ಉತ್ತರ ಪ್ರದೇಶದಲ್ಲಿ ಮತ್ತೊಂದು ಮೇಲ್ಸೇತುವೆ ಕುಸಿತ, 4 ಮಂದಿಗೆ ಗಾಯ

ವಾರಣಾಸಿ ಮೇಲ್ಸೇತುವೆ ಕುಸಿತ ಪ್ರಕರಣ ಹಸಿರಾಗಿರುವಾಗಲೇ ಉತ್ತರ ಪ್ರದೇಶದಲ್ಲಿ ಮತ್ತೊಂದು ಮೇಲ್ಸೇತುವೆ ಕುಸಿದಿದೆ. ಪರಿಣಾಮ 4 ಮಂದಿ ಗಾಯಗೊಂಡಿದ್ದಾರೆ.
ಉತ್ತರ ಪ್ರದೇಶದಲ್ಲಿ ಮೇಲ್ಸೇತುವೆ ಕುಸಿತ
ಉತ್ತರ ಪ್ರದೇಶದಲ್ಲಿ ಮೇಲ್ಸೇತುವೆ ಕುಸಿತ
Updated on: 
ಲಖನೌ: ವಾರಣಾಸಿ ಮೇಲ್ಸೇತುವೆ ಕುಸಿತ ಪ್ರಕರಣ ಹಸಿರಾಗಿರುವಾಗಲೇ ಉತ್ತರ ಪ್ರದೇಶದಲ್ಲಿ ಮತ್ತೊಂದು ಮೇಲ್ಸೇತುವೆ ಕುಸಿದಿದೆ. ಪರಿಣಾಮ 4 ಮಂದಿ ಗಾಯಗೊಂಡಿದ್ದಾರೆ.
ಉತ್ತರ ಪ್ರದೇಶದ ಬಸ್ತಿಯ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 28ರ ಮೇಲ್ಸೇತುವೆ ಕುಸಿತವಾಗಿದೆ. ಪ್ರಕರಣದಲ್ಲಿ ಕನಿಷ್ಠ4 ಮಂದಿ ಗಾಯಗೊಂಡಿದ್ದು, ಹಲವರು ಸಿಲುಕಿ ಹಾಕಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಪ್ರಸ್ತುತ ಘಟನಾ ಪ್ರದೇಶಕ್ಕೆ ದೌಡಾಯಿಸಿರುವ ಅಗ್ನಿಶಾಮಕ ದಳ ಮತ್ತು ಪೊಲೀಸರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಅಧಿಕಾರಿಗಳು ನೀಡಿರುವ ಮಾಹಿತಿಯಂತೆ ಅವಶೇಷಗಳಡಿಯಲ್ಲಿ ಇನ್ನು ಕನಿಷ್ಠ ಇಬ್ಬರು ಸಿಲುಕಿರುವ ಶಂಕೆ ವ್ಯಕ್ತವಾಗುತ್ತಿದೆ. 
ಅಂತೆಯೇ ಮೇಲ್ಸೇತುವೆ ಕುಸಿತ ವಿಚಾರ ತಿಳಿದ ಸಿಎಂ ಯೋಗಿ ಆದಿತ್ಯಾನಾಥ್ ಅವರು ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು, ಅಧಿಕಾರಿಗಳಿಂದ ಮಾಹಿತಿ ಪಡೆದಿದ್ಜಾರೆ.
ಕಳೆದ ಮೇ 15ರಂದು ವಾರಣಾಸಿಯಲ್ಲೂ ಇಂತಹುದೇ ದುರಂತ ಸಂಭವಿಸಿತ್ತು. ನಿರ್ಮಾಣಹಂತದ ಮೇಲ್ಸೇತುವೆ ಕುಸಿದ ಪರಿಣಾಮ 18 ಮಂದಿ ಸಾವನ್ನಪ್ಪಿದ್ದರು. ಪ್ರಕರಣ ಸಂಬಂಧ ಯೋಜನೆಯ ಇಂಜಿನಿಯರ್ ಮತ್ತು ಗುತಿಗೆದಾರರನ್ನು ಬಂಧಿಸಲಾಗಿತ್ತು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com