ಪಾಕಿಸ್ತಾನದಲ್ಲಿ ಸರ್ಕಾರ ರಚಿಸಲು ಬೇಕಾಗಿರುವ ಮ್ಯಾಜಿಕ್ ನಂಬರ್ 172. ಆದರೆ ಕಳೆದ ಜುಲೈ 25ರಂದು ನಡೆದ ಸಾರ್ವತಿಕ್ರ ಚುನಾವಣೆಯಲ್ಲಿ ಪಿಟಿಐ 116 ಸ್ಥಾನಗಳನ್ನು ಪಡೆದಿದ್ದು, ಮಹಿಳಾ ಮತ್ತು ಅಲ್ಪ ಸಂಖ್ಯಾತ ಮೀಸಲು ಪರಿಶೀಲಿಸಿದ ಬಳಿಕ ಪಿಟಿಐ ನ್ಯಾಷನಲ್ ಅಸೆಂಬ್ಲಿಯಲ್ಲಿ 158 ಸ್ಥಾನ ಹೊಂದಿದೆ ಎಂದು ಆಗಸ್ಟ್ 11ರಂದು ಪಾಕಿಸ್ತಾನ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿತ್ತು.