ಕೇರಳ ಪ್ರವಾಹ: ಒಂದೇ ದಿನದಲ್ಲಿ 29 ಸಾವು, 67ಕ್ಕೇರಿದ ಸಾವಿನ ಸಂಖ್ಯೆ

ಕೇರಳದಲ್ಲಿ ಮುಂಗಾರು ಆರ್ಭಟದ ಮರಣ ಮೃದಂಗ ಮುಂದುವರೆದಿದ್ದು, ಬುಧವಾರ ಒಂದೇ ದಿನ 29 ಮಂದಿ ಸಾವನ್ನಪ್ಪುವ ಮೂಲಕ ಒಟ್ಟಾರೆ ಸಾವಿನ ಸಂಖ್ಯೆ 67ಕ್ಕೆ ಏರಿಕೆಯಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಕೊಚ್ಚಿ: ಕೇರಳದಲ್ಲಿ ಮುಂಗಾರು ಆರ್ಭಟದ ಮರಣ ಮೃದಂಗ ಮುಂದುವರೆದಿದ್ದು, ಬುಧವಾರ ಒಂದೇ ದಿನ 29 ಮಂದಿ ಸಾವನ್ನಪ್ಪುವ ಮೂಲಕ ಒಟ್ಟಾರೆ ಸಾವಿನ ಸಂಖ್ಯೆ 67ಕ್ಕೆ ಏರಿಕೆಯಾಗಿದೆ.
ಬುಧವಾರ ಮಲಪ್ಪುರಂನಲ್ಲಿ ಸಂಭವಿಸಿದ ಭೀಕರ ಭೂಕುಸಿತದಿಂದಾಗಿ ಒಟ್ಟು 11 ಮಂದಿ ಸಾವಿಗೀಡಾಗಿದಿದ್ದಾರೆ. ಕಂಜೂರಿನಲ್ಲಿ ಮಂಗಳವಾರ ಐದು ಮಂದಿ ಮೃತಪಟ್ಟಿದ್ದರು. ಅಂತೆಯೇ ವಿವಿಧೆಡೆ ಸಂಭವಿಸಿದ ದುರಂತಗಳಲ್ಲಿ 9 ಮಂದಿ ಸಾವಿಗೀಡಾಗಿದ್ದು, ಒಟ್ಟಾರೆ ಕೇರಳ ಪ್ರವಾಹದಲ್ಲಿ ಈ ವರೆಗೂ ಬಲಿಯಾದವರ ಸಂಖ್ಯೆ 67ಕ್ಕೆ ಏರಿಕೆಯಾದಂತಾಗಿದೆ. 
ಆತಂಕದ ವಿಚಾರವೆಂದರೆ ಈಗಾಗಲೇ ಕೇರಳದ ನದಿಗಳು ಉಕ್ಕಿ ಹರಿಯುತ್ತಿದ್ದು, ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇದರ ನಡುವೆಯೇ ಮುಂದಿನ ನಾಲ್ಕು ದಿನಗಳವರೆಗೆ ಭಾರಿ ಮಳೆ ಸುರಿಯುವುದಾಗಿ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಇಡೀ ರಾಜ್ಯದಾದ್ಯಂತ ಕಟ್ಟೆಚ್ಚರ (ರೆಡ್‌ ಅಲರ್ಟ್‌) ಘೋಷಿಸಲಾಗಿದೆ.
ತುರ್ತು ಸಭೆ ನಡೆಸಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌, ಪರಿಸ್ಥಿತಿ ನಿಭಾಯಿಸಲು ಸನ್ನದ್ಧ ಸ್ಥಿತಿಯಲ್ಲಿರುವಂತೆ ಎಲ್ಲ ಇಲಾಖೆಗಳಿಗೆ ಸೂಚನೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com