'ಭಾರತ ಬಿಟ್ಟು ತೊಲಗಿ ಚಳುವಳಿ'ಗೆ 76 ವರ್ಷ: ಮಹಾತ್ಮಗಾಂಧಿ ಸ್ಮರಿಸಿದ ಪ್ರಧಾನಿ ಮೋದಿ

'ಭಾರತ ಬಿಟ್ಟು ತೊಲಗಿ ಚಳುವಳಿ'ಗೆ 76 ವರ್ಷಗಳಾಗಿದ್ದು, ಈ ಹಿನ್ನಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗುರವಾರ ರಾಷ್ಟ್ರಪತಿ ಮಹಾತ್ಮ ಗಾಂಧೀಜಿಯವರನ್ನು ಗುರುವಾರ ಸ್ಮರಿಸಿದ್ದಾರೆ...
ಪ್ರಧಾನಮಂತ್ರಿ ನರೇಂದ್ರ ಮೋದಿ
ಪ್ರಧಾನಮಂತ್ರಿ ನರೇಂದ್ರ ಮೋದಿ
ನವದೆಹಲಿ: 'ಭಾರತ ಬಿಟ್ಟು ತೊಲಗಿ ಚಳುವಳಿ'ಗೆ 76 ವರ್ಷಗಳಾಗಿದ್ದು, ಈ ಹಿನ್ನಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗುರವಾರ ರಾಷ್ಟ್ರಪತಿ ಮಹಾತ್ಮ ಗಾಂಧೀಜಿಯವರನ್ನು ಗುರುವಾರ ಸ್ಮರಿಸಿದ್ದಾರೆ. 
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಮಾಡು ಇಲ್ಲವೇ ಮಡಿ ಎಂಬ ಘೋಷಣಾ ವಾಕ್ಯ ಇಡೀ ದೇಶವನ್ನು ಪ್ರೇರೇಪಿಸಿತ್ತು. ಗಾಂಧೀಜಿಯವರ ಭಾರತ ಬಿಟ್ಟು ತೊಲಗಿ ಚಳುವಳಿ ಎಷ್ಟರ ಮಟ್ಟಿಗೆ ಜನರ ಮೇಲೆ ಪರಿಣಾಮ ಬೀರಿತ್ತು ಮತ್ತು ಎಷ್ಟರ ಮಟ್ಟಿಗೆ ಜನರು ಭಾಗವಸಿದ್ದರು ಎಂಬುದಕ್ಕೆ ಮತ್ತೊಂದು ಅಧಿಕೃತ ವರದಿ ಇಲ್ಲಿದೆ ಎಂದು ಹೇಳಿದ್ದಾರೆ.
ಭಾರತ ಬಿಟ್ಟು ತೊಲಗಿ ಚಳುವಳಿಯಲ್ಲಿ ಭಾಗವಹಿಸಿದ್ದ ಎಲ್ಲಾ ಅತ್ಯುತ್ತಮ ಮಹಿಳೆಯರು ಹಾಗೂ ಪುರುಷರನ್ನು ನೆನೆಯುತ್ತಿದ್ದೇವೆಂದು ತಿಳಿಸಿದ್ದಾರೆ. 
ಇದೇ ವೇಳೆ ರಾಷ್ಟ್ರೀಯ ದಾಖಲೆಗಳಿಗೆ ಧನ್ಯವಾದಗಳನ್ನು ಹೇಳಿರುವ ಪ್ರಧಾನಿ ಮೋದಿಯವರು, ಭಾರತ ಬಿಟ್ಟು ತೊಲಗಿ ಚಳುವಳಿಗೆ ಸಂಬಂಧಿಸಿದ ಇತಿಹಾಸದ ಕೆಲ ಆಕರ್ಷಕ ತುಣುಕುಗಳು ದೊರಕಿವೆ. ಭಾರತ ಬಿಟ್ಟು ತೊಲಗಿ ಚಳುವಳಿ ಕುರಿತಂತೆ ಅಟಲ್ ಜೀ ಬರೆದಿರುವ ಪದ್ಯವೊಂದು ಇಲ್ಲಿದೆ. ಈ ಪದ್ಯ ಶ್ರೀ ಮದನ್ ಮೋಹನ್ ಮಾಳವೀಯ ಜೀ ನೇತೃತ್ವದ ಅಭ್ಯುದಯ ಎಂಬ ದಿನಪತ್ರಿಕೆಯಲ್ಲಿ ಪ್ರಕಟಣೆಗೊಂಡಿತ್ತು ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com