಿ  ಅಂಗಾಂಗಗಳ ಕಾರ್ಯನಿರ್ವಹಣೆಯನ್ನು  ಸಮಸ್ಯೆಯಾಗದಂತೆ ನಿಗಾವಹಿಸಲಾಗಿದೆ. ಆದರೆ ಕರುಣಾನಿಧಿ ಅವರ ಪರಿಸ್ಥಿತಿ ಮತ್ತಷ್ಟು ಕ್ಷೀಣಿಸಿದೆ. ಮುಂದಿನ  24 ಗಂಟೆಗಳಲ್ಲಿ ಚಿಕಿತ್ಸೆಗೆ ಅವರು ಹೇಗೆ ಸ್ಪಂದಿಸುತ್ತಾರೆ ಎಂಬುದು  ಅವರ ಆರೋಗ್ಯವನ್ನು ನಿರ್ಧರಿಸಲಿದೆ ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಅರವಿಂದನ್ ಸೆಲ್ವರಾಜ್ ಹೇಳಿದ್ದಾರೆ.

ರಕ್ತದೊತ್ತಡ ಸಮಸ್ಯೆಯಿಂದಾಗಿ ಕರುಣಾನಿಧಿ ಜುಲೈ 28 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ತದನಂತರ ಅವರ ಆರೋಗ್ಯ ಕ್ಷೀಣಿಸಿದೆ ಎಂದು ವೈದ್ಯರು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com