ನೇತಾಜಿ ಅವಶೇಷಗಳನ್ನು ಭಾರತಕ್ಕೆ ತರುವಂತೆ ಕೇಂದ್ರಕ್ಕೆ ಅನಿತಾ ಬೋಸ್ ಮನವಿ

ಮ್ಮ ತಂದೆಯ ಮರಣದ ಅವಶೇಷಗಳನ್ನು ಭಾರತಕ್ಕೆ ತರುವಂತೆ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪುತ್ರಿ ಅನಿತಾ ಬೋಸ್ ಭಾರತ ಸರ್ಕಾರಕ್ಕೆ ಮನವಿ ...
ನೇತಾಜಿ ಸುಭಾಷ್ ಚಂದ್ರ ಬೋಸ್
ನೇತಾಜಿ ಸುಭಾಷ್ ಚಂದ್ರ ಬೋಸ್
ನವದೆಹಲಿ: ತಮ್ಮ ತಂದೆಯ ಮರಣದ ಅವಶೇಷಗಳನ್ನು ಭಾರತಕ್ಕೆ ತರುವಂತೆ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪುತ್ರಿ ಅನಿತಾ ಬೋಸ್ ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
1945ರ ಆಗಸ್ಟ್ 18 ರಂದು ತೈವಾನ್ ನಲ್ಲಿ ನಡೆದ ವಿಮಾನ ಅಪಘಾತದಲ್ಲಿ ನೇತಾಜಿ ಸಾವನ್ನಪ್ಪಿದರು, ಅವರ ಅವಶೇಷಗಳನ್ನು ಟೋಕಿಯೋದಲ್ಲಿರುವ ರೆಂಕೋಜಿ ದೇವಾಲಯದಲ್ಲಿರಿಸಲಾಗಿದೆ,
ತಮ್ಮ ತಂದೆ ಸಾವನ್ನಪ್ಪಿ 73 ವರ್ಷಗಳಾಯಿತು, ಅವರ ಅವಶೇಷಗಳನ್ನು ಭಾರತಕ್ಕೆ ಮರಳಿಸುವಂತೆ ತಾವು ಕೇಂದ್ರ ಸರ್ಕಾರ ಹಾಗೂ ಜಪಾನ್ ಸರ್ಕಾರದ ಬಳಿ ಮನವಿ ಮಾಡುತ್ತಿರುವುದಾಗಿ ಅವರು ತಿಳಿಸಿದ್ದಾರೆ.
ತಾವು  ಸ್ವತಂತ್ರ್ಯ.ಭಾರತಕ್ಕೆ ಬರಬೇಕೆಂಬುದು ತಮ್ಮ ತಂದೆಯ ಕನಸಾಗಿತ್ತು, ಆದರೆ ದುರಾದೃಷ್ಟವಶಾತ್ ಅವರ ಆಸೆ ಈಡೇರಲಿಲ್ಲ,  ಕೊನೆ ಪಕ್ಷ ಅವರ ಅವಶೇಷಗಳಾದರೂ ಸ್ವತಂತ್ರ್ಯ ಭಾರಕದ ಮಣ್ಣನ್ನು ಸ್ಪರ್ಷಿಸಲಿ, ನಮ್ಮ ತಂದೆ ಹಿಂದು,  ಅವರ ಚಿತಾಭಸ್ಮವನ್ನು ಗಂಗಾ ನದಿಯಲ್ಲಿ ವಿಸರ್ಜಿಸಬೇಕು ಎಂದು ಅನಿತಾ ಬೋಸ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com