ಕಳೆದ ಸ್ವಾತಂತ್ರೋತ್ಸವದ ದಿನ ಅಸ್ಸಾಂ ಪ್ರವಾಹದಿಂದ ತತ್ತರಿಸಿತ್ತು. ಇನ್ನು ಧುಬ್ರಿ ಜಿಲ್ಲೆಯ ಬರ್ ಕಾಲಿಯಾ ನಕ್ಸರಾ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯೊಂದರ ಮುಖ್ಯೋಪಾಧ್ಯಾಯ ತಾಜೆನ್ ಸಿಕ್ ದೆರ್, ಸಹಾಯಕ ಶಿಕ್ಷಕ ನೃಪೆನ್ ರಬ್ಬಾ ಹಾಗೂ ಇಬ್ಬರು ಪುಟಾಣಿ ಮಕ್ಕಳು ಪ್ರವಾಹದ ನೀರು ಎದೆಮಟ್ಟಕ್ಕೆ ಬಂದಿದ್ದರೂ ಧೃತಿಗೆಡದೆ ರಾಷ್ಟ್ರಧ್ವಜಕ್ಕೆ ವಂದನೆ ಸಲ್ಲಿಸಿದ್ದರು. ಈ ಚಿತ್ರದಲ್ಲಿನ ಒಬ್ಬ ಬಾಲಕನ ಹೆಸರು ಎನ್‌ಆರ್‌ಸಿ ಪಟ್ಟಿಯಲ್ಲಿಲ್ಲ ಎಂದು ವರದಿಯಾಗಿದೆ.