ಕೊಚ್ಚಿ ವಿಮಾನ ನಿಲ್ದಾಣ
ದೇಶ
ಕೇರಳ ಪ್ರವಾಹ: ಆಗಸ್ಟ್ 18ರವರೆಗೂ ಕೊಚ್ಚಿ ವಿಮಾನ ನಿಲ್ದಾಣ ಸೇವೆ ಸ್ಥಗಿತ
ಕೇರಳದಲ್ಲಿ ಉಂಟಾಗಿರುವ ಭೀಕರ ಪ್ರವಾಹ ಪರಿಸ್ಥಿತಿ ಮುಂದುವರೆದಿದ್ದು, ಇದೇ ಮೊದಲ ಬಾರಿಗೆ ಪ್ರವಾಹದ ಹೊಡೆತಕ್ಕೆ ಸಿಲುಕಿರುವ ಕೊಚ್ಚಿ ವಿಮಾನ ನಿಲ್ದಾಣವನ್ನು 4 ದಿನಗಳ ಕಾಲ ಬಂದ್ ಮಾಡಲಾಗಿದೆ.
ಕೊಚ್ಚಿ: ಕೇರಳದಲ್ಲಿ ಉಂಟಾಗಿರುವ ಭೀಕರ ಪ್ರವಾಹ ಪರಿಸ್ಥಿತಿ ಮುಂದುವರೆದಿದ್ದು, ಇದೇ ಮೊದಲ ಬಾರಿಗೆ ಪ್ರವಾಹದ ಹೊಡೆತಕ್ಕೆ ಸಿಲುಕಿರುವ ಕೊಚ್ಚಿ ವಿಮಾನ ನಿಲ್ದಾಣವನ್ನು 4 ದಿನಗಳ ಕಾಲ ಬಂದ್ ಮಾಡಲಾಗಿದೆ.
ಮುಂಗಾರು ಮಳೆಗೆ ತತ್ತರಿಸಿ ಹೋಗಿರುವ ಕೇರಳದಲ್ಲಿ ಈಗಾಗಲೇ 47 ಮಂದಿ ಸಾವಿಗೀಡಾಗಿದ್ದು, 5 ಮಂದಿ ಕಾಣೆಯಾಗಿದ್ದಾರೆ. 10 ಸಾವಿರ ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚಿಸಲಾಗಿದೆ. ಇದರ ನಡುವೆಯೇ
ಕೊಚ್ಚಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದ್ದು, ಆಗಸ್ಟ್ 18ರ ಮಧ್ಯಾಹ್ನ 2 ಗಂಟೆಯ ವರೆಗೂ ಕೊಚ್ಚಿನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ವಿಮಾನ ನಿಲ್ದಾಣದಲ್ಲಿ ತುಂಬಿರುವ ನೀರನ್ನು ಹೊರತೆಗೆಯಲು ಹಾಗೂ ಒಣಗಿಸಲು ಶ್ರಮಿಸುತ್ತಿರುವುದಾಗಿ ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.
14 ಜಿಲ್ಲೆಗಳ ಪೈಕಿ 12 ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಲಾಗಿದೆ. ವಯನಾಡ್, ಕಲ್ಲಿಕೋಟೆ, ಕಣ್ಣೂರ್, ಕಾಸರಗೂಡು, ಮಲಪ್ಪುರಂ, ಪಾಲಕ್ಕಾಡ್, ಇಡುಕ್ಕಿ ಹಾಗೂ ಎರ್ನಾಕುಲಂನಲ್ಲಿ ಆಗಸ್ಟ್ 16ರ ವರೆಗೂ ಎಚ್ಚರ ವಹಿಸುವಂತೆ ಸೂಚಿಸಲಾಗಿದೆ. ಅನೇಕ ಭಾಗಗಳಲ್ಲಿ ನೀರಿನ ಮಟ್ಟದಲ್ಲಿ ಏರಿಕೆಯಿಂದಾಗಿ ಸೇತುಗಳು ಮುಳುಗಡೆಯಾಗಿವೆ ಹಾಗೂ ಕೊಚ್ಚಿ ಹೋಗಿದ್ದು ರೈಲ್ವೆ ಸಂಚಾರ ವ್ಯತ್ಯಯಗೊಂಡಿದೆ. ತಿರುವನಂತಪುರಂ–ಕನ್ಯಾಕುಮಾರಿ ಮಾರ್ಗ ಸೇರಿ ಹಲವು ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ