72ನೇ ಸ್ವಾತಂತ್ರ್ಯ ದಿನ; ಭಾರತ್ ಮಾತಾಕಿ ಜೈ ಕಡ್ಡಾಯ ಎಂದ ಶಿಯಾ ವಕ್ಫ್ ಬೋರ್ಡ್

72ನೇ ಸ್ವಾತಂತ್ರ್ಯ ದಿನಾಚರಣೆಯಂದು ಭಾರತ್ ಮಾತಾಕಿ ಜೈ ಘೋಷಣೆಯನ್ನು ಕಡ್ಡಾಯ ಮಾಡಬೇಕೆಂದು ಉತ್ತರಪ್ರದೇಶದ ಶಿಯಾ ವಕ್ಫ್ ಬೋರ್ಡ್ ಆದೇಶ ಹೊರಡಿಸಿದೆ...
ಶಿಯಾ ವಕ್ಫ್ ಬೋರ್ಡ್ಅಧ್ಯಕ್ಷ ವಸೀಂ ರಿಜ್ವಿ
ಶಿಯಾ ವಕ್ಫ್ ಬೋರ್ಡ್ಅಧ್ಯಕ್ಷ ವಸೀಂ ರಿಜ್ವಿ
ಲಖನೌ: 72ನೇ ಸ್ವಾತಂತ್ರ್ಯ ದಿನಾಚರಣೆಯಂದು ಭಾರತ್ ಮಾತಾಕಿ ಜೈ ಘೋಷಣೆಯನ್ನು ಕಡ್ಡಾಯ ಮಾಡಬೇಕೆಂದು ಉತ್ತರಪ್ರದೇಶದ ಶಿಯಾ ವಕ್ಫ್ ಬೋರ್ಡ್ ಆದೇಶ ಹೊರಡಿಸಿದೆ. 
ಶನಿವಾರ ಈ ಆದೇಶವನ್ನು ಹೊರಡಿಸಿರುವ ಮಂಡಳಿ, ಆದೇಶ ಪಾಲನೆ ಮಾಡದಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ. 
ಆಗಸ್ಟ್ 15ರ ಸ್ವಾತಂತ್ರ್ಯೋತ್ಸವ ದಿನಾಚರಣೆಯಂದು ನಡೆಯುವ ಎಲ್ಲಾ ಕಾರ್ಯಕ್ರಮದ ವೇಳೆ ರಾಷ್ಟ್ರಗೀತೆ ಹಾಡಿದ ಬಳಿಕ ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಕೂಗಬೇಕು. ಇದನ್ನು ಮೀರಿ ಘೋಷಣೆ ಕೂಗದೇ ಇದ್ದಲ್ಲಿ ಕಠಿಮ ಕೈಗೊಳ್ಳುವುದಾಗಿ ಮಂಡಳಿಯ ಅಧ್ಯಕ್ಷ ವಸೀಂ ರಿಜ್ವಿ ಹೇಳಿದ್ದಾರೆ. 
ವ್ಯವಸ್ಥಾಪಕರು ಹಾಗೂ ಸಮಿತಿಯ ನಿರ್ವಾಕರಿಗೆ ಈ ಜವಾಬ್ದಾರಿಯನ್ನು ವಹಿಸಲಾಗಿದೆ. ನಿರ್ವಾಹಕರೇ ಆದೇಶ ಪಾಲನೆ ಮಾಡುವುದರ ಕುರಿತಂತೆ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕು. ತಾಯಿನಾಡು ಪರ ಘೋಷಣೆ ಕೂಗುವುದಕ್ಕೆ ಮುಸ್ಲಿಮರಿಗೆ ಯಾವುದೇ ರೀತಿಯ ಸಮಸ್ಯೆಗಳಿಲ್ಲ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com